ಬೆಂಗಳೂರು : ಸುಂಕದಕಟ್ಟೆ ಪೈಪ್ ಲೈನ್ ಬಳಿ ನಡೆದ ಘಟನೆ ಇದಾಗಿದೆ. ಸ್ನೇಹಿತನಿಂದ ಸಾಲ ಪಡೆದ ಹಣ ವಾಪಸ್ ನೀಡಿದ್ದಕ್ಕೆ ವ್ಯಕ್ತಿಯೋರ್ವ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ನಂಜುಂಡಸ್ವಾಮಿ 40ವರ್ಷ ಆತ್ಮಹತ್ಯೆ ಮಾಡಿಕೊಂಡ ಮೃತ ದುರ್ದೈವಿ. ಈತನು ಡೆತ್ ನೋಟ್ ನಲ್ಲಿ ಸ್ನೇಹಿತನಿಂದ ಹಣ ಪಡೆದಿದ್ದಾಗಿ ಉಲ್ಲೇಖಿಸಲಾಗಿದೆ. ಆತನು ಮಾಡಿದ ಸಾಲಕ್ಕೆ ಹಿಂತಿರುಗಿಸಲು ಸತಾಯಿಸುತ್ತಿದ್ದಾನೆ .
ಇದರಿಂದ ಮನನೊಂದು ನಂಜುಂಡಸ್ವಾಮಿ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಈ ಕುರಿತು ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.