ಶಿವಮೊಗ್ಗ : ರಾಜ್ಯದಲ್ಲಿ ಪತ್ರಿಕಾ ವಿತರಕ ಸಮುದಾಯಗಳಿಗೆ ಸಮುದಾಯ ಭವನ ನಿವೇಶನ ನಿರ್ಮಾಣ ಪತ್ರಿಕಾ ವಿತರಕ ನಿಧಿ ಸ್ಥಾಪನೆಗೆ ಹಲವಾರು ಬೇಡಿಕೆಗಳನ್ನು ಸಲ್ಲಿಸುವಂತೆ ಘಟಕದಿಂದ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಜಿಲ್ಲಾ ಜಿಲ್ಲಾ ಮನವಿ ಸಲ್ಲಿಸಲಾಯಿತು.
ಕನ್ನಡ ರಾಜ್ಯೋತ್ಸವ ಪ್ರಶಸ್ತಿಯಲ್ಲಿ ಪತ್ರಿಕಾ ವಿತರಕರಿಗೆ ನೀಡಬೇಕೆಂದು ಮತ್ತು ಅಪಘಾತ ವಿಮೆಯನ್ನು ಘೋಷಿಸಬೇಕು ಇನ್ನು ಉಳಿದ ಸಮಸ್ಯೆಗಳನ್ನು ಪರಿಹರಿಸಿ ಈ ಬಾರಿಯ ಬಜೆಟ್ ಅಧಿವೇಶನದಲ್ಲಿ ವಿತರಕರಿಗೆ ಕನಿಷ್ಠ 5 ಕೋಟಿ ರೂಪಾಯಿಗಳ ಕ್ಷೇಮಾಭಿವೃದ್ಧಿ ನಿಧಿ ಸ್ಥಾಪಿಸಬೇಕು.
ಪತ್ರಿಕಾ ವಿತರಕರಿಗೆ ಮನೆ ನಿರ್ಮಾಣ ಮಾಡಿಕೊಡಬೇಕು. ಇದರ ಜೊತೆಗೆ ಪತ್ರಿಕ ವಿತರಕರಿಗೆ ಯಾವುದೇ ರೀತಿಯ ವಿಮಾ ಯೋಜನೆ ಇಲ್ಲದೆ ಇರುವುದು ವಿಪರ್ಯಾಸವೇ ಸರಿ. ಪ್ರತಿದಿನ ಬೆಳಗಿನ ಜಾವದಿಂದ ಎಲ್ಲರ ಮನೆಮನೆಗೂ ಸುದ್ದಿಯನ್ನು ತಲುಪಿಸುವ ಕಾರ್ಯ ಈ ಪತ್ರಿಕಾ ವಿತರಕರಿಂದ ನಡೆಯುತ್ತಿರುವ ಅವರಿಗೆ ಯಾವುದೇ ಭದ್ರತೆ ಇರುವುದಿಲ್ಲ.
ಪತ್ರಿಕಾ ವಿತರಕರು ಇಂತಿಷ್ಟು ಹಣಕ್ಕಾಗಿ ಮಾತ್ರ ಕೆಲಸ ಮುಂದುವರಿಯುತ್ತದೆ ಇವರಿಗೆ ಸರ್ಕಾರದಿಂದ ಯಾವುದೇ ಸೌಲಭ್ಯಗಳು ದೊರೆಯುತ್ತಿಲ್ಲ . ಆದ್ದರಿಂದ ನಮ್ಮ ಮನವಿಯನ್ನು ಕೂಡಲೇ ಕೈಗೆ ತೆಗೆದುಕೊಳ್ಳಬೇಕು ಈ ಬಾರಿಯಾದರೂ ವಿತರಕರಿಗೆ ಸೌಲಭ್ಯವನ್ನು ಕಲ್ಪಿಸಿ ಕೊಡಬೇಕು.
ಈ ಕಾರ್ಯಕ್ರಮದಲ್ಲಿ ಜಿಲ್ಲಾ ಪತ್ರಿಕಾ ವಿತರಕ ಸಂಘದ ಅಧ್ಯಕ್ಷರು ಎನ್ ಮಾಲತೇಶ್ ಕಾರ್ಯದರ್ಶಿ ಮುಕ್ತಾರ್ ಮಹಾಮದ್ ಪರಶುರಾಮ್ ಅಜಾದುಲ್ಲಾ ಪ್ರಾಣೇಶ್ ಮಲ್ಲಿಕಾರ್ಜುನ್ ಸೋಮಶೇಖರ್ ಸೇರಿದಂತೆ ಮುಂತಾದವರು ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.