ಸಾಯುವ ಮುನ್ನ ಮಗನ ಗ್ಯಾರಂಟಿ ಅಭಯ!
ಅನಾರೋಗ್ಯದಿಂದ ಅಕಾಲಿಕ ಮರಣಕ್ಕೆ ತುತ್ತಾದ ಈ ಬಡತಾಯಿಯ ಮಗನ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ.
ಗೃಹಲಕ್ಷ್ಮಿ ಯೋಜನೆ ದುಡ್ಡು ನಿನಗೆ ಬರುತ್ತೆ, ನಾನಿಲ್ಲ ಎಂದು ಚಿಂತಿಸಬೇಡ’ ಎಂದು ಮಗನ ಮಾತನ್ನು ನೆನಪು ಮಾಡಿಕೊಂಡು ಆತನ ಶವದೆದುರು ತಾಯಿ ರೋದಿಸುತ್ತಿರುವುದನ್ನು ನೋಡಿ ಎದೆ ಭಾರವಾಯಿತು.
ಯಾವ ತಾಯಿಗೂ ಎದೆಯೆತ್ತರಕ್ಕೆ ಬೆಳೆದ ಮಗನ ಚಿತೆಗೆ ಅಗ್ನಿಸ್ಪರ್ಶ ಮಾಡುವ ಸ್ಥಿತಿ ಬಾರದಿರಲಿ.
ನಾವು ಗೃಹಲಕ್ಷ್ಮಿ ಯೋಜನೆ ಘೋಷಣೆ ಮಾಡಿದ ದಿನದಿಂದ ಇಂದಿನ ವರೆಗೆ ಕೆಲವರಿಂದ ಅಪಪ್ರಚಾರ, ಟೀಕೆ, ವ್ಯಂಗ್ಯಗಳು ವ್ಯಕ್ತವಾಗುತ್ತಲೇ ಇದೆ, ಇದಾವುದಕ್ಕೂ ನಾನು ತಲೆಕೆಡಿಕೊಂಡಿಲ್ಲ. ಕಾರಣ ಇಂತಹ ಲಕ್ಷಾಂತರ ಬಡತಾಯಂದಿರಿಗೆ ನಮ್ಮ ಯೋಜನೆ ಮೂರು ಹೊತ್ತು ನೆಮ್ಮದಿಯ ಅನ್ನ ನೀಡಿ ಬದುಕಿಗೆ ಆಧಾರವಾಗಿದೆ. ಬಡತನ, ಹಸಿವು, ಅನಾಥಭಾವ ಅನುಭವಿಸಿದವರಿಗಷ್ಟೇ ಅದರ ನೋವು, ಹತಾಶೆ ಅರಿವಾಗಲು ಸಾಧ್ಯ.
ಈ ತಾಯಿಯ ಜೊತೆ ನಮ್ಮ ಸರ್ಕಾರ ಇದೆ, ಮಗನ ಸಾವಿನ ದುಃಖದಿಂದ ಆದಷ್ಟು ಬೇಗ ಹೊರಬರಲಿ ಎಂದು ಹಾರೈಸುತ್ತೇನೆ.
ಸಾಯುವ ಮುನ್ನ ಮಗನ ಗ್ಯಾರಂಟಿ ಅಭಯ!
ಸಿಎಂ ಸಿದ್ದರಾಮಯ್ಯವರೆಗೂ ಹೋಗಿದ್ದ ತಾಯಿಯ ಅಳು | ಸಚಿವೆ ಲಕ್ಷ್ಮಿ ಹೆಬ್ಬಾಳ್ಳರ್ ಕರೆ ಮಾಡಿ ಸಾಂತ್ವನ | ವರ್ಷದ ಮೊತ್ತ 24 ಸಾವಿರ ಒಂದೇ ಗಂಟಿನಲ್ಲಿ ಹಸ್ತಾಂತರ
ನೀ ಬದುಕಾಕ ಗೃಹಲಕ್ಷ್ಮಿ ಯೋಜನೆಯ 2 ಸಾವಿರ ರು. ಬರ್ತಾವ ಬಿಡು’ ಎಂದು ಮಗ ಸಾಯುವ ಮುನ್ನ ಹೇಳಿದ್ದ ಎಂದು ಪುತ್ರನ ಪಾರ್ಥಿವ ಶರೀರದೆದುರು ತಾಯಿ ಕಣ್ಣೀರು ಹಾಕುತ್ತಿದ್ದರೆ ಸುತ್ತ ನೆರೆದಿದ್ದವರ ಕಣ್ಣಾಲಿಗಳಲ್ಲೂ ಕಂಬನಿ ಧಾರೆಯಾಗಿತ್ತು.
ಸ್ಥಳದಲ್ಲಿದ್ದವರು ಈ ದೃಶ್ಯವನ್ನು ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಬಳಿಕ ಭಾರೀ ವೈರಲ್ ಆಗಿತ್ತು. ಕೊನೆಗೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾ ಸಿದ್ದರಾಮಯ್ಯ ಅವರವರೆಗೂ ತಲುಪಿತು. ಕಾಂಗ್ರೆಸ್ ಆಡಳಿತ ರಾಜ್ಯದಲ್ಲಿ ಜಾರಿಗೆ ತಂದ ‘ಗ್ಯಾರಂಟಿ ಯೋಜನೆ’ಗಳಲ್ಲಿ ಒಂದಾದ ‘ಗೃಹಲಕ್ಷ್ಮಿ’ಯ ಸಾಧ್ಯತೆಗಳನ್ನು ಈ ವಿಡಿಯೋ ತೆರೆದಿಟ್ಟಿದೆ. ಕೆಲ ದಿನಗಳ ಹಿಂದೆ ಸವದತ್ತಿ ತಾಲೂಕಿನ ಮರಕುಂಬಿ ಗ್ರಾಮದ ವಿಶ್ವನಾಥ ಗುರಕ್ಕನವರ(34) ಅನಾರೋಗ್ಯದಿಂದ ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದ ವರು ಚಿಕಿತ್ಸೆ ಫಲಕಾರಿಯಾಗದೇ ಶನಿವಾರ ಮೃತಪಟ್ಟರು. ಮಗನ ಅಂತ್ಯಸಂಸ್ಕಾರ ಮಾಡಲು ಕೈಯಲ್ಲಿ ಹಣವಿಲ್ಲದೇ ತಾಯಿ ನೀಲವ್ವ ಅಸಹಾಯಕಳಾಗಿದ್ದಳು. ಸ್ಥಳೀಯ ಸ್ವಯಂಸೇವಾ ಸಂಘದ ಸದಸ್ಯರೇ ಮುಂದಾಗಿ ಅಂತಿಮ ವಿಧಿವಿಧಾನ ನೆರವೇರಿಸಿಕೊಟ್ಟಿದ್ದರು. ಮಗನ ಅಂತ್ಯಸಂಸ್ಕಾರ ಸಂದರ್ಭ ತಾಯಿ ಕಣ್ಣೀರು ಹಾಕುತ್ತಾ ‘ಗೃಹಲಕ್ಷ್ಮಿ ಯೋಜನೆ’ ಬಗ್ಗೆ ಮಾತನಾಡಿದ್ದರು.
ವಿಡಿಯೋ ವೀಕ್ಷಿಸಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಳರ್ ಅವರು, ಮರಕುಂಬಿ ಗ್ರಾಮಕ್ಕೆ ಭಾನುವಾರ ಆಪ್ತ ಸಹಾಯಕನನ್ನು ಕಳುಹಿಸಿಕೊಟ್ಟು, ಗೃಹಲಕ್ಷ್ಮಿ ಯೋಜನೆಯಡಿ ಒಂದು ವರ್ಷಕ್ಕೆ ಜಮಾ ಆಗುವಷ್ಟು ಹಣ ವನ್ನು (24 ಸಾವಿರ ) ನೀಲವ್ವ ಅವರಿಗೆ ತಲುಪುವಂತೆ ಮಾಡಿದ್ದಾರೆ. ನೊಂದ ತಾಯಿಗೆ ಕರೆ ಮಾಡಿದ ಸಚಿವೆ ಸಾಂತ್ವನ ಹೇಳಿದ್ದಾರೆ.
ಗಂಡನ ಕಳೆದುಕೊಂಡ ನಾನು ಬಿದ್ದ ಮನೆಯಲ್ಲಿ ವಾಸವಿದ್ದೆ. ಕೂಲಿ ಮಾಡಿಕೊಂಡು ಬದುಕು ಸಾಗಿಸುವಾಗಲೇ ಈಗ ಜೊತೆಗಿದ್ದ ಮಗ ಅನಾರೋಗ್ಯದಿಂದ ಸಾವನ್ನಪ್ಪಿದ್ದಾನೆ. ಗೃಹಲಕ್ಷ್ಮೀ ಯೋಜನೆಯಿಂದ ಬದುಕು ಸಾಗುತ್ತಿದೆ. ನೀಲವ್ವ ಗುರಕ್ಕನವರ
ಗೃಹಲಕ್ಷ್ಮೀ ಯೋಜನೆ ರಾಜ್ಯದ ಮಹಿಳೆಯರ ಸಂಕಷ್ಟದ ಸಂದರ್ಭದಲ್ಲಿ ನೆರವಾಗಿದೆ. ಬೆಳಗಾವಿಯ ನೊಂದ ಮಹಿಳೆ ಪರಿಸ್ಥಿತಿ ನೋವು ತರಿಸಿತು. ಈಗಾಗಲೇ ವೈಯಕ್ತಿಕವಾಗಿ ನೀಲವ್ವ ಅವರಿಗೆ ನೆರವು ನೀಡಲಾಗಿದ್ದು, ಅವರಿಗೆ ದುಃಖ ಭರಿಸುವ ಶಕ್ತಿ ಭಗವಂತ ನೀಡಲಿ. – ಲಕ್ಷ್ಮೀ ಹೆಬ್ಬಾಳ್ವರ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ.