ದಾಬಸ್ ಪೇಟೆ ಮಹಿಳೆಯೊಬ್ಬರ ವ್ಯನಿಟಿ ಬ್ಯಾಗ್ ನಲ್ಲಿದ್ದ ನಗದು ಹಣ ಸೇರಿದಂತೆ ಚುನಾವಣೆಯನ್ನು ಅಪರಿಚಿತರು ಅಪಹರಿಸಿದ್ದಾರೆ.
ಬೆಂಗಳೂರಿನ ಬಿಲೇಕಹಳ್ಳಿಯ ನಿವಾಸಿ ಸುನಂದಮ್ಮ ಚಿನ್ನಾಭರಣ ಕಳೆದುಕೊಂಡ ಮಹಿಳೆ. ಇವರು ತಮ್ಮ ಸ್ವಂತ ಊರಾದ ಹಾನಗಲ್ ತಾಲೂಕಿನ ಆಡೂರು ಗ್ರಾಮಕ್ಕೆ ತೆರಳಲು ಫೆಬ್ರವರಿ 4 ರಂದು ರಾತ್ರಿ 7:40 ಗಂಟೆಗೆ ಖಾಸಗಿ ಬಸ್ ನಲ್ಲಿ ತೆರಳುತ್ತಿದ್ದರು.
ಸೋಂಪುರ ಹೋಬಳಿಯ ಬೀಲಿನಕೋಟೆಯ ಕಾಮತ್ ಹೋಟೆಲ್ ಬಳಿ ರಾತ್ರಿ ಸುಮಾರು 11 ಗಂಟೆ ಸಮಯದಲ್ಲಿ ಊಟ ಮಾಡುವುದಕ್ಕೆ ಬಸ್ ನಿಲ್ಲಿಸಿದರು. ಸುನಂದಮ್ಮ ತನ್ನ ವ್ಯನಿಟಿ ಬ್ಯಾಗನ್ನು ಬಸ್ನಲ್ಲಿ ಬಿಟ್ಟು ಊಟಕ್ಕೆ ಎಂದು ಹೋಟೆಲ್ ಗೆ ಹೋಗಿ ಊಟ ಮಾಡಿಕೊಂಡು ವಾಪಸ್ ಬಸ್ಸಿಗೆ ಬಂದಿದ್ದಾರೆ.
ಮನೆಯಲ್ಲಿ ಅವರ ವ್ಯನಿಟಿ ಬ್ಯಾಗನ್ನು ತೆಗೆದುಕೊಂಡು ನೋಡಿದರೆ ಚಿನ್ನಾಭರಣ ಇರಲಿಲ್ಲ. ಸುಮಾರು 212,500 ರೂ ಮೌಲ್ಯದ ಚಿನ್ನಾಭರಣ ಕಳ್ಳತನವಾಗಿದೆ ದಾಬಸ್ ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.