Breaking
Mon. Dec 23rd, 2024

ಅಂತರಾಷ್ಟ್ರೀಯ ಕೃಷ್ಣ ಪ್ರಜಾಸಂಘ ಹಾಗೂ ರಾಂಪುರ ಇಸ್ಕಾನ್‌ನಿಂದ ನೂತನ ಶ್ರೀ ಕೃಷ್ಣ ಮಂದಿರದ ಭೂಮಿ ಪೂಜೆ ಕಾರ್ಯಕ್ರಮ ನಡೆಯಿತು

ಮೊಳಕಾಲ್ಮುರು:-ರಾಂಪುರದ ವೆಂಕಟಶಾಂತ ನಗರದಲ್ಲಿ ಅಂತರಾಷ್ಟ್ರೀಯ ಕೃಷ್ಣ ಪ್ರಜಾಸಂಘ ಹಾಗೂ ರಾಂಪುರ ಇಸ್ಕಾನ್‌ನಿಂದ ನೂತನ ಶ್ರೀ ಕೃಷ್ಣ ಮಂದಿರದ ಭೂಮಿ ಪೂಜೆ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ನೆಲ್ಲೂರು ಇಸ್ಕಾನ್ ಅಧ್ಯಕ್ಷ ಸುಖ ದೇವ ಮಹಾರಾಜ್ ಮಾತನಾಡಿ

ಭಗವಂತನ ದಯೆ ಇಲ್ಲದೆ ಹುಲ್ಲುಕಡ್ಡಿಯು ಅಲುಗಾಡಲು ಸಾಧ್ಯವಿಲ್ಲ. ಪತಿ ಜೀವರಾಶಿಗೂ ಭಗವಂತನೇ ಆಧಾರವಾಗಿದ್ದು, ನಾವು ಕೈಗೊಳ್ಳುವ ಪುಣ್ಯ ಕಾರ್ಯಗಳ ಮೇಲೆ ಫಲ ಲಭಿಸಲಿದೆ. ಪ್ರತಿಯೊಬ್ಬರೂ ಸ್ವಾರ್ಥರಹಿತ ಜೀವನ ನಡೆಸಬೇಕು ಎಂದರು.

ರಾಜ್ಯ ಇಸ್ಕಾನ್ ಕಾರ್ಯದರ್ಶಿ ಸುಧೀರ್ ಚೈತನ್ಯ ಪಧುಜೀ ಮಾತನಾಡಿ, ಬಳ್ಳಾರಿಯ ಭೂದಾನಿಗಳು ಸುಮಾರು ಅರ್ಧ ಎಕರೆ ಪ್ರದೇಶದ ಭೂಮಿಯನ್ನು ದಾನವಾಗಿ ನೀಡಿದ್ದಾರೆ. ಭಗವಂತನ ಇಚ್ಛೆ ಇದ್ದಲ್ಲಿ ಶ್ರೀ ಕೃಷ್ಣ ಮಂದಿರ ಭವ್ಯವಾಗಿ ನಿರ್ಮಾಣವಾಗಲಿದೆ ಎಂದರು.

ಕಾರ್ಯಕ್ರಮಕ್ಕೂ ಮುಂಚೆ ಯಜ್ಜ ಹೋಮ, ಭೂವರಹ ಸ್ವಾಮಿ ಹೋಮಗಳನ್ನು ಕೈಗೊಳ್ಳಲಾಯಿತು.

ಕಾರ್ಯಕ್ರಮದಲ್ಲಿ 1500 ಕ್ಕೂ ಹೆಚ್ಚು ಭಕ್ತರು ಪಾಲ್ಗೊಂಡಿದ್ದರು, ಎಲ್ಲರಿಗೂ ಪ್ರಸಾದ ವಿನಿಯೋಗ ನಡೆಯಿತು.

ಕಾರ್ಯಕ್ರಮದಲ್ಲಿ ವೇಣುಕೃಷ್ಣ ಪಭು ಜೀ, ತಿವಿಕ್ರಮ ಕೃಷ್ಣ ಪಭು ಜೀ. ಭೂ ದಾನಿಗಳಾದ ಬಳ್ಳಾರಿಯ ವಡ್ಡಿ ವೆಂಕಟೇಶಲು, ವೀರೇಶ್, ವಡ್ಡಿ ಸುಧೀರ್ ಕುಮಾರ್, ಚಂದ್ರಮುಖ ನಾರಾಯಣ ದಾಸ್ ಸೇರಿದಂತೆ ಹಲವರಿದ್ದರು.

Related Post

Leave a Reply

Your email address will not be published. Required fields are marked *