Breaking
Mon. Dec 23rd, 2024

2024 – 25 ನೇ ಸಾಲಿನ ಚಿತ್ರದುರ್ಗ ನಗರ ಸಭೆಯ ಬಜೆಟ್ ಮಂಡನೆ

ಚಿತ್ರದುರ್ಗ ನಗರ ಸಭೆಯ 2024 25 ನೇ ಸಾಲಿನ ಬಜೆಟ್‌ಗೆ ಸಂಬಂಧಿಸಿದ ಪೌರಯುಕ್ತ ರವರು ಈ ಬಾರಿ ರೂ 112.78 ಕೋಟಿ ವೆಚ್ಚದ ಆಯವ್ಯಯ ಮಂಡನೆ ಮಾಡಿದರು.

ರಸ್ತೆ, ಚರಂಡಿ ,ಕುಡಿಯುವ ನೀರು, ನೈರ್ಮಲಿಕರಣ, ನಗರ ಸೌಂದರ್ಯೀಕರಣಕ್ಕೆ ಹೆಚ್ಚಿನ ಅನುದಾನವನ್ನು ಮೀಸಲಿಡಲಾಗಿದೆ. ಈ ಬಾರಿ ಬಜೆಟಿನ ಆಯವ್ಯಯವನ್ನು ಆಸ್ತಿ ತೆರಿಗೆ ನೀರಿನ ಶುಲ್ಕ ಬಾಡಿಗೆ ಉದ್ಯಮಿ ಪರವಾನಿಗೆ ಅಭಿವೃದ್ಧಿ ಶುಲ್ಕ ಮತ್ತು ಇತರ ಆದಾಯಗಳು ಸೇರಿ ಒಟ್ಟು ರೂ 30.57 ಕೋಟಿ ನಗರಸಭೆಯ ಸ್ವಂತ ಆದಾಯವಾಗಿದೆ.

ಇದರೊಂದಿಗೆ ರಾಜ್ಯ ಸರ್ಕಾರದಿಂದ ಎಸ್ಎಫ್.ಸಿ. ನಗರ ಸ್ಥಾನ ಹಾಗೂ ಡಿ.ಎಂ.ಎಫ್.ಟಿ ಶಾಸಕರ ಅನುದಾನ ಸೇರಿ ರೂ 71 ಅಂಕ 20 ಕೋಟಿ ಅನುದಾನ ನಗರಸಭೆಗೆ ದೊರೆತಿದೆ. ಹಾಗೂ ಕೇಂದ್ರ ಸರ್ಕಾರದ 15ನೇ ಹಣಕಾಸು ನಲ್ಮಡ್ ಸ್ವಚ್ಛ ಭಾರತ್ ಮಿಷನ್ ಹಾಗೂ ಇತರೆ ಅನುದಾನದಡಿಯಲ್ಲಿ ರೂ 11.5 ಕೋಟಿ ಅನುದಾನದ ನಿರೀಕ್ಷೆಯಲ್ಲಿ ಆಯವ್ಯಯ ಮಂಡನೆಗೆ ಸಿದ್ಧಗೊಳಿಸಲಾಗಿದೆ. ನಗರದ ಬೀದಿ ದೀಪ, ನೀರು ಸರಬರಾಜು, ನಗರಸಭೆ ಕಚೇರಿ, ಗ್ರಂಥಾಲಯಗಳ ವಿದ್ಯುತ್ ಪಾವತಿಗಾಗಿ ರೂ 21 ಕೋಟಿ ಅನುದಾನ ಮೀಸಲಿಡಲಾಗಿದೆ.

ನಗರದ ರಸ್ತೆಗಳ ಅಭಿವೃದ್ಧಿಗಾಗಿ 18 ಪಾಯಿಂಟ್ 75 ಕೋಟಿ ತ್ಯಾಜ್ಯ ನಿರ್ವಹಣೆ, ತ್ಯಾಜ್ಯ ಸಂಗ್ರಹಣೆ ವಾಹನಗಳು, ಶೌಚಾಲಯಗಳ ಅಭಿವೃದ್ಧಿ ,ಹೊರಗುತ್ತಿಗೆ ನೌಕರರ ವೇತನ, ಇಂಧನ ಸೇರಿ ನಗರ ನೈರ್ಮಲ್ಯಗಳಿಗೆ ಒಟ್ಟು ರೂ 13.50 ಕೋಟಿ. ನಗರಸಭೆಯ ಸಿಬ್ಬಂದಿ ವೇತನಕ್ಕಾಗಿ 10 ಕೋಟಿ.

ನಗರ ಸೌಂದರ್ಯ, ಆಟೋ ನಿಲ್ದಾಣಗಳು, ಪಾರ್ಕಿಂಗ್, ಖಾಸಗಿ ಬಸ್ ನವೀಕರಣ, ನಾಮಫಲಕಗಳು ಅಳವಡಿಕೆ, ನಗರದ ಪ್ರಮುಖ ವೃತ್ತಗಳ ಅಭಿವೃದ್ಧಿಗಾಗಿ ಒಟ್ಟು ರೂ 7 ಕೋಟಿ ಅನುದಾನಗಳನ್ನು ಪ್ರಮುಖವಾಗಿ ಆಯವ್ಯಯದಲ್ಲಿ ಆಯ್ಕೆ ಮಾಡಲಾಗಿದೆ.

ನಗರದ ಚರಂಡಿ ಹಾಗೂ ಕಾರ್ಯಕ್ರಮಗಳ ನಿರ್ಮಾಣ ಮತ್ತು ನಿರ್ವಹಣೆಗಾಗಿ 9 ಕೋಟಿ, ನೀರು ನಿರ್ವಹಣೆ ಅಭಿವೃದ್ಧಿ ಕಾಮಗಾರಿಗಳು, ದಾಸ್ತಾನು ಖರೀದಿ ಹೊರಗುತ್ತಿಗೆ ನೌಕರರ ವೇತನ 8 ಕೋಟಿ.

ಉದ್ಯಾನವನ ಮತ್ತು ರುದ್ರ ಭೂಮಿ ಅಭಿವೃದ್ಧಿಗಾಗಿ ರೂ 3.25 ಕೋಟಿ, ಬೇಬಿ ದೀಪಗಳ ಅಳವಡಿಕೆಗೆ ರೂ 3 ಕೋಟಿ ಅನುದಾನವನ್ನು ಮೀಸಲಿಡಲಾಗಿದೆ. ಕಚೇರಿಗಳ ನಿರ್ವಹಣೆಗೆ ರೂ 3.75 ಕೋಟಿ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ ಮತ್ತು ವಿಶೇಷ ವಿಕಲಚೇತನ ಕಲ್ಯಾಣಕ್ಕಾಗಿ ರೂ 1. 50 ಕೋಟಿ.

ಭಾರತ್ ಮಿಷನ್ ಗೆ 1.50 ಕೋಟಿ ಜಾಹೀರಾತು ಹಾಗೂ ಇತರೆ ವೆಚ್ಚಗಳಿಗೆ ರೂ 1 ಕೋಟಿ, ನಲ್ಮ್ ಯೋಜನೆಗೆ 50 ಲಕ್ಷ ಅನುದಾನ ಖರ್ಚಾಗುವ ನಿರೀಕ್ಷೆ ಇದೆ. ರಾಜ್ಯ ಸರ್ಕಾರಕ್ಕೆ ರೂ 3.75 ಕೋಟಿ ಹಾಗೂ ಒಂದು ಕೋಟಿ ಬಾಕಿ, ಪಾವತಿಯನ್ನು ಈ ಬಾರಿಯ ಆಯವ್ಯಯದಲ್ಲಿ ಮಾಡಲಾಗುವುದು

22 ಹೊಸ ಕಸ ಸಂಗ್ರಹಣೆಯ ಆಟೋ ಟಿಪ್ಪರ್ ಖರೀದಿಗೆ ಟೆಂಡರ್ ನಗರ ಕಸ ಸಂಗ್ರಹಣೆಯನ್ನು ಸಮರ್ಪಕವಾಗಿ ಕೈಗೊಳ್ಳಲು ಅನುಕೂಲವಾಗುವಂತೆ ಹೊಸದಾಗಿ 22 ಕಸ ಸಂಗ್ರಹಣೆಯ ಟಿಪ್ಪರ್ ಖರೀದಿಗೆ ಶೀಘ್ರವೇ ಟೆಂಡರ್ ಕರೆಯಲಾಗುವುದು ಎಂದು ಹೇಳಿದರು.

ಪ್ರಸ್ತುತ 31 ಆಟೋ ಟಿಪ್ಪರ್ ಗಳಿದ್ದು ಕಸ ಸಂಗ್ರಹಣೆಯಲ್ಲಿ ಹತ್ತರಿಂದ ಹನ್ನೆರಡು ವಾಹನಗಳ ನಿರೂಪ ಯುಕ್ತದಿಂದ 35 ವಾರ್ಡ್ಗಳಲ್ಲಿ ಪ್ರತಿ ವಾರ್ಡಿಗೂ ಪ್ರತ್ಯೇಕವಾಗಿ ಒಂದೊಂದು ಕಸ ಸಂಗ್ರಹಣೆಯ ಆಟೋ ಟಿಪ್ಪರ್ಗಳನ್ನು ನಿಗದಿಪಡಿಸಲಾಗಿದೆ. ಏಪ್ರಿಲ್ 1 ರಿಂದ ಈ ವಾಹನಗಳು ಕಾರ್ಯ ಪ್ರಾರಂಭವಾಗಲಿವೆ. ನಗರಸಭೆಯ ಬಳಿ ಎರಡು ನೀರಿನ ಟ್ಯಾಂಕ್‌ಗಳಿವೆ, ನಗರಕ್ಕೆ ಕನಿಷ್ಠ 5 ಸಮಯದ ಅವಶ್ಯಕತೆ ಇದೆ ಈ ಬಾರಿ ಮೂರು ಹೊಸ ಟ್ಯಾಂಕರ್‌ಗಳನ್ನು ಖರೀದಿಸಲು ಹೊಸದಾಗಿ ಮತ್ತೊಂದು ಮುಕ್ತಿ ವಾಹನವನ್ನು ಕರೆದಿದೆ ಎಂದು ಪೌರಯುಕ್ತೆ ರೇಣುಕಾ ಎಂ ಸ್ಪಷ್ಟನೆ ನೀಡಿದೆ.

ಈ ಸಭೆಯ ನಗರಸಭೆ ಸದಸ್ಯರಾದ ಜಿ ಹರೀಶ್ ಕೆ, ಮಂಜುಳಾ, ಶಕೀಲಾ ಬಾನು, ಭಾಗ್ಯಮ್ಮ , ಜಯಪ್ಪ, ಎಂ.ಪಿ. ಅನಿತಾ, ಇನ್ನು ಮುಂತಾದವರು ಅಧಿಕಾರಿಗಳು ಸಾರ್ವಜನಿಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಆವಿಷ್ಕಾರ್ ನ್ಯೂಸ್ ವಾಟ್ಸಾಪ್ ಗ್ರೂಪ್ ಗೆ ಸೇರಲು ಈ ಕೆಳಗಿನ ಲಿಂಕ್ ಅನ್ನು ಒತ್ತಿ

https://chat.whatsapp.com/LvSd2a2U1Iq9jtatFuIIS8

 

Related Post

Leave a Reply

Your email address will not be published. Required fields are marked *