ರಾಯಚೂರಿನ ಮಸ್ಕಿ ಪಟ್ಟಣದ ನಿವಾಸಿಯಾಗಿರುವ ಶಿಕ್ಷಕಿ 2023 ಸೆಪ್ಟೆಂಬರ್ 3 ರಿಂದ ಈ ವರ್ಷ ಜನವರಿ 12ರ ನಡುವಣ ಅವಧಿಯಲ್ಲಿ ಸೈಬರ್ ವಂಚನೆಗೆ ಒಳಗಾಗಿ ಹಣ ಕಳೆದುಕೊಂಡಿದ್ದಾರೆ ಎಂದು ಮಹಿಳೆ ಪೊಲೀಸರನ್ನು ಸಂಪರ್ಕಿಸಿ ಈ ವರ್ಷದ ಜನವರಿ 14ರಂದು ದೂರು ನೀಡಿದರು ಈ ಘಟನೆ ಇತ್ತೀಚಿಗೆ ಬೆಳಕಿಗೆ ಬಂದಿದೆ.
ಪಾರ್ಟ್ ಟೈಮ್ ಕೆಲಸ ಹುಡುಕುತ್ತಿದ್ದ ಶಿಕ್ಷಕಿಗೆ ವಾಟ್ಸಪ್ ನಲ್ಲಿ ಸಂದೇಶ ಬಂದಿತ್ತು. ಪ್ರತಿದಿನ ಇತರರೊಂದಿಗೆ ವಿಮಾನ ಟಿಕೆಟ್ ಕಾಯ್ದಿರಿಸಲು ಪಾರ್ಟ್ ಟೈಮ್ ಕೆಲಸ ಮಾಡುವವರನ್ನು ಹುಡುಕುತ್ತಿದ್ದೇವೆ ಎಂಬ ಸಂದೇಶ ಬಂದಿತ್ತು. ಈ ಕೆಲಸದ ಮೂಲಕ ದಿನಕ್ಕೆ 1000 ರಿಂದ 3600 ರ ವರೆಗೆ ಸಂಪಾದಿಸಬಹುದು ಎಂದು ಆಫರ್ ನೀಡಿದರು ಸಂದೇಶವನ್ನು ಲಿಂಕ್ನ್ ಅನ್ನು ಒದಗಿಸಲಾಗಿತ್ತು.
ಶಿಕ್ಷಕಿಯು ಆ ಕೆಲಸದಲ್ಲಿ ಆಫರ್ ಅನ್ನು ಒಪ್ಪಿ ಸೆಪ್ಟಂಬರ್ ನಿಂದ ಕೆಲಸ ಮಾಡಲು ಆರಂಭಿಸಿದರು ವಂಚಕರು ಆಕೆಗೆ ಲಿಂಕ್ ಅನ್ನು ಕಳಿಸುತ್ತಿದ್ದರು ಮತ್ತು ಅವುಗಳನ್ನು ಭರ್ತಿ ಮಾಡಲು ಕೇಳುತ್ತಿದ್ದರು.
ದಿನ ಕಳೆದಂತೆ ಸೈಬರ್ ವಂಚಕರು ಮಹಿಳೆಯ ಗಳಿಕೆಯನ್ನು ತೋರಿಸಲು ಆರಂಭಿಸಿದರು ಆದರೆ ಆಕೆ ಹಣ ಹಿಂಪಡೆಯಲು ಪ್ರಯತ್ನಿಸಿದಾಗ ವಂಚಕರು ಹಣ ಬಿಡುಗಡೆ ಮಾಡಲು ವಿವಿಧ ಶುಲ್ಕಗಳನ್ನು ಪಾವತಿಸುವಂತೆ ಹೇಳಿದರು.
ಮಹಿಳೆ ವಿವಿಧ ಖಾತೆಗಳಿಗೆ ಹಣ ವರ್ಗಾವಣೆ ಮಾಡುತ್ತಲೇ ಇದ್ದರು ಮತ್ತು ಜನವರಿ ವರೆಗೆ ಕನಿಷ್ಠ 82 ವಿಧದ ಖಾತೆಗಳಿಗೆ 2.77 ಕೋಟಿ ವರ್ಗಾವಣೆ ಮಾಡಿದರು ಎಂದು ಪೊಲೀಸರು ತಿಳಿಸಿದ್ದಾರೆ.
ಸ್ನೇಹಿತರು ಕುಟುಂಬ ಸದಸ್ಯರು ಮತ್ತು ಇತರರಿಗೆ ಶಿಕ್ಷಕಿಯು ಕೆಲಸವಾದ ಬಗ್ಗೆ ತಿಳಿಸಿದ್ದು ಅವರು ಲಕ್ಷಗಟ್ಟಲೆ ಹಣವನ್ನು ಸಾಲವಾಗಿ ನೀಡಿದ್ದರು ಈ ಬಗ್ಗೆ ಶಿಕ್ಷಕಿಯು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಸ್ವಲ್ಪ ಹಣವನ್ನು ಪಡೆಯಲು ತನ್ನ ಮನೆಯನ್ನು ಅಡಮಾನ ಇಟ್ಟಿದ್ದರು ವಂಚಕರ ರಿಂದ ಬೇಡಿಕೆ ಹೆಚ್ಚಾದಾಗ ಮತ್ತು ಸಾಲ ನೀಡಿದವರು ಅದನ್ನು ಕೇಳಲು ಪ್ರಾರಂಭಿಸಿದಾಗ ಮಹಿಳೆ ಪೊಲೀಸರನ್ನು ಸಂಪರ್ಕಿಸಿದ್ದಾರೆ.
ಏತನ್ಮಧ್ಯೆ ಸರ್ಕಾರಿ ಶಾಲೆ ಶಿಕ್ಷಕಿಯಾಗಿದ್ದರು ಅರೆಕಾಲಿಕ ಉದ್ಯೋಗ ಮಾಡಲು ಮುಂದಾಗಿದ್ದಾರೆ. ಈ ಬಗ್ಗೆ ವಿಚಾರಣೆ ಕೋರಿ ಶಿಕ್ಷಣ ಇಲಾಖೆ ಅವರಿಗೆ ನೋಟಿಸ್ ನೀಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.