ಬೆಂಗಳೂರು : ಇಂದು ಟ್ವಿಟರ್ ಲೈವ್ ನಲ್ಲಿ” ನನ್ನ ತೆರಿಗೆ ನನ್ನ ಹಕ್ಕು” ಅಭಿಯಾನದ ಬಗ್ಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ ಮೋದಿ ವಿರುದ್ಧ ಕಿಡಿಕಾರಿದ್ದಾರೆ.
ಕಾರ್ಪೊರೇಟ್ ಕಂಪನಿಗಳ ಮೇಲಿನ ತೆರಿಗೆ ಪ್ರಮಾಣ ಶೇಕಡ 25.5ಕ್ಕೆ ಇಳಿಸಲಾಗಿದೆ ಇದು ಜನಸಾಮಾನ್ಯರ ಮೇಲೆ ತೆರಿಗೆ ಪ್ರಮಾಣ ಹೆಚ್ಚು ಮಾಡಿದ್ದಾರೆ.
ಸಾಮಾನ್ಯರಿಂದ ತೆರಿಗೆ ಹೊಸಳ್ಳಿ ಹೆಚ್ಚು ಮಾಡುತ್ತಲೇ ಹೋಗಿದ್ದಾರೆ ನಮ್ಮ ಸಂಸದರು ದೆಹಲಿಯಲ್ಲಿ ಈ ಅನ್ಯಾಯವನ್ನು ಪ್ರಶ್ನಿಸುವುದಿಲ್ಲ.
ಸಾಮಾನ್ಯ ಜನರ ಖರ್ಚಿನ ಮೇಲೆ ಹಾಕುವ ಜಿಎಸ್ಟಿ ಪ್ರಮಾಣ ಕಡಿಮೆ ಮಾಡಿ ಶ್ರೀಮಂತರು ಬಳಸುವ ಐಶ್ವರ್ಯ ವಸ್ತುಗಳ ಮೇಲೆ ಜಿ.ಎಸ್.ಟಿ .ಹೆಚ್ಚಿಸಬೇಕು ನಮ್ಮ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯ ಅರ್ಥ ಮಾಡಿಕೊಳ್ಳಬೇಕು ಮೋದಿ ಗುಜರಾತ್ ಸಿಎಂ ಆಗಿದ್ದಾಗ ಶೇಕಡ 50 ಪರ್ಸೆಂಟ್ ತೆರಿಗೆ ಪಾಲು ಕೊಡಿ ಎಂದಿದ್ದರು.
ರಾಜ್ಯಗಳು ಬಿಕ್ಷುಕರಾ ಎಂದು ನರೇಂದ್ರ ಮೋದಿ ಅವರು ಕೇಳಿದ್ದರು. ಕೇಂದ್ರ ಸರ್ಕಾರಕ್ಕೆ ಒಂದು ರೂಪಾಯಿ ತೆರಿಗೆಯನ್ನು ಕೊಡುವುದಿಲ್ಲ, ಎಲ್ಲವನ್ನು ರಾಜ್ಯವೇ ಇಟ್ಟುಕೊಳ್ಳುತ್ತವೆ,ಎಂದು ಇದೇ ಮೋದಿಯವರು ಹೇಳಿದರು. ನರೇಂದ್ರ ಮೋದಿ ಪ್ರಧಾನಿಯಾದ ಮೇಲೆ ಉಲ್ಟಾ ಮಾಡುತ್ತಿದ್ದಾರೆ ಎಂದು ವಾಗ್ವಾದ ಮಾಡಿದ್ದಾರೆ.
ನಾವು ಪ್ರಜಾಪ್ರಭುತ್ವದ ಮತ್ತು ಒಕ್ಕೂಟ ವ್ಯವಸ್ಥೆಯನ್ನು ಒಪ್ಪಿಕೊಂಡ ಮೇಲೆ ಸೇನಾ ಮಾದರಿ ಏಕಸೌಮ್ಯವನ್ನು ಸಹಿ ಸಹಿಸಲು ಅಮೆರಿಕದ ಅಧ್ಯಕ್ಷೀಯ ಮಾದರಿ ಆಡಳಿತವನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ.
ಅತಿ ಹೆಚ್ಚು ತೆರಿಗೆ ಕಟ್ಟುವ ನಮ್ಮ ರಾಜ್ಯಕ್ಕೆ ಅನ್ಯಾಯ ಆಗದಂತೆ ತಡೆಯಲು ಸಂವಿಧಾನ ತಿದ್ದುಪಡಿ ಮಾಡಿ ಸೆಂಡ್ ಮತ್ತು ಸರ್ ಚಾರ್ಜ್ ನಲ್ಲೂ ನಮಗೆ ಪಾಲು ಕೊಡಬೇಕೆಂದು ಒತ್ತಾಯಿಸಿದ್ದಾರೆ.
ರಾಜ್ಯವನ್ನು ಪ್ರತಿನಿಧಿಸುವ ಕೇಂದ್ರ ಮಂತ್ರಿಗಳು ನಮ್ಮ ಸಂಸದರು ನಮ್ಮ ನಮಗಾಗುತ್ತಿರುವ ಅನ್ಯಾಯ ವಿರುದ್ಧ ಬಾಯಿ ಬಿಡದೆ ಅನ್ಯಾಯವನ್ನು ಸಮರ್ಥಿಸುತ್ತಿದ್ದಾರೆ ರಾಜ್ಯದ ಭವಿಷ್ಯದ ಗತಿ ಏನೆಂದು ಪ್ರಶ್ನಿಸಿದ್ದಾರೆ .