Breaking
Tue. Dec 24th, 2024

ಭುಗಿಲೆದ್ದ : ಕೊನೆಗೂ ಬಜರಂಗದಳ ಕಾರ್ಯಕರ್ತರಲ್ಲಿ‌ ಕ್ಷಮೆಯಾಚಿಸಿದ ಅಶೋಕ್!

ಬೆಂಗಳೂರು ಆರ್ ಅಶೋಕ್ ಬಜರಂಗದಳದ ವಿರುದ್ಧ ಹೇಳಿದ ಹೇಳಿಕೆಯನ್ನು ಕುರಿತು ವ್ಯಾಪಕವಾಗಿ ಎಲ್ಲೆಡೆ ವಿರೋಧ ಕೇಳಿ ಬಂದಿದ್ದೆ. ಭುಗಿಲೆದ್ದ : ಕೊನೆಗೂ ಬಜರಂಗದಳ ಕಾರ್ಯಕರ್ತರಲ್ಲಿ ಕ್ಷಮೆಯಾಚಿಸಿದ ಅಶೋಕ್!

ನಾನು ಗೃಹ ಸಚಿವನಾಗಿದ್ದಾಗ ಭಾರೀ ಒತ್ತಡವಿತ್ತು. ಫೋನ್‌ಗಳು ಕೂಡ ಬಂದಿತ್ತು. ಆದರೂ ಕೂಡ ನಾನು ಯಾವುದೇ ಒತ್ತಡಕ್ಕೆ ಮಣಿಯದೇ ಬಜರಂಗದಳದ ವಿರುದ್ಧ ಗೂಂಡಾ ಕಾಯ್ದೆಯ ಕೇಸ್ ಹಾಕಿದ್ದೆ ಎಂದು ಹೇಳಿದ್ದು ಆರ್ ಅಶೋಕ್ ಗೆ ಈಗ ಅದೇ ತಿರುಗುಬಾಣವಾಗಿದೆ. ತಮ್ಮ ಕಾರ್ಯವೈಖರಿಯನ್ನು ಹೇಳಿಕೊಳ್ಳುವ ಮೂಲಕ ವಿಶ್ವಹಿಂದೂ ಪರಿಷತ್ತು ಮತ್ತು ಬಜರಂಗದಳ ಕೆಂಗಣ್ಣಿಗೆ ಗುರಿಯಾಗುವಂತೆ, ಇದೀಗ ಇದು ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆಯೇ ಅಶೋಕ್, ಹಿಂದೂ ಸಂಘಟನೆಗಳ ಮುಂದೆ ಮಂಡ್ಯ

ಬೆಂಗಳೂರು, (ಫೆಬ್ರವರಿ 22): ನಾನು ಗೃಹ ಸಚಿವನಾಗಿದ್ದ ಬಜರಂಗದಳ (ಬಜರಂಗದಳ)ಕಾರ್ಯಕರ್ತರ ವಿರುದ್ಧ ಗೂಂಡಾ ಕಾಯ್ದೆಯಡಿ ಕೇಶಾ  (ರೌಡಿ ಶೀಟ್) ಕಿಸಿದ್ದೆ ಎನ್ನುವ ವಿಪಕ್ಷ ನಾಯಕ ಆರ್ ಅಶೋಕ್ (ಆರ್ ಅಶೋಕ್) ಹೇಳಿಕೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗ ದಳ ಕೆಂಡಾಮಂಡಲವಾಗಿದ್ದು, ವಿಪಕ್ಷ ನಾಯಕ ಸ್ಥಾನದಿಂದ ಅಶೋಕ್ ಅವರನ್ನು ತೆಗೆದು ಹಾಕುವಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರಗೆ ಪತ್ರ ಬರೆದಿದ್ದಾರೆ. ಈ ಇದು ತೀವ್ರ ಸ್ವರೂಪ ಪಡೆದುಕೊಳ್ಳುವಂತೆಯೇ ಎಚ್ಚೆತ್ತುಕೊಂಡ ಆರ್ ಅಶೋಕ್, ಬಜರಂಗ ದಳದ ಕಾರ್ಯಕರ್ತರಲ್ಲಿ ಕ್ಷಮೆಯಾಚಿಸಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ವಿರೋಧ ಪಕ್ಷದ ನಾಯಕ ಅಶೋಕ್, ರಾಮನಗರದ ವಕೀಲರು ಜ್ಞಾನವಾಪಿ ದೇಗುಲದ ಬಗ್ಗೆ ಪೋಸ್ಟ್ ಮಾಡಿದ್ರು. ಆ ವಿಚಾರವಾಗಿ ಹೇಳಿದ್ದೆ, ಮುಸ್ಲಿಮರು ಅಂತಾ ಓಲೈಕೆ ಮಾಡಬೇಡಿ. ಬಜರಂಗ ದಳ ಕಾರ್ಯಕರ್ತರ ಮೇಲೆ ಗೂಂಡಾ ಕಾಯ್ದೆ ಹಾಕಿಸಿದ್ದೆ ಎಂದೆ. ಬಜರಂಗ ದಳ, ಹಿಂದೂ ಕಾರ್ಯಕರ್ತರಿಗೆ ನೋವಾದರೂ ಕ್ಷಮೆ ಕೇಳುತ್ತೇನೆ. ನಾನು ಕೂಡ 10 ವರ್ಷ ಬಜರಂಗ ದಳದಲ್ಲೇ ಇದ್ದವನು ಎಂದು ಹೇಳಿದರು. ಈ ಮೂಲಕ ಬಜರಂಗದಳ ಹಾಗೂ ವಿಶ್ವ ಹಿಂದೂ ಪರಿಷತ್ ಮುಂದೆ ಮಂಡ್ಯೂರಿದರು.

ಕ್ಷಮೆಯಾಚಿಸುವಂತೆ ಒತ್ತಾಯಿಸಿದ ಬಜರಂಗದಳ

ನಾನು ಗೃಹಸಚಿವನಾಗಿದ್ದಾಗ ಬಜರಂಗದಳದ ವಿರುದ್ಧ ಗೂಂಡಾ ಕಾಯ್ದೆ ಕೇಸ್ ಹಾಕಿಸಿದ್ದೆ ಎಂಬ ಹೇಳಿಕೆಯಿಂದ ಅಶೋಕ್ ವಿರುದ್ಧ ಹಿಂದೂ ಕಾರ್ಯಕರ್ತರು ಸಿಡಿದೆದ್ದಿದ್ದು, ಸಾರ್ವಜನಿಕವಾಗಿ ಕ್ಷಮೆಯಾಚಿಸುವಂತೆ ಬಜರಂಗದಳ ಒತ್ತಾಯಿಸಿದೆ. ಈ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರಿಗೆ ಪತ್ರ ಬರೆದಿರುವ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ, ಆರ್.ಅಶೋಕ್ರನ ವಿಪಕ್ಷ ನಾಯಕ ಸ್ಥಾನದಿಂದ ತೆಗೆದುಹಾಕುವಂತೆ ಒತ್ತಾಯಿಸಲಾಗಿದೆ. ಆರ್.ಅಶೋಕ್ ಸಾರ್ವಜನಿಕವಾಗಿ ಕ್ಷಮೆಯಾಚಿಸುವಂತಿತ್ತು.

ಅಶೋಕ್ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ ಶರಣ್ ಪಂಪ್‌ವೆಲ್

ನಾನು ಗೃಹಸಚಿವ ಆಗಿದ್ದಾಗ ಪಬ್‌ನಲ್ಲಿ ಗಲಾಟೆಯಾದಾಗ ಹಿಂದೂ ಸಂಘಟನೆಯ ಮೇಲೆ ಗೂಂಡಾ ಕಾಯ್ದೆ ಹಾಕಿದ್ದೆ ಅಂತ ಹೇಳಿದ್ದಾರೆ. ವಿಹೆಚ್‌ಪಿ ಇದನ್ನ ಬಲವಾಗಿ ಖಂಡಿಸುತ್ತೆ. ಗೋ ಮಾತೆ, ಮಹಿಳೆಯರ ಪರ ಕೆಲಸ ಮಾಡೋ ಸಂಘಟನೆ. ಅಂತ ಸಂಘಟನೆ ಮೇಲೆ ಗೂಂಡಾ ಕಾಯ್ದೆ ಹಾಕಿರೋದಾಗಿ ಹೇಳಿದ್ದು ಮನಸ್ಸಿಗೆ ಬೇಸರವಾಗಿದೆ. ಈ ಬಗ್ಗೆ ಪಕ್ಷದ ಅಧ್ಯಕ್ಷರಿಗೆ ದೂರು ನೀಡಿದ್ದು, ಅವರ ಮೇಲೆ ಕ್ರಮ ಕೈಗೊಳ್ಳಬೇಕು. ಅಶೋಕ್ ಅವರನ್ನ ವಿಪಕ್ಷ ನಾಯಕರ ಸ್ಥಾನದಿಂದ ತೆಗೆಯಬೇಕು. ಅವರ ವಿರುದ್ಧ ಶಿಸ್ತು ಕ್ರಮ ಆಗಬೇಕು ಎಂದಿದ್ದರು.

ಅಶೋಕ್ ನಮ್ಮದೇ ವೈಚಾರಿಕ ಇರೋ ಪಕ್ಷದವರು. ಅವರ ಸಮರ್ಥನೆ ಸರಿಯಲ್ಲ. ಹಿಂದೂ ವಿರೋಧಿ ಹೇಳಿಕೆ ಸರಿಯಲ್ಲ. ಶಿಕ್ಷಕರ ಮೇಲೆ ಕ್ರಮ ತೆಗೆದುಕೊಳ್ಳೋ ವಿಚಾರದಲ್ಲಿ ಸರ್ಕಾರದ ಮೇಲೆ ಒತ್ತಡ ಹೇರಬೇಕು. ಅದು ಬಿಟ್ಟು ಹಿಂದೂ ಸಂಘಟನೆಯ ಮೇಲೆ ಕ್ರಮ ತೆಗೆದುಕೊಂಡೆ ಅಂತ ಹೇಳಿದ್ದಾರೆ. ಇದು ಸರಿಯಲ್ಲ. ಕೇಂದ್ರದ ನಾಯಕರನ್ನೂ ಭೇಟಿಯಾಗುತ್ತೇವೆ. ಪತ್ರದ ಮೂಲಕ ಅಶೋಕ್ ವಿರುದ್ಧ ದೂರು ಕೂಡ ನೀಡಲಿದ್ದೇವೆ ಎಂದರು.

ಅಷ್ಟಕ್ಕೂ ಆರ್ ಅಶೋಕ್ ಹೇಳಿದ್ದೇನು?

ರಾಮನಗರದಲ್ಲಿ ವಕೀಲರ ಮೇಲೆ ಎಫ್‌ಐಆರ್ ಹಾಕಿರುವ ವಿಚಾರವಾಗಿ ಸದನದಲ್ಲಿ ಚರ್ಚೆ ನಡೆಯುತ್ತಿದ್ದ ಸಂದರ್ಭದಲ್ಲಿ ಗೃಹ ಸಚಿವ ಪರಮೇಶ್ವರ್ ಅವರ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ, ವಿಪಕ್ಷ ನಾಯಕ ಆರ್. ಅಶೋಕ್ ಮಾತನಾಡಿದರು. ಈ ವೇಳೆ, “ಮಂಗಳೂರು ಪಬ್ ದಾಳಿ ವೇಳೆ ನಾನು ರಾಜ್ಯದ ಗೃಹ ಸಚಿವನಾಗಿದ್ದೆ. ಇದೇ ವಿಧಾನಸಭೆ ಹಾಗೂ ವಿಧಾನ ಪರಿಷತ್‌ನಲ್ಲಿ ಧರಣಿ ಕೂಡ ನಡೆದಿದೆ, ದೊಡ್ಡ ಗಲಾಟೆಯೇ ಆಗುತ್ತಿದೆ. ಅವತ್ತು ಬಜರಂಗದಳದ ಕಾರ್ಯಕರ್ತರ ಮೇಲೆ ಗೂಂಡಾ ಕಾಯ್ದೆ ಹಾಕಿದ್ದೆ. ನನ್ನ ಮೇಲೆ ಭಾರೀ ಒತ್ತಡವಿತ್ತು. ಫೋನ್‌ಗಳು ಕೂಡ ಬಂದಿತ್ತು. ಆದರೂ ಕೂಡ ನಾನು ಯಾವುದೇ ಒತ್ತಡಕ್ಕೆ ಮಣಿಯದೇ ಪಬ್ ದಾಳಿ ವೇಳೆ ಯುವತಿಯರ ಮೇಲೆ ದೌರ್ಜನ್ಯ ಎಸಗಿ ಬಜರಂಗದಳದವರ ಮೇಲೆ ಗೂಂಡಾ ಕಾಯ್ದೆ ಹಾಕಿದ್ದೆ. ಆ ಥರ ನೀವೂ ಕೂಡ ಕ್ರಮ ಕೈಗೊಳ್ಳಿ” ಎಂದು ಗೃಹ ಸಚಿವ ಪರಮೇಶ್ವರ್‌ಗೆ ತಿಳಿಸಿದ್ದಾರೆ.

 

Related Post

Leave a Reply

Your email address will not be published. Required fields are marked *