ಭಾರತದ ಟಾಪ್ ಸೆಲೆಬ್ರಿಟಿ ಜೋಡಿ ವಿರಾಟ್ ಕೊಹ್ಲಿ (Virat Kohli) ಮತ್ತು ಅನುಷ್ಕಾ ಶರ್ಮಾ (Anushka Sharma) ಗಂಡು ಮಗುವಿನ ಪೋಷಕರಾಗಿದ್ದಾರೆ. ನಟಿ ಅನುಷ್ಕಾ ಶರ್ಮಾ ಗಂಡು ಮಗುವಿಗೆ ಜನ್ಮ ನೀಡಿದ್ದು, ಖುಷಿಯ ಸುದ್ದಿಯನ್ನು ಇನ್ಸ್ಟಾಗ್ರಾಂನಲ್ಲಿ ವಿರಾಟ್ ಕೊಹ್ಲಿ ಹಂಚಿಕೊಂಡಿದ್ದಾರೆ. ಅನುಷ್ಕಾ ಶರ್ಮಾ ಹಾಗೂ ವಿರಾಟ್ ಕೊಹ್ಲಿಗೆ ಈಗಾಗಲೇ ಒಂದು ಹೆಣ್ಣು ಮಗುವಿದೆ. ಇದೀಗ ಗಂಡು ಮಗುವನ್ನು ಕುಟುಂಬಕ್ಕೆ ಸ್ವಾಗತಿಸಿದ್ದಾರೆ. ಫೆಬ್ರವರಿ 15ರಂದೇ ಅನುಷ್ಕಾ ಶರ್ಮಾ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಆದರೆ ಸುದ್ದಿಯನ್ನು ತಡವಾಗಿ ಹಂಚಿಕೊಳ್ಳಲಾಗಿದೆ.
ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ 2017ರಲ್ಲಿ ವಿವಾಹವಾದರು. 2021ರಲ್ಲಿ ಮೊದಲ ಮಗು ವಮಿಕಾಗೆ ಅನುಷ್ಕಾ ಶರ್ಮಾ ಜನ್ಮ ನೀಡಿದರು. ಈಗ 2024ರ ಫೆಬ್ರವರಿ 15ರಂದು ಅಕಾಯ್ಗೆ ಜನ್ಮ ನೀಡಿದ್ದಾರೆ. ಅಕಾಯ್ ಎಂದರೆ ಟರ್ಕಿಶ್ನಲ್ಲಿ ಹೊಳೆಯುವ ಚಂದ್ರ ಎಂಬ ಅರ್ಥವಿದೆ. ಹಿಂದಿಯಲ್ಲಿ ಕಾಯ ಇಲ್ಲದವ ಅಥವಾ ಶಿವ ಎಂಬ ಅರ್ಥವೂ ಇದೆ ಎನ್ನಲಾಗುತ್ತದೆ. ಮಗಳಿಗೆ ‘ವಮಿಕಾ’ ಎಂದು ಹೆಸರು ಇಟ್ಟಿದ್ದಾರೆ ವಿರಾಟ್ ಹಾಗೂ ಅನುಷ್ಕಾ. ವಮಿಕಾ ಎಂದರೆ ಸಂಸ್ಕೃತದಲ್ಲಿ ದೇವಿ ದುರ್ಗಾ ಎಂದರ್ಥ.