ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಬೆಳಗ್ಗೆ 10. 15ಕ್ಕೆ 2024 25 ನೇ ಸಾಲಿನ ಬಜೆಟ್ ಮಂಡನೆ ಮಾಡಲಿದ್ದಾರೆ. ಬಜೆಟ್ ಮಂಡನೆಗೂ ಮುನ್ನ ಸಿದ್ದರಾಮಯ್ಯನವರು ವಿಶೇಷ ಸಂಪುಟ ಸಭೆ ನಡೆಸಲಿದ್ದಾರೆ, ಸಿದ್ದರಾಮಯ್ಯನವರು ಮಂಡಿಸುತ್ತಿರುವ 15ನೇ ಬಜೆಟ್ ಇದಾಗಿದ್ದು ಕರ್ನಾಟಕದ ಮಟ್ಟಿಗೆ ಇದೊಂದು ಹೊಸ ದಾಖಲೆಯಾಗಿದೆ ಲೋಕಸಭೆ ಚುನಾವಣೆಗೆ ಹೊತ್ತಿನಲ್ಲೇ ಬಜೆಟ್ ಮಂಡನೆ ಮಾಡುತ್ತಿರುವುದು ಮಹತ್ವದ ಘೋಷಣೆಗಳು ಹೊರಬೀಳುವ ನಿರೀಕ್ಷೆ ಇದೆ.
ಸಿಎಂ ಸಿದ್ದರಾಮಯ್ಯನವರು ಬಜೆಟ್ ನಲ್ಲಿ ಮೇಕೆದಾಟು ಯೋಜನೆಗೆ ಹಣ ಘೋಷಣೆ ಮಾಡೋ ಸಾಧ್ಯತೆ ಇದೆ. ಬೆಂಗಳೂರಿನಲ್ಲಿ ಟನಲ್ ನಿರ್ಮಾಣಕ್ಕೆ ಅನುದಾನ ಸುವರ್ಣ ಮಹೋತ್ಸವ ಹೆಸರಿನಲ್ಲಿ ಅಭಿವೃದ್ಧಿಯ ಯೋಜನೆ ಘೋಷಣೆಗೆ ನಿರೀಕ್ಷೆ ಇದೆ ಬ್ರಾಂಡ್ ಬೆಂಗಳೂರಿಗೆ ಬಜೆಟ್ಟಿನಲ್ಲಿ ಒತ್ತು ಸಾಧ್ಯತೆ. ನಮ್ಮ ಮೆಟ್ರೋ ಮಾರ್ಗ ವಿಸ್ತರಣೆ ಹೆಚ್ಚಿನ ಅನುದಾನ. ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ ವಿಶೇಷ ಹಣ ಮೀಸಲು ಹಾಗೂ ನೂರು ಕೋಟಿ ವೆಚ್ಚದಲ್ಲಿ ದೇವಸ್ಥಾನಗಳ ಜೀರ್ಣೋದ್ಧಾರ ಮಾಡುವುದು.
ರಾಜ್ಯ ಸರ್ಕಾರಿ ನೌಕರರ ಓ.ಪಿ.ಎಸ್ ಭಾಗ್ಯ ಘೋಷಿಸುವ ಸಾಧ್ಯತೆ ಇದೆ ಮಧ್ಯದ ಮೇಲಿನ ಅಬಕಾರಿ ಸುಂಕ ಏರಿಕೆ ಮಾಡುವ ಸಾಧ್ಯತೆ ದಟ್ಟವಾಗಿದೆ. ಜಿಲ್ಲಾ ಹಾಗೂ ತಾಲೂಕು ಕೇಂದ್ರಕ್ಕೆ ಇಂದಿರಾ ಕ್ಯಾಂಟೀನ್ ವಿಸ್ತರಣೆ ಮಾಡುವುದು ಎನ್ನಲಾಗಿದೆ.
ಕಳೆದ ಬಾರಿ ಹೋಲಿಕೆ ಮಾಡಿದರೆ ಈ ಬಾರಿ ಬಜೆಟ್ ಗಾತ್ರ ಹೆಚ್ಚಾಗುವ ಸಾಧ್ಯತೆ ಇದೆ. ಕಳೆದ ಬಾರಿ ಬಜೆಟ್ ಗಾತ್ರ 3, 27,000 ಕೋಟಿ ಇತ್ತು. ಈ ವರ್ಷ ಬಜೆಟ್ ನ ಗಾತ್ರ 3 ಲಕ್ಷದ 50 ರಿಂದ 80000 ಕೋಟಿ ರೂಪಾಯಿ ದಾಟುವ ಸಾಧ್ಯತೆ. ಸಾಲದವರೆಯೂ ಈ ಬಾರಿ ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ರಾಜ್ಯದಲ್ಲಿ ಪ್ರತಿ ವರ್ಷವೂ ಬಜೆಟ್ನ ಗಾತ್ರ ಸಾಲದವರೆಯೂ ಹೆಚ್ಚಾಗುತ್ತಿದೆ. ಕಳೆದ ಬಾರಿ 85,815 ಕೋಟಿ ಸಾಲದ ಮರೆ ಹೋಗಿತ್ತು ರಾಜ್ಯ ಸರ್ಕಾರ ಈ ಬಾರಿ ಅಂದಾಜು ಒಂದು ಲಕ್ಷ ಕೋಟಿ ವರೆಗೂ ಸಾಲ ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗಿದೆ.