ಭಾಗೆಪಲ್ಲಿ ರಸ್ತೆ ತಿರುಗು ಪಡೆಯುತ್ತಿದ್ದಾಗ ಕಾರಿಗೆ ಲಾರಿ ಡಿಕ್ಕಿಯಾಗಿ ಮಹಿಳೆಯೊಬ್ಬರು ಸ್ಥಳದಲ್ಲೇ ಮೃತಪಟ್ಟು ಆರು ಜನರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಬಾಗೇಪಲ್ಲಿಯಲ್ಲಿ ನಡೆದಿದೆ.
ಮೃತಪಟ್ಟ ಮಹಿಳೆಯನ್ನು ನೆರೆಯ ಆಂಧ್ರಪ್ರದೇಶದ ಪಾಪಸಮಲಪಲ್ಲಿ ಗ್ರಾಮದ ವೆನ್ನಿಲಾ 33 ವರ್ಷ ಎಂದು ತಿಳಿದ ಬಂದಿದೆ. ನೆರೆಯ ಆಂಧ್ರಪ್ರದೇಶದ ಪಾತಸಾಮಪಲ್ಲಿ ಗ್ರಾಮದ ವೆನಿಲ್ಲಾ ಮತ್ತು ಕುಟುಂಬದವರು ಮುಂಜಾನೆ ಸುಮಾರು 450ರ ಸಮಯದಲ್ಲಿ ತಾಲೂಕಿನ ಕಾಶಾಪುರ ಗ್ರಾಮದ ಮೂಲಕ ಟಾಟಾ ಸಫಾರಿ ಕಾರಿನಲ್ಲಿ ಬೆಂಗಳೂರಿಗೆ ಹೋಗುತ್ತಿದ್ದಾಗ ರಾಷ್ಟ್ರೀಯ ಹೆದ್ದಾರಿ 44 ರ ಗ್ರೀನ್ ಪಾರ್ಕ್ ರೆಸ್ಟೋರೆಂಟ್ ಬಳಿ ರಾಷ್ಟ್ರೀಯ ಹೆದ್ದಾರಿಯ ತಿರುಗು ಪಡೆಯುವಾಗ ಬೆಂಗಳೂರು ಕಡೆಯಿಂದ ಹೈದರಾಬಾದ್ ಕಡೆಗೆ ಹೋಗುತ್ತಿದ್ದ ಲಾರಿ ಡಿಕ್ಕಿ ಹೊಡೆದಿದೆ ಡಿಕ್ಕಿ ಹೊಡೆದ ರಭಸಕ್ಕೆ ವೆನ್ನೆಲ್ಲಾ ಸ್ಥಳದಲ್ಲೇ ಮೃತಪಟ್ಟಿದ್ದು ಕಾರಿನಲ್ಲಿದ್ದ ಚೌಡರೆಡ್ಡಿ 65 ವರ್ಷ, ಸುನಂದಮ್ಮ ಐವತ್ತು ವರ್ಷ, ಶಿವಕುಮಾರ್ 35 ವರ್ಷ, ಶ್ರಾವಣಿ 11 ವರ್ಷ ಪುನೀತ್ ಕುಮಾರ್, ಐದು ವರ್ಷ ವಯಸ್ಸು ಆಗಿದ್ದು ಒಟ್ಟು ಆರು ಜನರಿಗೆ ಗಂಭೀರವಾಗಿ ಗಾಯಗೊಂಡಿದ್ದು ಬೆಂಗಳೂರಿನ ಆಸ್ಪತ್ರೆಗೆ ರವಾನಿಸಲಾಗಿದೆ.
ಈ ತಿರುವಿನಲ್ಲಿ ಪದೇ ಪದೇ ಅಪಘಾತಗಳು ಸಂಭವಿಸುವುದರಿಂದ ಇಂದು ಬೆಳಗ್ಗೆ ಘಟನೆ ಸ್ಥಳಕ್ಕೆ ಬಾಗೇಪಲ್ಲಿ ಶಾಸಕ ಎಸ್ ಎನ್ ಸುಬ್ಬಾರೆಡ್ಡಿ ಪೊಲೀಸ್ ಠಾಣೆಯ ಆರಕ್ಷಕ ನಿರೀಕ್ಷಕ ಪ್ರಶಾಂತ್ ವರ್ಣಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.