Breaking
Mon. Dec 23rd, 2024

ಕಾಶಿ ವಿಶ್ವನಾಥ ದೇವಾಲಯಕ್ಕೆ ಅರ್ಚಕರ ನೇಮಕಾತಿ ಅತಿ ಶೀಘ್ರದಲ್ಲಿ

ಕಾಶಿ  ನಗರವು ಪವಿತ್ರ ಗಂಗೆಯ ದಡದಲ್ಲಿದೆ. ಈ ಕಾಶಿ ವಿಶ್ವನಾಥ ದೇವಾಲಯವು ಭಕ್ತರಿಗೆ ವಿಶೇಷವಾಗಿದೆ. ಭಾರತದಿಂದ ಮಾತ್ರವಲ್ಲದೆ ಪ್ರಪಂಚದಾದ್ಯಂತ ಮಹಾದೇವನನ್ನು ನೋಡಲು ಜನರು ಇಲ್ಲಿಗೆ ಬರುತ್ತಾರೆ ಕಾಶಿ ಹಿಂದೂ ಧರ್ಮದಲ್ಲಿ ಅತ್ಯಂತ ಪುಣ್ಯ ಸ್ಥಳವಾಗಿದೆ ಶಿವನ 12 ಜ್ಯೋತಿರ್ಲಿಂಗಗಳಲ್ಲಿ ಒಂದಾದ ಕಾಶಿ ಬನರಾಸ್  ವಾರಣಾಸಿ ಹೆಸರಿನಿಂದಲೂ ಕರೆಯುತ್ತಾರೆ.

ವಾರಣಾಸಿಯನ್ನು ಮೋಕ್ಷ ಸ್ಥಳ ವೆಂದು ಕರೆಯುತ್ತಾರೆ ಜೀವನದಲ್ಲಿ ಅಂತ್ಯಕಾಲದಲ್ಲಿರುವ  ವ್ಯಕ್ತಿಯ ಕಿವಿ ಮಾತಿನಲ್ಲಿ ಮಹಾದೇವನೇ ತಾರಕ ಮಂತ್ರವನ್ನು ಪಠಿಸುತ್ತಾನೆ  ಎಂಬ ಪ್ರತೀತಿಯೂ ಇದೆ.

ಇದೀಗ ಹೊರ ಬಂದಿರುವ ವಿಶೇಷ ವಿಷಯವೇನೆಂದರೆ ಕಾಶಿ ವಿಶ್ವನಾಥ ದೇವಾಲಯದಲ್ಲಿ 50 ಅರ್ಚಕರನ್ನು ನೇಮಕ ಮಾಡಲು ಸರ್ಕಾರವು ಆದೇಶಿಸಿದೆ ಇವರಿಗೆ ಪರೀಕ್ಷೆಯ ಮುಖಾಂತರ ಆಯ್ಕೆ ಮಾಡಬೇಕು ಎಂದು ಹೇಳಲಾಗುತ್ತಿದೆ.

ಹಿರಿಯ ಅರ್ಚಕರು 10, ಹಿರಿಯ ಅರ್ಚಕರು 15, ಮತ್ತು ಸಹಾಯಕ ಅರ್ಚಕರು 25 ಜನ ಎಂಬಂತೆ ಮತ್ತು ಇನ್ನುಳಿದ 40 ಜನ ಅರ್ಚಕರನ್ನು ನೇರವಾಗಿ ಆಯ್ಕೆ ಮಾಡಲಾಗುತ್ತದೆ. ಕಾಶಿ ವಿಶ್ವನಾಥ ದೇವಾಲಯದಲ್ಲಿ ಅರ್ಚಕರಾಗಲು ಸಂಸ್ಕೃತದಲ್ಲಿ ಪದವಿ ಹೊಂದಿರಬೇಕು. ಇಲ್ಲವೇ ಶಾಸ್ತ್ರಿ ಪದವಿ ಪಡೆದಿರಬೇಕು.

ಅಭ್ಯರ್ಥಿಯು ಷೋಡಶೋಪಚಾರ ವಿಧಾನ, ಮಂತ್ರ ಪಠಣ ಪೂಜಾ ವಿಧಾನ ರುದ್ರಾಷ್ಟಾಧ್ಯಾಯಿಯ ಪಠ್ಯವನ್ನು ಕಂಠಪಾಠ ಮಾಡಿರಬೇಕು. ಇದಲ್ಲದೇ ಸಂಸ್ಕೃತ ಮಾತನಾಡುವುದನ್ನು ಕಡ್ಡಾಯಗೊಳಿಸಲಾಗಿದೆ.

ದೇವಸ್ಥಾನದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿಶ್ವಭೂಷಣ ಮಿಶ್ರಾ ಮಾತನಾಡಿ, ಹಿರಿಯ ಅರ್ಚಕರಿಗೆ 90 ಸಾವಿರ ರೂ., ಕಿರಿಯ ಅರ್ಚಕರಿಗೆ 70 ಸಾವಿರ ರೂ., ಸಹಾಯಕ ಅರ್ಚಕರಿಗೆ 45 ಸಾವಿರ ರೂ. ಗೌರವಧನ ನೀಡಲಾಗುವುದು. ಇದಲ್ಲದೇ ಅವರ ಸಂಬಳವನ್ನು ಕಾಲಕ್ಕೆ ತಕ್ಕಂತೆ ಹೆಚ್ಚಿಸಲಾಗುವುದು ಎಂದು ತಿಳಿಸಿದ್ದಾರೆ.

ಕಾಶಿ ವಿಶ್ವನಾಥ ದೇವಾಲಯದ ಅರ್ಚಕರಾಗಲು ಆದಿ ಸೂಚನೆ ಹೊರಡಿಸಿದ ನಂತರ  ಅರ್ಜಿ ಸಲ್ಲಿಸಲು ತಿಳಿಸಲಾಗುವುದು .ಹೆಚ್ಚಿನ ಮಾಹಿತಿಗಾಗಿ ಕಾಶಿ ವಿಶ್ವನಾಥ ದೇವಾಲಯ ಟ್ರಸ್ಟ್ ಇವರಿಗೆ ಸಂಪರ್ಕಿಸಿ. ಅತಿ  ಶೀಘ್ರದಲ್ಲೇ ಹೊಸ ಅರ್ಚಕರನ್ನು ನೇಮಕ ಮಾಡಲಾಗುವ ಕುರಿತು ಮಾಹಿತಿ ಹೊರಬಿದ್ದಿದೆ. ಫೆಬ್ರವರಿ ಕೊನೆಯ ವಾರದೊಳಗೆ ಈ ಕುರಿತ ಸರ್ಕಾರಿ ಆದೇಶವೂ ಹೊರಬೀಳಬಹುದು ಎಂದು ಹೇಳಲಾಗಿದೆ.

Related Post

Leave a Reply

Your email address will not be published. Required fields are marked *