ಬೆಂಗಳೂರು : ರವಿಕಿರಣ್ ವಿರುದ್ಧ ಕ್ಲಬ್ ನಲ್ಲಿ ಅವ್ಯವಹಾರ ಆರೋಪ ಎದುರಾಗಿದ್ದು ಕ್ಲಬ್ ನ ಸದಸ್ಯರು ದೂರ ನೀಡಿದ ಹಿನ್ನೆಲೆಯಲ್ಲಿ ಸುಬ್ರಹ್ಮಣ್ಯಪುರ ಪೊಲೀಸರು ಪರಿಶೀಲನೆ ನಡೆಸಿದ್ದಾರೆ ಸಮಸ್ಯೆ ಬಗೆಹರಿಸಿಕೊಳ್ಳಿ ಎಂದು ಇನ್ಸ್ಪೆಕ್ಟರ್ ಅರ್ಜುನ್ ಮನವರಿಕೆ ಮಾಡಿದ್ದಾರೆ ಅವರ ಮಾತು ಒಪ್ಪಿ ಸದಸ್ಯರು ತೆರಳಿರುವುದಾಗಿ ಪೊಲೀಸರಿಂದ ಮಾಹಿತಿ ಬಂದಿದೆ.
ಕಿರುತೆರೆ ನಟ ರವಿಕಿರಣ್ ಅವರು ಟೆಲಿವಿಷನ್ ಕಲ್ಚರ್ ಹ್ಯಾಂಡ್ ಸ್ಪೋರ್ಟ್ಸ್ ಕ್ಲಬ್ ನಲ್ಲಿ ಅವ್ಯವಹಾರ ಎಸಗಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಇದಕ್ಕೆ ಸಂಬಂಧಿಸಿದಂತೆ ಸರ್ಕಾರ ಕೊಟ್ಟ ಅನುದಾನದಲ್ಲಿ ಕ್ಲಬ್ ನಿರ್ಮಾಣ ಮಾಡಿದ್ದೇವೆ.
ಕ್ಲಬ್ ನಲ್ಲಿ ಕಿರುತೆರೆ ಕಲಾವಿದರು ಇದ್ದಾರೆ ಕ್ಲಬ್ ಆರಂಭದಿಂದಲೂ ಕಿರಣ್ ಕಾರ್ಯದರ್ಶಿ ಆಗಿದ್ದಾರೆ ಜಿ ಎಸ್ ಟಿ ಬಿ ಎಂ ಪಿ ಟ್ಯಾಕ್ಸ್ ಸೇರಿ ಯಾವುದೇ ಪಾವತಿ ಮಾಡಿಲ್ಲ ಹಣವನ್ನು ಪಾವತಿಸದೆ ಅದರ ಹೆಸರಿನಲ್ಲಿ ಕ್ಲಬ್ ಸದಸ್ಯರಿಂದ ವಸೂಲಿ ಮಾಡಿದ್ದಾರೆ ಎಂದು ಸದಸ್ಯರು ಆರೋಪಿಸಿದ್ದರು.
ಹಲವು ವರ್ಷಗಳಿಂದ ರವಿಕಿರಣ್ ಅವರು ಬಣ್ಣದ ಲೋಕದಲ್ಲಿ ಸಕ್ರಿಯ ರಾಗಿದ್ದಾರೆ ಕಲಾವಿದರು ಕುಟುಂಬದಲ್ಲಿ ಬಂದವರಿಗೆ ಚಿಕ್ಕ ವಯಸ್ಸಿನಲ್ಲಿಯೇ ನಟನೆಯ ಬಗ್ಗೆ ಆಸಕ್ತಿ ಮೂಡಿತ್ತು.
ಹೀಗಾಗಿ ಕಿರುತೆರೆಯ ಅನೇಕ ಧಾರಾವಾಹಿಗಳಲ್ಲಿ ನಟಿಸಿ ನಿರ್ದೇಶನವನ್ನು ಮಾಡಿದ್ದಾರೆ ಕಿರುತೆರೆಯಲ್ಲಿ ಅವರ ಅಪಾರ ಅನುಭವ ಪಡೆದಿದ್ದಾರೆ ಈಗ ಟೆಲಿವಿಷನ್ ಕಲ್ಚರ್ ಹ್ಯಾಂಡ್ ಸ್ಪೋರ್ಟ್ಸ್ ಕ್ಲಬ್ ವಿಚಾರದ ಮೇಲೆ ಆರೋಪ ಎದುರಾಗಿದೆ.