ದಾಬಸ್ ಪೇಟೆ ಬೈಕ್ ಹಾಗೂ ಲಾರಿ ನಡುವೆ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ದಾಬಸ್ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ತ್ಯಾಮಗೊಂಡ್ಲು ನಿವಾಸಿ ಪ್ರದೀಪ್ 28 ವರ್ಷ ಮೃತ ಯುವಕನಾಗಿದ್ದು ಈತ ತನ್ನ ಬೈಕಿನಲ್ಲಿ ಪಟ್ಟಣದ ಫ್ಲೈ ಓವರ್ ಬಳಿಯಲ್ಲಿರುವ ಕಿಡ್ಸ್ ಶಾಲಾ ಸಮೀಪ ಬರುವಾಗ ಹಿಂಬದಿಂದ ಬಂದ ವಿ ಆರ್ ಎಲ್ ಕಂಪನಿಗೆ ಸೇರಿದ ಲಾರಿ ಡಿಕ್ಕಿ ಹೊಡೆದಿದೆ.
ಘಟನಾ ಸ್ಥಳಕ್ಕೆ ದಾಬಸ್ ಪೇಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.