ಸ್ಯಾಂಡಲ್ವುಡ್ ನಟ ಡಾಲಿ ಧನಂಜಯ್ ( Dolly Dhananjay ) ಪಾಲಿಟಿಕ್ಸ್ಗೆ ಎಂಟ್ರಿ ಕೊಡಲಿದ್ದಾರೆ ಎನ್ನುವ ಸುದ್ದಿ ಭಾರೀ ಸದ್ದು ಮಾಡ್ತಿದೆ. ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಿಂದ (Mysore-Kodagu Lok Sabha Constituency) ಡಾಲಿ ಧನಂಜಯ್ ಅಖಾಡಕ್ಕೆ ಇಳೀತಾರೆ ಎನ್ನಲಾಗ್ತಿದೆ. ಪ್ರತಾಪ್ ಸಿಂಹ (MP Pratap Simha) ಎದುರು ಕಾಂಗ್ರೆಸ್ ಡಾಲಿ ಧನಂಜಯ್ ಅವರನ್ನು ಕಣಕ್ಕಿಳಿಸಲು ಪ್ಲಾನ್ ಮಾಡಿದೆ ಎನ್ನುವ ಮಾತುಗಳು ಕಾಂಗ್ರೆಸ್ ವಲಯದಲ್ಲಿ ಕೇಳಿ ಬರ್ತಿದೆ. ಡಾಲಿ ಧನಂಜಯ್ ಬಗ್ಗೆ ಸಿಎಂ ಸಿದ್ದರಾಮಯ್ಯ ಕೂಡ ಪ್ರತಿಕ್ರಿಯಿಸಿದ್ದಾರೆ. ಕಾಂಗ್ರೆಸ್ ಹೈಕಮಾಂಡ್ ನಿರ್ಧರಿಸುತ್ತದೆ.
ಡಾಲಿ ಧನಂಜಯ್ ಸ್ಪರ್ಧೆ ಬಗ್ಗೆ ಕಾಂಗ್ರೆಸ್ ನಲ್ಲಿ ಭಾರೀ ಚರ್ಚೆಗಳು ನಡೆಯುತ್ತಿದೆ. ಕೆಲ ನಾಯಕರು ಕೂಡ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಮಂಗಳೂರಿನಲ್ಲಿ ಮಾತಾಡಿದ ಸಚಿವ ದಿನೇಶ್ ಗುಂಡೂರಾವ್ ಯಾರು ಸ್ಪರ್ಧೆ ಮಾಡಬೇಕು ಅನ್ನೋದನ್ನು ಕಾಂಗ್ರೆಸ್ ಹೈಕಮಾಂಡ್ ನಿರ್ಧರಿಸುತ್ತದೆ ಎಂದು ಹೇಳಿದ್ದಾರೆ. ಮೈಸೂರು, ಕೊಡಗು ಲೋಕಸಭಾ ಕ್ಷೇತ್ರ ಬಿಜೆಪಿಗೆ ಸೇರಿದೆ
ದೆಹಲಿಯಲ್ಲಿ ಬಿಜೆಪಿ ರಾಷ್ಟ್ರೀಯ ಸಮಾವೇಶದಲ್ಲಿ ಭಾಗವಹಿಸುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಚಿವ ಎಸ್.ಎ.ರಾಮ್‍ದಾಸ್, ಡಾಲಿ ಧನಂಜಯ್ ಕಾಂಗ್ರೆಸ್ ಅಭ್ಯರ್ಥಿ ಮಾಡುವುದಾದರೆ ನಮ್ಮ ಅಭ್ಯಂತರವಿಲ್ಲ. ಅವರು ಯಾರನ್ನಾದರೂ ಅಭ್ಯರ್ಥಿ ಮಾಡಿಕೊಳ್ಳಲಿ. ಆದರೆ ಮೈಸೂರು, ಕೊಡಗು ಲೋಕಸಭಾ ಕ್ಷೇತ್ರ ಬಿಜೆಪಿಗೆ ಸೇರಿದೆ ಎಂದು ಹೇಳಿದ್ರು.
ಡಾಲಿ ಧನಂಜಯ ಅವರು ಒಬ್ಬ ನಟನಾಗಿ, ನಿರ್ಮಾಪಕನಾಗಿ ದೊಡ್ಡ ಜನಪ್ರಿಯತೆಯನ್ನು ಪಡೆದಿದ್ದಾರೆ. ಸಿನಿಮಾಗಳನ್ನು ನಿರ್ಮಿಸಿ ಹೊಸ ಅಲೆ ಕ್ರಿಯೇಟ್ ಮಾಡಿದ್ದಾರೆ. ಬಡವರ ಮಕ್ಕಳು ಬೆಳೆಯಬೇಕು ಎನ್ನುವ ಡಾಲಿ ಧನಂಜಯ್ ಮಾತಿನಲ್ಲಿ ಅಭಿಮಾನಿಗಳಿಗೂ ಇಷ್ಟವಾಯ್ತು. ಫ್ಯಾನ್ ಫಾಲೋಯಿಂಗ್ ಅಪಾರವಾಗಿದೆ. ಡಾಲಿ ಧನಂಜಯ ಲಿಂಗಾಯತರು ಆಗಿದ್ದು ಮೈಸೂರಿನಲ್ಲಿ ಕಡಕ್ಕಿಳಿಸುವ ಪ್ಲಾನ್ ಮಾಡಲಾಗಿದೆ. ಸಾಲು ಸಾಲು ಸಿನಿಮಾಗಳಲ್ಲಿ ನಟ ಡಾಲಿ ಧನಂಜಯ್ ಬ್ಯುಸಿ ಆಗಿದ್ದಾರೆ. ರಾಜಕೀಯ ಸ್ಪರ್ಧೆ ಬಗ್ಗೆ ನಟ ಯಾವುದೇ ಸ್ಪಷ್ಟನೆ ನೀಡಿಲ್ಲ.