ಮೈಸೂರು ಕಳೆದ ಮೂರು ತಿಂಗಳ ಹಿಂದೆ ಮೈಸೂರು ತಾಲೂಕಿನ ಚಿಕ್ಕನಹಳ್ಳಿ ಗ್ರಾಮದ ಬಳಿಯ ಜಮೀನು ಒಂದರಲ್ಲಿ ಹುಲಿ ಕಾಣಿಸಿಕೊಂಡಿತ್ತು ಇದು ಸುಮಾರು ಐದು ವರ್ಷದ ಗಂಡು ಹುಲಿ ಎಂದು ಹೇಳಲಾಗಿದೆ.
ಅರಣ್ಯ ಇಲಾಖೆಗೆ ಸ್ಥಳೀಯ ಗ್ರಾಮಸ್ಥರು ದೂರು ನೀಡಿದ ಆಧಾರದ ಮೇಲೆ ಪ್ರತಿ ದಿನ ಕಾರ್ಯಾಚರಣೆ ನಡೆಯುತ್ತಿತ್ತು ಆದರೆ ಹುಲಿ ಸಿಕ್ಕಿರಲಿಲ್ಲ ಅದರಲ್ಲಿ ಮೈಸೂರು ತಾಲೂಕಿನ ಸುತ್ತಮುತ್ತ ಇರುವ ಗ್ರಾಮಗಳಿಗೆ ಕರಪತ್ರಗಳನ್ನು ಹಂಚಿ ಸಾರ್ವಜನಿಕರಿಗೆ ಎಚ್ಚರಿಕೆ ಮೂಡಿಸುವ ಕಾರ್ಯ ಅರಣ್ಯ ಇಲಾಖೆಯಿಂದ ನಡೆಯಿತು ಕಾಡಿನ ಹಾಗೂ ಹೊಲದ ಸುತ್ತಮುತ್ತ ಸಿಸಿ ಕ್ಯಾಮೆರಾಗಳ ಅಳವಡಿಕೆ ಹುಲಿ ಸರೆಗಾಗಿ ಅಧಿಕಾರಿಗಳು ಆರೋಗ್ಯವನ್ನು ಪರಿಶೀಲನೆಗಾಗಿ ರೇಡಿಯೋ ಕಾಲರ್ ಗಳನ್ನು ಅಳವಡಿಸಲಾಯಿತು.
ಹುಲಿಯ ಸರೆಗಾಗಿ ಅಲ್ಲಲ್ಲಿ ಬೋನ್ ಇಡಲಾಗಿತ್ತು. ಹುಲಿಯೂ ಅರಣ್ಯ ಅಧಿಕಾರಿಗಳ ಕಾರ್ಯಾಚರಣೆಯಿಂದ ನೆನ್ನೆ ರಾತ್ರಿ ಹುಲಿ ಬೋನಿಗೆ ಬೋನಿಗೆ ಬಿದ್ದಿದ್ದು , ಗ್ರಾಮಸ್ಥರಿಗೆ ನಿಟ್ಟುಸಿರು ಬಿಡುವಂತಾಗಿದೆ. ಅರಣ್ಯ ಅಧಿಕಾರಿಗಳು ಹುಲಿಗೆ ರೇಡಿಯೋ ಕಾಲರ್ ಅಳವಡಿಸಿ ಮತ್ತೆ ಹುಲಿಯನ್ನು ಕಾಡಿಗೆ ಬಿಟ್ಟರು. ಹಾಗೂ ಅದನ್ನು ಆರೋಗ್ಯ ಪರಿಶೀಲನೆಗಾಗಿ ಅಧಿಕಾರಿಗಳು ಭೇಟಿ ನೀಡಿದರು ಮತ್ತು ಹುಲಿಯ ಸುರಕ್ಷತೆ ನಮ್ಮೆಲ್ಲರ ಹೊಣೆ ವನ್ಯ ಪ್ರಾಣಿಗಳನ್ನು ಕೊಲ್ಲಬಾರದು ಇದು ನಮ್ಮ ರಾಷ್ಟ್ರೀಯ ಪ್ರಾಣಿ ಎಂದು ಜನರಿಗೆ ತಿಳುವಳಿಕೆ ಮೂಡಿಸಿದರು.