ಮೊಳಕಾಲ್ಮುರು:-ತಾಲೂಕು ಆಡಳಿತದಿಂದ ಪಟ್ಟಣದ ತಾಲೂಕು ಆಡಳಿತ ಸೌಧದಲ್ಲಿ ಮಂಗಳವಾರ ಬೆಳಗ್ಗೆ 10:30ಕ್ಕೆ ಸಂತಕವಿ ಸರ್ವಜ್ಞ ಜಯಂತಿ ಕಾರ್ಯಕ್ರಮ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಸರ್ವಜ್ಞ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಪೂಜೆ ಸಲ್ಲಿಸಲಾಯಿತು.
ಸರ್ವಜ್ಞ ಎಂದರೆ ಸಂಸ್ಕೃತದಲ್ಲಿ ಎಲ್ಲವನ್ನು ತಿಳಿದಿರುವವನು ಎಂಬ ಅರ್ಥವನ್ನು ನೀಡುತ್ತದೆ. ಸರ್ವಜ್ಞರಿಗೆ ಇಬ್ಬರು ತಾಯಂದಿರು. ಕುಂಬಾರ ಮಾಳೆ ಅವರು ಜನ್ಮ ಕೊಟ್ಟವರಾದರೆ ಮಲ್ಲಮ್ಮ ಎಂಬವರು ಸಾಕು ತಾಯಿಯಾದರು. ಹಾವೇರಿ ಜಿಲ್ಲೆ ಹಿರೇಕೆರೂರು ತಾಲೂಕಿನ ಮಾಸೂರಿನಲ್ಲಿ ವಾಸವಾಗಿದ್ದ ಬಸವರಸ ಅವರಿಗೆ ಮದುವೆಯಾಗಿ ಎಷ್ಟು ದಿನಗಳಾದರೂ ಮಕ್ಕಳಾಗುವುದಿಲ್ಲ. ಆಗ ಮಲ್ಲಮ್ಮನನ್ನು ಸಮಾಧಾನ ಮಾಡಿ ಪುತ್ರ ಸಂತಾನದ ವರ ಪಡೆಯಲು ಕಾಶಿ ಕ್ಷೇತ್ರಕ್ಕೆ ಹೋಗುತ್ತಾನೆ. ಕಾಶಿ ವಿಶ್ವನಾಥನ ಸನ್ನಿಧಾನದಲ್ಲಿ ಪ್ರಾರ್ಥಿಸುವ ದೇವರು, ನಿನಗೆ ಪುತ್ರಪ್ರಾಪ್ತಿಯಾಗುವುದು, ಹುಟ್ಟುವ ಮಗನು ಮಹಾಜ್ಞಾನಿಯಾಗುವನು ಎಂದು ವಿಶ್ವನಾಥನು ಕನಸಿನಲ್ಲಿ ಬಂದು ಹೇಳುತ್ತಾನೆ. ಇದರಿಂದ ಸಂತೋಷಗೂಂಡ ಬಸವರಸ ಬೆಳಗಿನ ಜಾವ ಪವಿತ್ರ ಗಂಗಾ ಸ್ನಾನ ಮಾಡಿ ತಮ್ಮ ಊಹಿರಿಗೆ ವಾಪಸ್ ಬರುತ್ತಾರೆ.
ಈ ವೇಳೆ ಪಶು ಇಲಾಖೆ ಸಹಾಯ ನಿರ್ದೇಶಕರಾದ ಡಾ. ರಂಗಸ್ವಾಮಿ ಮಾತನಾಡಿ ಜನರ ಆಡುಭಾಷೆಯಲ್ಲಿ ತ್ರಿಪದಿಗಳನ್ನು ರಚಿಸಿ ಸಮಾಜದ ಅಂಕುಡೊಂಕುಗಳನ್ನು ಚಿಕಿತ್ಸಕ ನೋಟದೊಂದಿಗೆ ತಿದ್ದಿದ ಸಮಾಜ ಸುಧಾರಕನೆಸಿದ್ದಾರೆ.
ಎಂಬ ಮಾತುಗಳನ್ನು ಹಾಡಿರುವ ತ್ರಿಪದಿ ಕವಿ ಸರ್ವಿದ್ದ ಅವರ ಜಯಂತಿಯನ್ನು (ಸರ್ವಜ್ಞ ಜಯಂತಿ 2024) ಫೆಬ್ರವರಿ 20 ರಂದು ರಾಜ್ಯದೆಲ್ಲೆಡೆ ಆಚರಿಸಲಾಗುತ್ತದೆ. ವಾಸ್ತವಾಂಶಗಳನ್ನು ತಮ್ಮ ವಚನಗಳ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ನೀಡಿದ್ದ ಸರ್ವಜ್ಞರು 16ನೇ ಶತಮಾನದ ಅತ್ಯಂತ ಜನಪ್ರಿಯ ಕನ್ನಡದ ಕವಿ. ಇಂದಿನ ಹಾವೇರಿ ಜಿಲ್ಲೆಯ ರಟ್ಟೀಹಳ್ಳಿ ತಾಲೂಕಿನ ಅಬಲೂರು ಗ್ರಾಮದಲ್ಲಿ ಜನಿಸಿದ್ದರು. ಈ ಗ್ರಾಹವನ್ನು ಸರ್ವಜ್ಞನ ಮಾಸೂರು ಅಂತಲೂ ಎಂದೆಂದೂ ಖ್ಯಾತಿಯಾಗಿದೆ. ಇವರ ತಂದೆ ಬಸವರಸ ಮತ್ತು ತಾಯಿ ಕುಂಬಾರ ಮಾಳೆ. ಇವರನ್ನು ವಾಸ್ತವಿಕವಾದಿ ಮತ್ತು ತತ್ವಜ್ಞಾನಿ ಅಂತಲೂ ಕರೆಯುವುದಿಲ್ಲ.
ಸರ್ವಜ್ಞನ ತ್ರಿಪದಿಗಳು ಕನ್ನಡ ಸಾಹಿತ್ಯ ಸಿರಿಗೆ ಅಮೂಲ್ಯ ಕೊಡುಗೆಯಾಗಿದೆ. ತ್ರಿಪದಿಗಳು ಸಾರುವ ಸಂದೇಶ ಸರ್ವಕಾಲಕ್ಕೂ ಪ್ರಸ್ತುತ. ಇವುಗಳು ಹಲವು ಭಾಷೆಗಳಿಗೆ ಭಾಷಾಂತರಗೊಂಡಿದ್ದು, ಭಾಷೆ ಮತ್ತು ಗಡಿಗಳು ಎಲ್ಲೆ ಮೀರಿ ಕರ್ನಾಟಕದ ಕೀರ್ತಿಯನ್ನು ಬೆಳಗಿಸಿದವು.
ಕಾರ್ಯಕ್ರಮದಲ್ಲಿ ತಾಲೂಕು ಆಡಳಿತ ಸಿಬ್ಬಂದಿಗಳು.