ಹಾವೇರಿ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಹಾವೇರಿ ವಿಭಾಗದಲ್ಲಿ ಖಾಲಿ ಇರುವ 14 ಎಲೆಕ್ಟ್ರಿಷಿಯನ್ ಹಾಗೂ ಫಿಟ್ಟರ್ ವೃತ್ತಿ ಶಿಶುಕ್ಷ ತರಬೇತಿಗಾಗಿ ಐಟಿಐ ವಿದ್ಯಾರ್ಹತೆ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಅಸಕ್ತ ಅಭ್ಯರ್ಥಿಗಳು ಆನ್ಲೈನ್ ನಲ್ಲಿ ನೋಂದಣಿ ಮಾಡಿಕೊಳ್ಳಲು ತಿಳಿಸಲಾಗಿದೆ KHSUA FIXES CO5162900083 ದಿನಾಂಕ 3-3- 2024ರ ಸಂಜೆ 5 ಗಂಟೆ ಒಳಗೆ ಅರ್ಜಿ ಸಲ್ಲಿಸಬೇಕು.
ಆನ್ಲೈನ್ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ನಿಗದಿತ ಮಾಹಿತಿಯನ್ನು ಒಳಗೊಂಡ ಅರ್ಜಿ ವಿದ್ಯಾರ್ಥಿ ಮತ್ತೆ ಮೂಲ ಹಾಗೂ ದೃಡಿಕೃತ ಪ್ರತಿಗಳ ದಾಖಲೆಗಳೊಂದಿಗೆ ದಿನಾಂಕ : 5-3- 2024ರ ಬೆಳಗ್ಗೆ 10 ಗಂಟೆಗೆ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಹಾವೇರಿ ವಿಭಾಗೀಯ ಕಚೇರಿಗೆ (ಆರ್ ಟಿ ಓ ಕಚೇರಿ ಪಕ್ಕ) ಹಾಜರಾಗಬೇಕು ಎಂದು ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಹಾವೇರಿ ವಿಭಾಗ ನಿಯಂತ್ರಣ ಅಧಿಕಾರಿಗಳು ತಿಳಿಸಿದ್ದಾರೆ.