ಎ.ಐ.ಟಿ.ಯು.ಸಿ ಮತ್ತು ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಜಿಲ್ಲಾ ಸಹಾಯಕರ ಕಾಲೇಜು ಚಿತ್ರದುರ್ಗ ಜಿಲ್ಲಾ ಸಮಿತಿ ವತಿಯಿಂದ ಜಿಲ್ಲಾ ಕಾಂಗ್ರೆಸ್ ಕಚೇರಿಯ ಮುಂದೆ ಪ್ರತಿಭಟನೆ ನಡೆಸಲಾಯಿತು.
ಪ್ರಸಕ್ತ 2024 25 ನೇ ಸಾಲಿನ ಬಜೆಟ್ ಮಂಡನೆ ರಾಜ್ಯದಲ್ಲಿ ಅತ್ಯಂತ ಉತ್ತಮ ಮತ್ತು ಜನಪದವಾಗಿದೆ. ಎಲ್ಲಾ ಇಲಾಖೆಗಳಿಗೆ ಅನುಕೂಲಕರವಾದ ಆದಾಯವನ್ನು ಘೋಷಿಸಿ ಅಭಿವೃದ್ಧಿಯ ದಿಕ್ಕಿನಲ್ಲಿ ದಾಪುಗಾಲು ಹಾಕುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ ಸ್ವಾಗತಾರ್ಹ ಬೆಳವಣಿಗೆ ಎಂದು ಹೇಳಿದರು.
ಆದರೆ ವಿವಿಧ ಯೋಜನೆಗಳಲ್ಲಿ ಸ್ಕೀಮ್ ವರ್ಕ್ ಆಗಿ ದುಡಿಯುವ ಮಹಿಳಾ ಸಬಲೀಕರಣವನ್ನು ಮಾತ್ರ ನಿರ್ಲಕ್ಷಿಸುತ್ತಿರುವ ಕಾಂಗ್ರೆಸ್ ಪಕ್ಷವಾಗಿದೆ. ಮಹಿಳೆಯರ ಬಗ್ಗೆ ಯಾವ ಅಧಿಕಾರಿಗಳು ಸಹ ಮಾತನಾಡುವುದಿಲ್ಲ. ಅವರು 5 ಸ್ಕೀಮ್ ಗಳನ್ನು ಮಾತ್ರ ಜಾರಿಗೆ ತಂದು ಮಹಿಳೆಯರಿಗೆ ಅನುಕೂಲವಾಗಿದ್ದಾರೆ ಎಂದು ಹೇಳುತ್ತಾರೆ.
ಆದರೆ ತಮ್ಮ ಪ್ರಾಣಾಳಿಕೆಯಲ್ಲಿ ತಿಳಿಸಿದಂತೆ ಕಾಂಗ್ರೆಸ್ ಪಕ್ಷದ ನಾಯಕಿ ಶ್ರೀಮತಿ ಪ್ರಿಯಾಂಕ ಗಾಂಧಿ ಅವರು ಆರನೇ ಗ್ಯಾರಂಟಿಯಾಗಿ ಘೋಷಿಸಿದ ಅಂಗನವಾಡಿ ಕಾರ್ಯಕರ್ತರಿಗೆ 15000 ಹಾಗೂ ಸಹಾಯಕರಿಗೆ 10,000 ಗೌರವಧನವನ್ನು ಹೆಚ್ಚಿಸಲಾಗಿದೆ ಎಂದು ಹೇಳಿದರು. ಆದರೆ ಈ ಭರವಸೆಯನ್ನು ಮರೆತು ನಿರಾಸೆಯನ್ನು ಉಂಟು ಮಾಡಿದೆ.
ಈ ಸಾಲಿನ ಆರ್ಥಿಕ ಸಭೆಯಲ್ಲಿ ಅಂಗನವಾಡಿ ಕಾರ್ಯಕರ್ತರಿಗೆ ಸೂಕ್ತ ಗೌರವಧನ ಹಾಗೂ ಆಶಾ ಕಾರ್ಯಕರ್ತೆಯರಿಗೆ ಸಂಭಾವನೆ ಹೆಚ್ಚಿಸಬೇಕು ಎಂದು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಚಿತ್ರದುರ್ಗದ ಮುಂದೆ ಪ್ರತಿಭಟನೆ ನಡೆಸಲಾಯಿತು. ಆದರೆ ಮಹಿಳಾ ಸಂಘಟನೆಯ ಇವರ ಶಾಸಕರಾದ ಕೆ. ಸಿ.ವೀರೇಂದ್ರ ಪಪ್ಪಿ ಮುಖಾಂತರ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮನವಿ ಸಲ್ಲಿಸಲು ಮುಂದಾಗಿದ್ದಾರೆ ಎಂದು ಈ ಮೂಲಕ ಪತ್ರಿಕಾ ಪ್ರಕಟಣೆ ಪ್ರಕಟಿಸಿದ್ದಾರೆ.
ಈ ಕಾರ್ಯಕ್ರಮದಲ್ಲಿ ಗೌರವಾಧ್ಯಕ್ಷೆ ತಿಪ್ಪಮ್ಮ, ಜಿಲ್ಲಾಧ್ಯಕ್ಷರು ಭಾಗ್ಯಮ್ಮ, ಪ್ರಧಾನ ಕಾರ್ಯದರ್ಶಿ, ಜಮುನಾ ಬಾಯಿ ಖಚಾಚಿ ವಿನೋದಮ್ಮ ಹಾಗೂ ಎಂ.ಐ.ಟಿ.ಯು.ಸಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ್ ಬಾಬು ತಾಲ್ಲೋಕು ಕಾರ್ಯದರ್ಶಿ, ಸತೀಶ್ ಕೀರ್ತಿ ಮುಂತಾದವರು ಭಾಗವಹಿಸಿದ್ದರು.