ಚಿತ್ರದುರ್ಗದ ಜಿಲ್ಲಾಧಿಕಾರಿ ಕಚೇರಿ ಬಳಿ ಸೋಮವಾರ ಸಂಜೆ 4.30 ಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಡಿ ಸುಧಾಕರ್ ಗೆ ರೈತರು ಗೆರಾವ್ ಹಾಕಿ ಪ್ರತಿಭಟನೆ ನಡೆಸಿದ್ದಾರೆ. ಇನ್ನೂ ಚಿತ್ರದುರ್ಗದ ಜಿಲ್ಲಾ ಪಂಚಾಯತಿ ಕಚೇರಿ ಬಳಿ ರೈತ ಸಂಘದ ವತಿಯಿಂದ ಕಳೆದ 15 ದಿನಗಳಿಂದ ಕೇಂದ್ರ ಸರ್ಕಾರ ಭದ್ರಾ ಮೇಲ್ದಂಡೆ ಯೋಜನೆಗೆ ಹಣ ಬಿಡುಗಡೆ ಮಾಡುವಂತೆ ಆಗ್ರಹಿಸಿ ಅನಿರ್ಧಿಷ್ಟಾವದಿ ಪ್ರತಿಭಟನೆ ನಡೆಸುತ್ತಿದ್ದು ಕೇಂದ್ರ ಸರ್ಕಾರ ಹಣ ಬಿಡುಗಡೆ ಮಾಡಿರುವುದಿಲ್ಲ. ಅಷ್ಟೇ ಅಲ್ಲದೆ ಮೊನ್ನೆ ತಾನೆ ರಾಜ್ಯ ಸರ್ಕಾರ ಸಹ ಬಜೆಟ್ ಮಂಡನೆ ಮಾಡಿದ್ದು ಇಲ್ಲೂ ಕೂಡ ರಾಜ್ಯ ಸರ್ಕಾರ ಬಜೆಟ್ ನಲ್ಲಿ ಭದ್ರಾ ಮೇಲ್ದಂಡೆ ಯೋಜೆನೆಗೆ ಅನುಧಾನ ಕೊಡದ ಹಿನ್ನೆಲೆ ರೈತರು ರೊಚ್ಚಿಗೆದ್ದರು. ಇನ್ನೂ ವಿ ವಿ ಸಾಗರ ಜಲಾಶಯದ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಹರಿಸಲು ಸಲಹಾ ಸಮಿತಿ ಸಭೆಯನ್ನ ಸಚಿವರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ಸಂಜೆ 4.30 ಕ್ಕೆ ಡಿ ಸುಧಾಕರ್ ಅವರು ಸಭೆ ಹಮ್ಮಿಕೊಂಡಿದ್ದು ಸಭೆಗೆ ಅವರು ಬರುತ್ತಿದ್ದಂತೆ ರೈತ ಸಂಘದ ಸದಸ್ಯರು ಸಚಿವ ಡಿ ಸುಧಾಕರ್ ರನ್ನ ಗೇರಾವ್ ಹಾಕಿ ಸಚಿವರ ವಿರುದ್ದ ಘೋಷಣೆಗಳನ್ನ ಕೂಗಿ ಆಕ್ರೋಷ ವ್ಯಕ್ತಪಡಿಸಿದ್ದು ಕಂಡು ಬಂದಿದ್ದು ಈ ವೇಳೆ ಸಚಿವರು ರೈತರನ್ನ ಮಾತನಾಡಿಸದೆ ಜಿಲ್ಲಾಧಿಕಾರಿ ಕಚೇರಿ ಒಳಗೆ ತೆರಳಿದ್ದು ಇದರಿಂದ ಅಸಮಾಧಾನ ಗೊಂಡ ರೈತರು ಇನ್ನೂ ಹೆಚ್ಚು ಸಚಿವರ ವಿರುದ್ಧ ಘೋಷಣೆಗಳನ್ನ ಕೂಗಿ ಆಕ್ರೋಷ ವ್ಯಕ್ತಪಡಿಸಿದ್ದು ಕಂಡು ಬಂದಿದೆ.