ಕರ್ನಾಟಕ ಸರ್ಕಾರ ಗುರುವಾರ (ಫೆಬ್ರವರಿ 15) ಇಂದು ವಿವಾಹ ಕಾಯ್ದೆ 1955ರ ಅಡಿಯಲ್ಲಿ ವಿವಾಹದ ಆನ್ಲೈನ್ ನೋಂದಣಿ ಸೌಲಭ್ಯ ಪ್ರಾರಂಭಿಸಿತು. ಮಲ್ಲೇಶ್ವರಂ ಸಬ್ ರಿಜಿಸ್ಟರ್ ಕಚೇರಿಯಲ್ಲಿ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಪ್ರಾಯೋಗಿಕವಾಗಿ ಈ ಸೌಲಭ್ಯಕ್ಕೆ ಚಾಲನೆ ನೀಡಿದರು.
ಇದೇ ರೀತಿ ವಿಶೇಷ ವಿವಾಹ ಕಾಯ್ದೆ 1954ರ ಅಡಿಯಲ್ಲಿ ವಿವಾಹಗಳನ್ನು ನೋಂದಾಯಿಸಲು ಅರ್ಜಿ ಸಲ್ಲಿಸುವ ಪ್ರಕ್ರಿಯೆ ಆನ್ಲೈನ್ ನಲ್ಲಿ ಮಾಡಲಾಗಿದೆ.
ಈ ತಿಂಗಳ ಅಂತ್ಯದೊಳಗೆ ರಾಜ್ಯದ ಎಲ್ಲಾ ಕಚೇರಿಗಳಿಗೂ ಈ ಸೌಲಭ್ಯಗಳನ್ನು ವಿಸ್ತರಿಸಲಾಗುತ್ತದೆ. ಆಧಾರ್ ದೃಡೀಕರಣವನ್ನು ನೀಡಲು ಬಯಸುವವರು ಮನೆಯಿಂದಲೇ ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದು ಆದರೆ ಆಧಾರ್ ದೃಢೀಕರಣವನ್ನು ಮಾಡದಿರುವವರು ಸಬ್ ರಿಜಿಸ್ಟರ್ ಕಛೇರಿಗೆ ಭೇಟಿ ನೀಡುವ ಮೂಲಕ ತಮ್ಮ ವಿವಾಹ ನೋಂದಾಯಿಸಿಕೊಳ್ಳಬಹುದು.
ವಿಶೇಷ ವಿವಾಹ ಕಾಯ್ದೆ ವಿವಾಹ ನೋಂದಾಯಿಸಲು ಅರ್ಜಿ ಸಲ್ಲಿಸುವ ಪ್ರಕ್ರಿಯೆ ಆನ್ಲೈನ್ ನಲ್ಲಿ ಮಾಡಲಾಗಿದೆ ಎಲ್ಲಾ ಅಗತ್ಯ ದಾಖಲೆಗಳನ್ನು ಆನ್ಲೈನ್ನಲ್ಲಿ ಒದಗಿಸಿ ನಂತರ ಸಬ್ ರಿಜಿಸ್ಟರ್ ಕಚೇರಿಗೆ ಹೋಗಿ ವಿವಾಹ ನೋಂದಣಿ ಮಾಡಿಸಿಕೊಳ್ಳಬೇಕಾಗುತ್ತದೆ.
2004 ಕ್ಕಿಂತ ಮೊದಲು ನೋಂದಾಯಿಸಲಾದ ಆಸ್ತಿಗಳ ಎನ್ ಕಂಬರೆನ್ಸ್ ಪ್ರಮಾಣ ಪತ್ರಕ್ಕಾಗಿ ಅರ್ಜಿ ಸಲ್ಲಿಸಲು ಹಾಗೂ ಶುಲ್ಕ ಪಾವತಿಸಲು ಈ ಹಿಂದೆ ಉಪ ನೋಂದಣಿ ಕಚೇರಿಗೆ ಹೋಗಿ ಮಾಡಬೇಕಾಗಿತ್ತು, ಆದರೆ ಈ ಯೋಜನೆಯ ಮೂಲಕ ಅರ್ಜಿ ಸಲ್ಲಿಸಲು ಮತ್ತು ಶುಲ್ಕ ಪಾವತಿಸಲು ಆನ್ಲೈನಲ್ಲಿ ಮಾಡಬಹುದು ಎಂದು ತಿಳಿಸಿದರು.