ಚಿತ್ರದುರ್ಗ ಹಣ ಅಂದ್ರೆ ಹೆಣ ಕೂಡ ಬಾಯ್ ಬರುತ್ತೆ ಎಂಬ ಮಾತಿದೆ. ಏಕೆಂದರೆ ಜನರು ಅಷ್ಟರಮಟ್ಟಿಗೆ ಹಣಕ್ಕೆ ಬೆಲೆ ಕೊಡುತ್ತಾರೆ. ಆದರೆ ಜನರ ಅನಿವಾರ್ಯತೆಯನ್ನೇ ಬಂಡವಾಳ ಮಾಡಿಕೊಂಡು ವಂಚಕರು ಹಣವನ್ನು ಡಬಲ್ ಮಾಡಿಕೊಡುತ್ತೇವೆ ಎಂದು ಆಸೆ ಹುಟ್ಟಿಸಿ ಬಳಿಕ ಅವರ ಹಣ ಪಡೆದು ವಂಚನೆ ಮಾಡುತ್ತಿದ್ದಾರೆ ರಾಜ್ಯದಲ್ಲಿ ಇಂತಹ ವಂಚಕಾರರ ಜಾಲ ದೊಡ್ಡದಿದೆ ಸದ್ಯ ಚಿತ್ರದುರ್ಗ ಜಿಲ್ಲೆಯ ಕೋಟಿ ಕೋಟಿ ವಂಚಿಸಿರುವ ಘಟನೆ ನಡೆದಿದೆ.
ಆಂಧ್ರ ಮೂಲದ ಕೊಡೆ ರಾಮಣ್ಣಯ್ಯ ಎಂಬ ವ್ಯಕ್ತಿ ಕ್ರೌಡ್ ಕ್ಲಬ್ ಇಂಟರ್ನ್ಯಾಷನಲ್ ಕಂಪನಿ ಹೆಸರಿನಲ್ಲಿ 60 ದಿನಗಳಲ್ಲಿ ಹಣ ಡಬಲ್ ಮಾಡಿಕೊಳ್ಳುವುದಾಗಿ ನಂಬಿಸಿ ವಂಚನೆ ಮಾಡಿದ್ದಾನೆ.
ಈ ಘಟನೆ ಸಂಭಂದಿಸಿದ ಚಿಕ್ಕಜಾಜೂರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಡಿಸೆಂಬರ್ 15ರಂದು ದಾಖಲಾದ ಪ್ರಕರಣವು ತಡವಾಗಿ ಬೆಳಕಿಗೆ ಬಂದಿದೆ. ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕಿನ ಚಿಕ್ಕಜಾಜೂರ್ ನೌಕರ ರಮೇಶಪ್ಪ ಎಂಬುವವರು ಠಾಣೆಗೆ ದೂರು ನೀಡಿದ್ದಾರೆ.
ಆರೋಪಿಗಳು ರಮೇಶ್ ಅಪ್ಪ ಸಂಬಂಧಿಕರು ಸೇರಿ 106 ಜನರಿಗೆ ವಂಚನೆ ಮಾಡಿರುವುದಾಗಿ ಪತ್ತೆಯಾಗಿದೆ ಆರೋಪಿಗಳು ರಮೇಶಪ್ಪ ಅವರ ಬಳಿ 1 ಲಕ್ಷ 4 ಸಾವಿರ ಹಣ ಪಡೆದು ವಂಚಿಸಿದ್ದಾರೆ.
ಇನ್ನೂ ಇವರು 106 ಜನರಿಂದ ಒಟ್ಟು 4.79 ಕೋಟಿ ವಂಚಿಸಿದ್ದಾರೆ. ಚಿಕ್ಕಜಾಜೂರು ಠಾಣೆಯಿಂದ ಚಿತ್ರದುರ್ಗದ CEN ಠಾಣೆಗೆ ಕೇಸ್ ವರ್ಗಾವಣೆ ಮಾಡಿದ್ದು ಚಿತ್ರದುರ್ಗ ಸಿಎನ್ ಠಾಣೆ ಸಿಪಿಐ ವೆಂಕಟೇಶ್ ನೇತೃತ್ವದಲ್ಲಿ ತನಿಖೆ ಮುಂದುವರೆದಿದೆ.