ನವದೆಹಲಿ: ಏಕಾಏಕಿ ಎಐಸಿಸಿ (AICC) ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಭದ್ರತೆ ಹೆಚ್ಚಳವಾಗಿದ್ದು, ಕಳೆದ ಮೂರು ದಿನದಿಂದ ಖರ್ಗೆಗೆ Z+ ಸೆಕ್ಯುರಿಟಿ ನೀಡಲಾಗಿದೆ.
ಸ್ಟೇಟ್ ಸೆಕ್ಯುರಿಟಿ ಜೊತೆಗೆ ಸಿಆರ್ ಪಿಎಫ್ Z+ ಸೆಕ್ಯೂರಿಟಿ ಸಹ ನಿಯೋಜನೆ ಮಾಡಲಾಗಿದೆ. ಹೆಚ್ಚುವರಿಯಾಗಿ 8 ಜನ ಸಿ.ಆರ್.ಪಿ.ಎಫ್. (CRPF) ಗನ್ ಮ್ಯಾನ್ ಗಳ ನಿಯೋಜಿಸಲಾಗಿದೆ.
ಇತ್ತೀಚಿಗೆ ಮೂರು ದಿನಗಳ ಹಿಂದೆ ಮಲ್ಲಿಕಾರ್ಜುನ್ ಖರ್ಗೆ ಅವರಿಗೆ ಜೀವ ಬೆದರಿಕೆ ಕರೆಗಳು ಬಂದಿದ್ದು ಆದ್ದರಿಂದ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಜೆಡ್ ಪ್ಲಸ್ ಸೆಕ್ಯೂರಿಟಿ ನೀಡಲಾಗಿದೆ ಎಂದು ವರದಿಗಳು ತಿಳಿಸುವೆ.
ಬೆಂಗಳೂರಿನಲ್ಲಿರುವ ನಿವಾಸದಲ್ಲಿಯೂ ಸಹ ಭದ್ರತೆಯನ್ನು ಒದಗಿಸಲಾಗಿದೆ ಎಂದು ತಿಳಿಸಲಾಗಿದೆ. ಲೋಕಸಭಾ ಎಲೆಕ್ಷನ್ ಸಮೀಪಿಸುತ್ತಿದಂತೆ ಬೆದರಿಕೆ ಕರೆಗಳು ಕೇಂದ್ರ ಹಾಗೂ ರಾಜ್ಯ ಸರ್ಕಾರದ ನಾಯಕರುಗಳ ಮೇಲೆ ಹೆಚ್ಚಾಗುತ್ತಿವೆ ಇದರ ಬೆನ್ನ ಹಿಂದೆ ಯಾರಿದ್ದಾರೆಂದು ತಿಳಿಯುವುದಕ್ಕೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ ಎಂದು ತಿಳಿಸಲಾಗಿದೆ.