ಬೆಂಗಳೂರು ಮನೆ ಬಾಗಿಲಿಗೆ ಬಂತು ಸರ್ಕಾರ – ಸೇವೆಗೆ ಇರಲಿ ಸಹಕಾರ ಹೆಸರಿನಲ್ಲಿ ಇದು ಆರ್ ಆರ್ ನಗರ ಯಶವಂತಪುರ ವಿಧಾನಸಭಾ ಕ್ಷೇತ್ರ ವಿವಿಧ ವ್ಯಾಪ್ತಿಯಲ್ಲಿ ಜನಸ್ಪಂದನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಬೆಂಗಳೂರು ವಿಶ್ವವಿದ್ಯಾಲಯ ಜ್ಞಾನ ಭಾರತಿ ಮೈದಾನದಲ್ಲಿ ಡಿ ಸಿಎಂ ಡಿಕೆ ಶಿವಕುಮಾರ್ ಅವರು ಅಹವಾಲು ಸ್ವೀಕರಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಬಿಜೆಪಿ ಶಾಸಕ ಮುನಿರತ್ನ ಎಸ್ ಟಿ ಸೋಮಶೇಖರ್ ಸಂಸದ ಡಿಕೆ ಸುರೇಶ್ ಭಾಗಿಯಾಗಿದ್ದು ಬಿಬಿಎಂಪಿ ,ಬಿಡಿಎ ,ಬಿ.ಎಂ.ಆರ್.ಸಿ.ಎಲ್, ಬಿ.ಎಂ.ಆರ್.ಡಿ.ಎ, ಬೆಸ್ಕಾಂ, ಜಲ ಮಂಡಳಿ ,ಪೊಲೀಸ್ ಇಲಾಖೆ ,ಕಂದಾಯ ಇಲಾಖೆ, ಗ್ಯಾರಂಟಿ ಯೋಜನೆಗಳನ್ನು ಸಮಸ್ಯೆ ಕುರಿತು ಸ್ಥಳದಲ್ಲಿ ಡಿಕೆ ಶಿವಕುಮಾರ್ ಅವರು ಪರಿಹಾರ ನೀಡಲಿದ್ದಾರೆ.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಡಿಕೆ ಶಿವಕುಮಾರ್ ಮತ್ತು ಮಣಿರತ್ನಂ ಈ ಇಬ್ಬರು ಕಾಂಗ್ರೆಸ್ ಪಕ್ಷದ ಫೌಂಡೇಶನ್ ಭದ್ರವಾಗಿದ್ದರು ಬಾಗಿಲಿಗೆ ಬಂತು ಸರ್ಕಾರ, ಸೇವೆಗೆ ಇರಲಿ ಸಹಕಾರ 20 ಕ್ಷೇತ್ರಗಳನ್ನು ಸುತ್ತಿದ್ದೇನೆ 12 ಕ್ಷೇತ್ರಗಳನ್ನು ಮುಗಿಸಿದ್ದೇನೆ 20000ಕ್ಕೂ ಹೆಚ್ಚು ಅರ್ಜಿಗಳನ್ನು ನೋಂದಣಿ ಆಗಿದೆ. ಸಿಎಂ ಕೂಡ ಎರಡು ಬಾರಿ ಜನಸ್ಪಂದನ ಕಾರ್ಯಕ್ರಮ ಹಮ್ಮಿಕೊಂಡಿದ್ದರು.
ಸಮಸ್ಯೆಗೆ ಪರಿಹಾರ ಕಂಡುಹಿಡಿಯಲು ಪ್ರತ್ಯೇಕ ತಂಡ ಮಾಡಿದ್ದೇವೆ. ಮನೆ ಬಾಗಿಲಿಗೆ ಬಂದ ಉದ್ದೇಶ ನೀವು ನಮ್ಮ ಮನೆ ಬಾಗಿಲಿಗೆ ಬರಬಾರದು ಅಂತ ನಮಗೆ ಅನೇಕ ಜವಾಬ್ದಾರಿ ಕಾನೂನಿನ ಚೌಕಟ್ಟು ಇರುತ್ತವೆ . ಜನರನ್ನು ಪ್ರೋತ್ಸಾಹಿಸಲು ಜನರ ಹಿಂದೆ ನಾವೇ ಹೋಗಬೇಕು ಅಂತ ಹೇಳಿ ಜನರ ಅಭಿವೃದ್ಧಿಗಾಗಿ ಈ ಕಾರ್ಯಕ್ರಮ ರೂಪಿಸಿದ್ದೇವೆ. ನಮ್ಮ ಸರ್ಕಾರ ಸದಾ ನಿಮ್ಮ ಜೊತೆ ಇರುತ್ತೆ ನಿಮ್ಮ ಸಮಸ್ಯೆಗಳನ್ನೆಲ್ಲಾ ಒಂದೇ ದಿನದಲ್ಲಿ ಬಗೆಹರಿಸುತ್ತೇನೆ ಅಂತ ನಾನು ಹೇಳಲ್ಲ ಅಧಿಕಾರಿಗಳಿಂದ ಬಗೆಹರಿಯದ ಕೆಲಸ ಇಲ್ಲಿ ಬಗೆಹರಿಸಿಕೊಳ್ಳೋಕೆ ಬಂದಿದ್ದೇವೆ.
ಬೇರೆ ಬೇರೆ ಕ್ಷೇತ್ರದಲ್ಲಿ ವಾಟರ್ ಮಾಫಿಯಾ ನಡೆಯುತ್ತಿದೆ ಜಲಮಂಡಳಿಯ ನೀರನ್ನು ಇಟ್ಟುಕೊಂಡು ಮಾಫಿಯ ಮಾಡುತ್ತಿದ್ದಾರೆ. ಡಿಸಿಎಂ ಅವರು ಈ ಬಗ್ಗೆ ಗಮನ ಹರಿಸಬೇಕು ಕೆರೆಗಳು ಕೂಡ ಮಾಯ ಆಗಿವೆ ಕೆರೆಗಳನ್ನು ಪುನರುಜ್ಜೀವನ ಮಾಡಿ ಅಂತರ್ಜಲ ವೃದ್ಧಿ ಮಾಡಿ ಈ ಕೆಲಸವಾದರೆ ಮುಂದಿನ ಪೀಳಿಗೆಗೆ ಅನುಕೂಲವಾಗುತ್ತದೆ. ಬೇರೆ ಬೇರೆ ಉದ್ದೇಶಕ್ಕೆ ಕೆರೆಗಳನ್ನು ಬಳಸುತ್ತಾರೆ ದಯವಿಟ್ಟು ಸರ್ಕಾರ ಕೆರೆಗಳ ಬಗ್ಗೆ ಗಮನಹರಿಸಬೇಕು ಎಂದು ಡಿಕೆ ಸುರೇಶ್ ಮನವಿ ಮಾಡಿಕೊಂಡರು.
ಶಾಸಕ ಮುನಿರತ್ನಂ ರವರು ವೇದಿಕೆಗೆ ಬರುತ್ತಿದ್ದಂತೆ ಡಿಕೆಶಿಗೆ ಜನ ಜೈಕಾರ ಹಾಕಿದರು. ಈ ವೇಳೆಯಲ್ಲಿ ಸಿಡಿಮಿಡಿ ಕೊಂಡ ವಿ. ಮುನಿರತ್ನ ಇದು ಜಿಂದಾಬಾದ್ ಕೂಗುವಂತ ಕಾರ್ಯಕ್ರಮವಲ್ಲ, ಇದು ಸರ್ಕಾರದ ಕಾರ್ಯಕ್ರಮ ಘೋಷಣೆ ಕೂಗುವುದು ಬೇಡ ಎಂದರು.