Breaking
Mon. Dec 23rd, 2024

ಗ್ರಾಮೀಣ ಭಾರತ್ ಬಂದ್ ಕರ್ನಾಟಕಕ್ಕೂ ಬಿಸಿ ಮುಟ್ಟಲಿದಿಯೋ ?

ಬೆಂಗಳೂರು : ದೇಶಾದ್ಯಂತ ರೈತರ ಸಾಲ ಮನ್ನಾ ರೈತರು ಕೃಷಿ ಕಾರ್ಮಿಕರಿಗೆ ಪಿಂಚಣಿ ಕನಿಷ್ಠ ಬೆಂಬಲ ಬೆಲೆಗೆ ಕಾನೂನು ಭದ್ರತೆ ನೀಡುವುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ರೈತರು ದೆಹಲಿ ಚಲೋ ನಡೆಸಿದ್ದಾರೆ. ಹರಿಯಾಣದ ಶಂಭೋ ಗಡಿಯಲ್ಲಿ ಠಿಕಾಣಿ ಹೂಡಿರೋ ರೈತರು ಯಾವುದೇ ಕಾರಣಕ್ಕೂ ಹಿಂದೆ ಸರಿಯಲ್ಲ ಎಂದು ಪಟ್ಟು ಹಿಡಿದಿದ್ದಾರೆ.

ರೈತರ ಬೇಡಿಕೆಗಳು

ಶಾಸನದ ಮೂಲಕ ಎಲ್ಲಾ ಬೆಳೆಗಳಿಗೆ ಖಾತ್ರಿಪಡಿಸಿದ ಕನಿಷ್ಠ ಬೆಂಬಲ ಬೆಲೆ (MSP).

ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ನು (MGNREGS) ಬಲಪಡಿಸಿ.

ವ್ಯಾಪಕ ವ್ಯಾಪ್ತಿಗಾಗಿ ಹಳೆಯ ಪಿಂಚಣಿ ಯೋಜನೆಯನ್ನು ಮರುಸ್ಥಾಪಿಸಿ.

ಎಲ್ಲಾ ಕಾರ್ಮಿಕರಿಗೆ (ಔಪಚಾರಿಕ ಮತ್ತು ಅನೌಪಚಾರಿಕ) ಪಿಂಚಣಿ ಮತ್ತು ಸಾಮಾಜಿಕ ಭದ್ರತೆಯನ್ನು ಖಚಿತಪಡಿಸಿಕೊಳ್ಳಿ.

ಕೃಷಿ ಮತ್ತು ಗೃಹ ಬಳಕೆ ಎರಡಕ್ಕೂ ಉಚಿತ 300 ಯೂನಿಟ್ ವಿದ್ಯುತ್ ಒದಗಿಸಿ.

ಉತ್ತಮ ಅಪಾಯ ನಿರ್ವಹಣೆಗಾಗಿ ಸಮಗ್ರ ಬೆಳೆ ವಿಮೆಯನ್ನು ಜಾರಿಗೊಳಿಸಿ.

ಈಗಿರುವ ಪಿಂಚಣಿಯನ್ನು ತಿಂಗಳಿಗೆ ₹ 10,000ಕ್ಕೆ ಹೆಚ್ಚಿ

ರೈತರ ಮನವೊಲಿಸಲು ಕೇಂದ್ರ ಸರ್ಕಾರ ಸಭೆ ಮೇಲೆ ಸಭೆ ಮಾಡುತ್ತಾ ಕಸರತ್ತು ನಡೆಸಿದೆ. ರೈತರ ಹೋರಾಟ ತೀವ್ರ ಸ್ವರೂಪ ಪಡೆದುಕೊಂಡಿರುವ ಹೊತ್ತಲ್ಲೇ ಇಂದು ದೇಶಾದ್ಯಂತ ಗ್ರಾಮೀಣ ಬಂದ್ಗೆ ಕರೆ ನೀಡಿದ್ದಾರೆ ಬಂದು ಪರಿಣಾಮವು ಕರ್ನಾಟಕದಲ್ಲಿ ಹೇಗಿರಬಹುದು ಎಂಬ ಮಾಹಿತಿ ಇಲ್ಲಿದೆ.

ರಾಜಕೀಯೇತರ ಚಟುವಟಿಕೆಗಳಾದ ಸಂಯುಕ್ತ ಕಿಸಾನ್ ಮೋರ್ಚಾ ಹಾಗೂ ಕಿಸಾನ್ ಮಜ್ದೂರ್ ಮೋರ್ಚಾ ಸಂಘಟನೆಗಳು ಇಂದು ಗ್ರಾಮೀಣ ಬಂದ್ ಗೆ ಕರೆ ನೀಡಿವೆ. ಇಂದು ಬೆಳಗ್ಗೆ 6 ರಿಂದ ಸಂಜೆ 4ರ ವರೆಗೆ ಗ್ರಾಮೀಣ ಭಾರತ್ ಬಂದ್ ಕರೆ ನೀಡಲಾಗಿದೆ.

ದೇಶಾದ್ಯಂತ ವಿವಿಧ ರೈತ ಸಂಘಟನೆಗಳು ರಸ್ತೆ ತಡೆ ಮೂಲಕ ಪ್ರತಿಭಟನೆ ನಡೆಸಲು ತೀರ್ಮಾನಿಸಿದ್ದಾರೆ. ಪಂಜಾಬ್ ಹರಿಯಾಣದಲ್ಲಿ ದೊಡ್ಡ ಮಟ್ಟದಲ್ಲಿ ಹೋರಾಟ ನಡೆಯಲಿದ್ದು ರಸ್ತೆ ಸಾರಿಗೆ ಸುಮಾರು ನಾಲ್ಕು ಗಂಟೆ ಕಾಲ ಸ್ತಬ್ಧ ವಾಗುವ ಸಾಧ್ಯತೆಯಿದೆ.

ಕಾಂಗ್ರೆಸ್ ಸೇರಿದಂತೆ ಹಲವು ಪಕ್ಷಗಳು ಗ್ರಾಮೀಣ ಭಾರತ್ ಬಂದ್ ಗೆ ಬೆಂಬಲ ನೀಡಿವೆ. ಕರ್ನಾಟಕ ರಾಜ್ಯದಲ್ಲಿ ರೈತ ಸಂಘಟನೆಗಳ ಒಕ್ಕೂಟ ಬಂದ್ ಗೆ ಬೆಂಬಲ ಪಡಿಸಿದೆ ಸಂಯುಕ್ತ ಕಿಸಾನ್ ಮೋರ್ಚಾ ಕೂಡಾ ಬೆಂಬಲ ವ್ಯಕ್ತಪಡಿಸಿದೆ ಎಂದು ಕುರುಬೂರು ಶಾಂತಕುಮಾರ್ ಹೇಳಿದ್ದಾರೆ ಇಂದು ಬೆಳಗ್ಗೆ 11 ರಿಂದ 1 ಗಂಘೆವರೆಗೆ ರಸ್ತೆ ತಡೆ ಚಳುವಳಿ ಕರೆ ನೀಡಲಿದ್ದಾರೆ ಇದಲ್ಲದೆ ಬೆಳಗ್ಗೆ 6 ರಿಂದ ಸಂಜೆ 4 ವರೆಗೆ ಬಂದ್ ನಡೆಸಲು ನಿರ್ಧರಿಸುವೆ.

ಕರ್ನಾಟಕಕ್ಕೆ ಬಂದು ಬಿಸಿ ಅಷ್ಟೇನೂ ಕಾಣುವುದಿಲ್ಲ ಅಂಗಡಿಗಳು ಎಂದಿನಂತೆ ತೆರೆದಿರುತ್ತಾವೆ ಜನಜೀವನ ಬಹುತೇಕ ಸಾಮಾನ್ಯವಾಗಿರುತ್ತದೆ‌. ರಾಜ್ಯ ಬಜೆಟ್ ಕೂಡ ಮಂಡನೆ ಆಗುತ್ತದೆ ವಿಧಾನಸೌಧದ ಕಾರ್ಯಕಲಾಪ ಸೇರಿದಂತೆ ರಾಜ್ಯಾದ್ಯಂತ ಸರ್ಕಾರಿ ಕಚೇರಿಗಳ ಕಾರ್ಯನಿರ್ವಹಣೆ ಸಾಮಾನ್ಯವಾಗಿರುತ್ತದೆ ಶಾಲಾ-ಕಾಲೇಜುಗಳಿಗೆ ಯಾವುದೇ ರಜೆ ಘೋಷಣೆ ಇರುವುದಿಲ್ಲ. ಕಾರ್ಮಿಕ ಸಂಘಟನೆಗಳು ಬಂದ್ ಕುರಿತು ಮಾಹಿತಿ ನೀಡಿಲ್ಲ. ಬಸ್ ಸಂಚಾರ ಕೂಡ ಎಂದಿನಂತೆ ನಡೆಯಲಿದೆ. ಮೆಟ್ರೋ ಹಾಗೂ ಭಾರತೀಯ ರೈಲ್ವೆ ಸೇವೆ ಕೂಡ ಕರ್ನಾಟಕದಾದ್ಯಂತ ಎಂದಿನಂತೆ ಇರಲಿದೆ.

ಇದರ ಜೊತೆಗೆ ಕೇಂದ್ರ ಸರ್ಕಾರದ ಸ್ವಾಮ್ಯದ   ಸರ್ಕಾರಿ ಬ್ಯಾಂಕುಗಳು ಎಂದಿನಂತೆ ಕಾರ್ಯ ನಿರ್ವಹಿಸುತ್ತವೆ ಸರ್ಕಾರಿ ಖಾಸಗಿ ಬ್ಯಾಂಕ್ ಗಳ ನಿರ್ವಹಣೆ ಕೂಡ ಸಹಜವಾಗಿರುತ್ತದೆ. ಪೋಸ್ಟ್ ಆಫೀಸ್ ಸೇರಿದಂತೆ ಕೇಂದ್ರ ಕಚೇರಿಯ ಕೆಲಸಗಳು ಮುಂದುವರಿಯುತ್ತವೆ ಎಂದು ಪತ್ರಿಕಾ ಪ್ರಕಟಣೆಗೆ ತಿಳಿಸಿದ್ದಾರೆ.

Related Post

Leave a Reply

Your email address will not be published. Required fields are marked *