ಜಿಲ್ಲೆಯ ಕಲಾದಗಿ ಯಲ್ಲಿರುವ ರಂಭಾಪುರಿ ಪಂಚಗೃಹ ಗುರುಲಿಂಗೇಶ್ವರ ಮಠದಲ್ಲಿ ನಿನ್ನೆ ಭಕ್ತರು ಆಕ್ರೋಶಗೊಂಡಿದ್ದಾರೆ. ಇದಕ್ಕೆ ಕಾರಣ ಮಠದ ಪೀಠಾಧಿಪತಿ ಆಯ್ಕೆ ವಿವಾದ. ಮಠದ ಪೀಠಾಧಿಪತಿಯಾಗಿ ಗಂಗಾಧರ ಶ್ರೀಗಳನ್ನು ನೇಮಕ ಮಾಡಿದ್ದಕ್ಕೆ ಭಕ್ತರು ರೊಚ್ಚಿಗೆದ್ದಿದ್ದಾರೆ.
ಪೀಠಾಧಿಪತಿಯಾಗಿ ಆಯ್ಕೆ ವಿವಾದ ಸದ್ಯ ಕೋರ್ಟ್ನಲ್ಲಿದೆ. ಹೀಗಾಗಿ, ಮಠದ ದುರಸ್ತಿ, ಮಠದ ಆಸ್ತಿ ಸಾಗುವಳಿ ಮಾಡುವಂತಿಲ್ಲ ಅಂತ ಕೋರ್ಟ್ ಆದೇಶಿಸಿತ್ತು. ಆದರೆ ಗಂಗಾಧರ ಸ್ವಾಮೀಜಿ ನಿಯಮ ಉಲ್ಲಂಘಿಸಿದ್ದಾರೆ ಎಂದು ಭಕ್ತರು ಆಕ್ರೋಶಗೊಂಡಿದ್ದರು.ಚಪ್ಪಲಿ ತೂರಿದ ಉದ್ರಿಕ್ತ ಮಹಿಳೆ
ಸಂಘರ್ಷದ ನಡುವೆ ಉದಗಟ್ಟಿ ಗ್ರಾಮದಲ್ಲಿ ಅಡ್ಡಪಲ್ಲಕ್ಕಿ ಕಾರ್ಯಕ್ರಮವಿತ್ತು. ಇದರಲ್ಲಿ ಪಾಲ್ಗೊಳ್ಳಲು ರಂಭಾಪುರಿ ಶ್ರೀ ಕಲಾದಗಿ ಮಾರ್ಗವಾಗಿ ಹೋಗುತ್ತಿದ್ದರು. ಈ ವೇಳೆ ಭಕ್ತರು ಶ್ರೀ ಕಾರನ್ನ ತಡೆಯಲು ಯತ್ನಿಸಿ, ಧಿಕ್ಕಾರ ಕೂಗಿದ್ದರು. ಉದ್ರಿಕ್ತ ಮಹಿಳೆ ಶ್ರೀಗಳ ಕಾರಿನತ್ತ ಚಪ್ಪಲಿ ತೋರಿದ್ದರು. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಭಕ್ತರು ಚಪ್ಪಲಿತೂರಿಲ್ಲ ಎಂದ ರಂಭಾಪುರಿ ಶ್ರೀ
ಕಲಾದಗಿ ಮಠ 50 ಎಕರೆ ಆಸ್ತಿ, ಹೈಸ್ಕೂಲ್, ಕಾಲೇಜು ಸೇರಿ 25 ಕೋಟಿ ರೂ. ಬೆಲೆಬಾಳುತ್ತೆ. ಇದನ್ನ ಹೊಡೆಯುವ ಹುನ್ನಾರ ನಡೀತಿದೆ ಅಂತ ಭಕ್ತರು ಆರೋಪಿಸಿದ್ದಾರೆ. ಈ ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ರಂಭಾಪುರಿ ಶ್ರೀಗಳು, ವಿವಾದ ಕೋರ್ಟ್ನಲ್ಲಿದೆ. ಏನನ್ನೂ ಮಾತಾಡಲ್ಲ. ಆದರೆ ನಮ್ಮ ಕಾರಿನ ಭಕ್ತರು ಚಪ್ಪಲಿ ತೂರಿಲ್ಲ. ಹೂ ಹಾಕಿ ಸ್ವಾಗತಿಸಿದ್ದಾರೆ ಎಂದು ಹೇಳಿದ್ದಾರೆ.
ಬಾಗಲಕೋಟೆ ಜಿಲ್ಲೆ ಕಲಾದಗಿಯಲ್ಲಿರೋ ರಂಭಾಪುರಿ ಪಂಚಗೃಹ ಗುರುಲಿಂಗೇಶ್ವರ ಮಠದ ಪೀಠಾಧಿಪತಿ ವಿವಾದ 8 ವರ್ಷದ ನಂತರ ಮತ್ತೆ ಸ್ಪೋಟವಾಗಿದೆ. ಈ ಇದರ ಮಧ್ಯೆ ರಂಭಾಪುರಿ ಶ್ರೀಗಳ ಕಾರಿನ ಮೇಲೆ ಚಪ್ಪಲಿ ಎಸೆತ ಪ್ರಕರಣಕ್ಕೆ ಸಂಬಂಧಿಸಿದಂತೆ ಪುರುಷರು, ಮಹಿಳೆಯರು ಸೇರಿ 59 ಜನರ ವಿರುದ್ಧ ಬಾಗಲಕೋಟೆ ತಾಲೂಕಿನ ಕಲಾದಗಿ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಮಠಕ್ಕೆ ಪೊಲೀಸರು ಬಿಗಿ ಭದ್ರತೆ ನೀಡಿದ್ದಾರೆ.