ನಟ ನಿರ್ದೇಶಕ ಉಪೇಂದ್ರ ಅವರು ಯುಐ ಸಿನಿಮಾದ ಕೆಲಸಗಳಲ್ಲಿ ಬಿಜಿಯಾಗಿದ್ದಾರೆ ಈ ಸಿನಿಮಾದಲ್ಲಿ ಅವರು ನಟಿಸುವುದರ ಜೊತೆಗೆ ನಿರ್ದೇಶನ ಕೂಡ ಮಾಡುವುದರಿಂದ ಬಾರಿ ನಿರೀಕ್ಷೆ ಸೃಷ್ಟಿಸಿದೆ.
ಉಪೇಂದ್ರ ಅವರು ಬರೆಯುವ ಹಾಡುಗಳೆಂದರೆ ಅಭಿಮಾನಿಗಳಿಗೆ ತುಂಬಾ ಇಷ್ಟ ಈಗ ಅವರ ಯುಐ ಸಿನಿಮಾದ ಮೊದಲ ಹಾಡಿನ ಝಲಕ್ ತೋರಿಸಿದ್ದಾರೆ.
ಇದು ಚೀಪ್ ಸಾಂಗ್ ಅಂದರೆ ಹಾಡಿನ ಕ್ವಾಲಿಟಿ ಆಗಿದೆ ಅಂತಲ್ಲ ಅದರ ಹೆಸರೇ ಚಿಪ್ ಸಾಂಗ್ ಇದರಲ್ಲಿ ಸಾಹಿತ್ಯ ಕೇಳಿದೆ ಎಲ್ಲರಿಗೂ ಅಚ್ಚರಿಯಾಗುತ್ತದೆ ಲಹರಿ ಫಿಲಂಸ್ ಅವರ ಹಾಡಿನ ಪ್ರೋಮೋ ಬಿಡುಗಡೆಯಾಗಿದೆ. ಅಜನೀಶ್ ಬಿ. ಲೋಕನಾಥ್ ಅವರ ಈ ಸಿನಿಮಾದಲ್ಲಿ ಸಂಗೀತ ನೀಡಿದ್ದಾರೆ.
ಉಪೇಂದ್ರ ಅವರು ಸ್ವಲ್ಪ ವಿಚಿತ್ರ ಸಾಹಿತ್ಯ ಬರೆದಿದ್ದಾರೆ. “ಎಲ್ಲಾ ಚೀಪ್ ನಂದು ತುಂಬಾ ದೊಡ್ಡದು ಅವನಿಗಿಂತ ನಿಂದು ಚಿಕ್ಕದು ನಿಂದು ತುಂಬಾ ಚಿಕ್ಕದು ಇವನಿಗಿಂತ ಅವಂದು ದೊಡ್ಡದು ಎಲಾ ಚೀಪ್ ಚೀಪ್”.. ಈ ರೀತಿ ಸಾಹಿತ್ಯದಲ್ಲಿಯೂ ಹಾಡನ್ನು ಬಿಡುಗಡೆ ಮಾಡಿರುವ ಉಪೇಂದ್ರರವರು ಅಭಿಮಾನಿಗಳಿಗಾಗಿ ಪ್ರೋಮೋ ವಿಡಿಯೋ ಸಾಂಗ್ ಒಂದನ್ನು ಬಿಟ್ಟಿದ್ದಾರೆ. ಇದರ ಪೂರ್ತಿ ಹಾಡು ಫೆಬ್ರವರಿ 26ರಂದು ಬಿಡುಗಡೆಯಾಗಲಿದೆ ಎಂದು ತಿಳಿಸಿದ್ದಾರೆ. ಈ ಹಾಡು ಅಭಿಮಾನಿಗಳಿಗೆ ತುಂಬಾ ಚೆನ್ನಾಗಿದೆ ಎಂದು ಕಾಮೆಂಟ್ ಕೂಡ ಹಾಕಿದ್ದಾರೆ.