ಚಂಡೀಗಢ : ಕೇಂದ್ರ ಸರ್ಕಾರ ನಾಳೆ ಚಂಡೀಗಢದಲ್ಲಿ ರೈತರೊಂದಿಗೆ ಸಭೆ ನಡೆಸಲಿದ್ದು ಪ್ರತಿಭಟನಾಕಾರರು ತಾಳ್ಮೆಯಿಂದ ಇರುತ್ತಾರೆ. ಅಲ್ಲಿಯವರೆಗೆ ವಿವಿಧ ಗಡಿಗಳಲ್ಲಿನ ಬ್ಯಾರಿಕೆಟ್ ಗಳು ಮತ್ತು ಇತರರ ತಡೆಗಳನ್ನು ಪ್ರಯತ್ನಿಸುವುದಿಲ್ಲ ಎಂದು ರೈತ ಮುಖಂಡರು ತಿಳಿಸಿದ್ದಾರೆ.
ಚಂಡೀಗಢದಲ್ಲಿ ಬುಧವಾರ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿ ನಂತರ ರೈತ ಮುಖಂಡರನ ಸರ್ವಾನ್ ಸಿಂಗ್ ಪಂಧೇರ್ ಕೇಂದ್ರ ಕೃಷಿ ಸಚಿವ ಅರ್ಜುನ್ ಮುಂಡ ಮತ್ತು ಇತರ ಇಬ್ಬರು ಕೇಂದ್ರ ಸಚಿವ ರಾದ ಪಿಯೂಷ್ ಗೋಯಲ್ ಮತ್ತು ನಿತ್ಯಾನಂದ ರಾಯ್ ಅವರು ನಗರದಲ್ಲಿ ಪ್ರತಿಭಟನೆ ನಿರತ ರೈತರ ಪ್ರತಿನಿಧಿಗಳನ್ನು ಗುರುವಾರ ಸಂಜೆ 5:00 ಗಂಟೆಗೆ ಭೇಟಿ ಮಾಡಲಿದ್ದಾರೆ ಎಂದು ಹೇಳಿದ್ದಾರೆ.
ಗೋಯಲ್ ಅವರು ಆಹಾರ ಮತ್ತು ಸಾರ್ವಜನಿಕ ವಿತರಣ ಖಾತೆಯನ್ನು ಹೊಂದಿದ್ದು ರಾಯ ಅವರು ಗೃಹ ಖಾತೆ ಸಚಿವರಾಗಿದ್ದಾರೆ.
ಕಳೆದ ರಾತ್ರಿ ನಮಗೆ ಬಂದ ಸಂದೇಶ ಮತ್ತು ಕೇಂದ್ರ ಸಚಿವ ಅನುರಾಗ ಠಾಕೂರ್ ಸಂವೇದಕ್ಕೆ ಕರೆದ ಆದರದ ಮೇಲೆ ನಾವು ಚಳುವಳಿಯಲ್ಲಿ ಎಲ್ಲರೊಂದಿಗೆ ಮಾತನಾಡುತ್ತೇವೆ ನಾವು ಇಂದು ಶಾಂತಿಯಿಂದಿರಲು ನಿರ್ಧರಿಸಿದ್ದೇವೆ ನಾವಿದ್ದ ಸ್ಥಳದಿಂದ ಮುಂದೆ ಹೋಗಲು ಪ್ರಯತ್ನಿಸುವುದಿಲ್ಲ ಎಂದು ನಿರ್ಧರಿಸಿದ್ದೇವೆ. ನಾಳೆ ಸಂಜೆ 5:00ಗೆ ಸಭೆ ಕರೆಯಲಾಗಿದೆ. ನಾವು ನಮ್ಮ ಶಾಂತಿಯುತ ಪ್ರತಿಭಟನೆಯನ್ನು ಮುಂದುವರಿಸುತ್ತೇವೆ. ಅಲ್ಲಿಯವರೆಗೆ ನಮ್ಮ ಕಡೆಯಿಂದ ಯಾವುದೇ ಕ್ರಮ ತೆಗೆದುಕೊಳ್ಳುವುದಿಲ್ಲ ಎಂದಿದ್ದಾರೆ.
ನಾವು ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಈ ಬಗ್ಗೆ ಚರ್ಚಿಸಬೇಕು. ರೈತರು ಸಹಜ ಜೀವನಕ್ಕೆ ಅಡ್ಡಿಯಾಗದಂತೆ ನೋಡಿಕೊಳ್ಳಬೇಕು. ಸಾಮಾನ್ಯ ಜನರಿಗೆ ಅನುಕೂಲತೆಯನ್ನು ಉಂಟು ಮಾಡುವ ಯಾವುದನ್ನಾದರೂ ಮಾಡುವುದರಿಂದ ಯಾವುದೇ ಪರಿಹಾರ ಕಂಡುಹಿಡಿಯಲಾಗುವುದಿಲ್ಲ ಎಂದು ನಾವು ಭಾವಿಸಿದ್ದೇವೆ.