ಅಮೆರಿಕದಲ್ಲಿ ಸಾಮೂಹಿಕ ಗುಂಡಿನ ದಾಳಿ ನಡೆದಿದ್ದು ಒಬ್ಬರು ಮೃತಪಟ್ಟು 21 ಮಂದಿ ಗಂಭೀರವಾಗಿ ಗಾಯಗೊಂಡ ಘಟನೆ ನಡೆದುಬಂದಿದೆ ಬುಧವಾರ ಕಾನ್ಸಾಸ್ ಸಿಟಿಯಲ್ಲಿ ನಡೆದ ಸೂಪರ್ ಬೋಲ್ ವಿಕ್ಟರಿ ರ್ಯಾಲಿ ಸಂದರ್ಭದಲ್ಲಿ ಸಂದರ್ಭದಲ್ಲಿ ಸಾಮೂಹಿಕ ಗುಂಡಿನ ದಾಳಿ ನಡೆದಿದೆ ಡಿಜೆ ಎಲ್ಲಿದ್ದ ಲಾಸನ್ ಲೋಪೆಜ್ ಗಾಲ್ವನ್ ಗುಂಡಿನ ದಾಳಿಗೆ ಬಲಿಯಾಗಿದ್ದಾರೆ.
ಮರ್ಸಿ ಆಸ್ಪತ್ರೆಯಲ್ಲಿ 12 ಮಕ್ಕಳಿಗೆ ಚಿಕಿತ್ಸೆ ನೀಡಲಾಗುತ್ತಿದೆ 11 ಜನರಿಗೆ ಗಂಡು ತಗುಲಿದೆ ಎನ್ನಲಾಗಿದೆ.
ಘಟನೆಯ ನಂತರ ಮೂವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ ಆದರೆ ಗುಂಡಿನ ದಾಳಿ ಹಿಂದಿನ ಉದ್ದೇಶ ಸ್ಪಷ್ಟವಾಗಿಲ್ಲ ಇನ್ನೂ ತನಿಖೆಯಲ್ಲಿದೆ.
ಎಂಟು ಮಂದಿ ಮಾರಣಾಂತಿಕ ಗಾಯಗಳನ್ನು ಅನುಭವಿಸಿದ್ದಾರೆ ಏಳು ಮಂದಿ ಗಂಭೀರ ಗಾಯಗಳಾಗಿವೆ. ಮತ್ತು ಉಳಿದ 6 ಮಂದಿ ಸಣ್ಣಪುಟ್ಟ ಗಾಯಗಳಾಗಿವೆ ಗುಂಡಿನ ಸದ್ದು ಕೇಳುತ್ತಿದ್ದಂತೆ ಜನರು ಚೆಲ್ಲಾ ಪಿಲ್ಲಿಯಾಗಿ ಓಡಲಾರಂಭಿಸಿದ್ದರು.
ಇದೇ ರೀತಿ ಅಕ್ಟೋಬರ್ ನಲ್ಲಿ ಗುಂಡಿನ ದಾಳಿ ನಡೆದಿತ್ತು. ಇದರಲ್ಲಿ 22 ಮಂದಿ ಸಾವನ್ನಪ್ಪಿದ್ದರು. ಅಮೆರಿಕದ ಮೈನ್ ನಾ ಲೆವಿಸ್ಟಾನ್ ನಗರದಲ್ಲಿ ನಡೆದ ಭೀಕರ ಗುಂಡಿನ ದಾಳಿಯಲ್ಲಿ ಕನಿಷ್ಠ 22 ಜನರು ಮೃತಪಟ್ಟಿದ್ದರು. ಈ ಘಟನೆಯಲ್ಲಿ 50 ರಿಂದ 60 ಜನರು ಗಾಯಗೊಂಡಿದ್ದರು ಎಂದು ಸಿಎನ್ಎನ್ ವರದಿ ಮಾಡಿತ್ತು.
40ವರ್ಷದ ರಾಬರ್ಟ್ ಕಾರ್ಡ್ ಹೇ ಗುಂಡಿನ ದಾಳಿ ನಡೆಸಿರಬಹುದೆಂದು ಲೆವೆಸ್ಟಿಂಗ್ ಪೊಲೀಸ್ ಇಲಾಖೆಯ ಅಧಿಕಾರಿಗಳು ಅಂದಾಜಿಸಿದ್ದಾರೆ. ರಾಬರ್ಟ್ ಕಾರ್ಡ್ ಶಸ್ತ್ರಸರ್ಜಿತನಾಗಿರಬಹುದು ಹಾಗೂ ಅಪಾಯಕಾರಿ ಎಂದು ಪರಿಗಣಿಸಬೇಕು ಎಂದು ಪೊಲೀಸರು ಜನರಿಗೆ ಎಚ್ಚರಿಕೆ ನೀಡಿದ್ದಾರೆ.
ಎ.ಬಿ.ಸಿ ನ್ಯೂಸ್ ಪ್ರಕಾರ ಸ್ಥಳೀಯ ಬಾರ್ ಮತ್ತು ವಿತರಣಾ ಕೇಂದ್ರವಾಗಿರುವ ಬೌಲಿಂಗ್ ಅಲೆಯಲ್ಲಿ ಈ ಗುಂಡಿನ ದಾಳಿ ನಡೆದಿತ್ತು.