ಚಿತ್ರದುರ್ಗ ಜಿಲ್ಲೆಯಲ್ಲಿ ಮೊದಲನೇ ಬಾರಿಗೆ ರಾಜ್ಯ ಕನ್ನಡ ಸಾಹಿತ್ಯ ಪರಿಷತ್ ವಾರ್ಷಿಕ ಸಾಮಾನ್ಯ ಸಭೆ ಏರ್ಪಡಿಸಲಾಗಿದೆ ರಾಜ್ಯ ಮತ್ತು ನೆರೆ ರಾಜ್ಯದ ಎಲ್ಲಾ ಅಜೀವ ಸದಸ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶವಿದೆ ಎಂದು ಸಭೆಯ ತಿಳುವಳಿಕೆ ಪ್ರಕಟಣೆಯನ್ನು ಕನ್ನಡ ಕನ್ನಡ ಸಾಹಿತ್ಯ ಪರಿಷತ್ ವೆಬ್ ನಲ್ಲಿ ಪ್ರಕಟಿಸಲಾಗಿದೆ. ಆಯಾ ಜಿಲ್ಲೆ ತಾಲೂಕು ಹೋಬಳಿ ಅಧ್ಯಕ್ಷರು ತಮ್ಮ ವ್ಯಾಪ್ತಿಯಲ್ಲಿನ ಕಚೇರಿ ಸೂಚನಾ ಫಲಕಗಳಲ್ಲಿ ಸೂಚನಾ ಸಭಾ ತಿಳುವಳಿಕೆ ಪ್ರಸ್ತಾವನೆಯನ್ನು ತಿಳಿಸಲಾಗಿದೆ. ವಾರ್ಷಿಕ ಸಭೆಯಲ್ಲಿ ಹಿಂದಿನ ವರ್ಷದ ವಾರ್ಷಿಕ ಸಭೆಯ ದೃಡೀಕರಣ ಹಾಗೂ ಲೆಕ್ಕಪತ್ರಗಳ ಮಂಡನೆ ಸೇರಿದಂತೆ ಒಂಬತ್ತು ಅಂಶಗಳ ಕಾರ್ಯ ಸೂಚಿಯಲ್ಲಿವೆ.
ವಾರ್ಷಿಕ ಸಭೆಗೆ ಹಾಜರಾಗುವ ಸದಸ್ಯರು ಕಡ್ಡಾಯವಾಗಿ ಗುರುತಿನ ಪತ್ರ ತರಬೇಕು ಪ್ರಶ್ನೆಗಳನ್ನು ಕೇಳಬಯಸುವವರು ಸದಸ್ಯರು ತಮ್ಮ ಪ್ರಶ್ನೆಯನ್ನು ಪ್ರಶ್ನೆಯನ್ನು ಕನಿಷ್ಠ ಎರಡು ವಾರಗಳ ಮುಂಚೆ ಅಧ್ಯಕ್ಷರು ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ ಬೆಂಗಳೂರು ಇವರಿಗೆ ಕಳಿಸತಕ್ಕದ್ದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ 94495 19100 78, 9980383294, 9538418943, 9880031083
ಕನ್ನಡ ಸಾಹಿತ್ಯ ಪರಿಷತ್ತಿನ ಸಾಮಾನ್ಯ ಸಭೆಯನ್ನು ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲ್ಲೂಕು, ಮಲ್ಲಾಡಿಹಳ್ಳಿಯಲ್ಲಿ ಮಾರ್ಚ್ 10 ಭಾನುವಾರ ಏರ್ಪಡಿಸಲಾಗಿದೆ ಎಂದು ಚಿತ್ರದುರ್ಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನ ಅಧ್ಯಕ್ಷರು ಕೆಎಂ ಶಿವಸ್ವಾಮಿ ತಿಳಿಸಿದ್ದಾರೆ.