ಚಿತ್ರದುರ್ಗ ಅಮೃತ ಭಾರತ್ ನಿಲ್ದಾಣ ಪುನರ್ ಅಭಿವೃದ್ಧಿ ಯೋಜನೆ ಅಡಿಯಲ್ಲಿ ರೂ 41000 ಕೋಟಿ ವೆಚ್ಚದಲ್ಲಿ ದೇಶದ ವಿವಿಧ 554 ಪ್ರಮುಖ ರೈಲುಗಳ ನಿಲ್ದಾಣ ಪುನರ್ ಅಭಿವೃದ್ಧಿ 1500 ಮೇಲ್ ಸೇತುವೆ ಅಭಿವೃದ್ಧಿ ಮಾಡಲಾಗುತ್ತಿದೆ. ಈ ಯೋಜನೆಗೆ ಸೋಮವಾರ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ವಿಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಿದ್ದಾರೆ.
ಅಮೃತ್ ಯೋಜನೆ ಅಡಿ ರೂ 11.78 ಕೋಟಿ ವೆಚ್ಚದಲ್ಲಿ ಚಿತ್ರದುರ್ಗ ನಗರದ ನಿಲ್ದಾಣವನ್ನು ಸಹ ನವೀಕರಿಸಿ ಮೇಲ್ದರ್ಜೆಗೆ ಏರಿಸಲಾಗುತ್ತಿದೆ . ಇದರ ಅಂಗವಾಗಿ ನಗರದ ನಿಲ್ದಾಣದಲ್ಲಿ ಪ್ರದರ್ಶನಗೊಂಡ ಕಾರ್ಯಕ್ರಮದಲ್ಲಿ ಶಾಸಕ ವೀರೇಂದ್ರ ಪಪ್ಪಿ ಕಾಣಿಸಿಕೊಳ್ಳುತ್ತದೆ.
ದಾವಣಗೆರೆ ಚಿತ್ರದುರ್ಗ ತುಮಕೂರು ನೇರ ಭೂಸ್ವಾಧೀನ ಪ್ರಕ್ರಿಯೆ ಸಂಪೂರ್ಣಗೊಳ್ಳುವ ಹಂತದಲ್ಲಿದೆ. ವರ್ಷದಾದ್ಯಂತ ನೇರ ರೈಲು ಯೋಜನೆಗೆ ಪ್ರಾರಂಭವಾಗಲಿದೆ ಚಿತ್ರದುರ್ಗ ನಿಲ್ದಾಣ ಪುನರ್ ಅಭಿವೃದ್ಧಿ ಯೋಜನೆ ಜಿಲ್ಲೆಗೆ ಪ್ರಧಾನಿಗಳ ಅತಿ ದೊಡ್ಡ ಕೊಡುಗೆಯಾಗಿದೆ.
ಸುಮಾರು 12 ಕೋಟಿ ವೆಚ್ಚದಲ್ಲಿ ನವೀಕರಣ ಕಾಮಗಾರಿಯನ್ನು ಮಾಡಲಾಗಿದೆ. ನೈರುತ್ಯ ಸಂಪರ್ಕ ಅಭಿವೃದ್ಧಿಗೆ ಒಟ್ಟು 31 ರೈಲ್ವೆ ನಿಲ್ದಾಣಗಳನ್ನು ಅಭಿವೃದ್ಧಿಪಡಿಸಲಾಗಿದೆ, ಚಿತ್ರದುರ್ಗ ಇದರಲ್ಲಿ ಸೇರುವುದಕ್ಕೆ ಸಂತಸವಾಗಿದೆ. ಚಿತ್ರದುರ್ಗ ರೈಲ್ವೆ ಆಸ್ಪತ್ರೆ ಸಹ ನಿರ್ಮಿಸಲು ಬೇಡಿಕೆಯ ಕೂಗು ಕೇಳಿ ಬಂದಿದೆ. ಮುಂದಿನ ದಿನಗಳಲ್ಲಿ ಪ್ರಧಾನಮಂತ್ರಿ ಅವರನ್ನು ಭೇಟಿ ಮಾಡಿ ಶಾಸಕರು ಆಸ್ಪತ್ರೆ ನಿರ್ಮಾಣಕ್ಕೆ ಪ್ರಯತ್ನಪಡುತ್ತಾರೆ ವೀರೇಂದ್ರ ಪಪ್ಪಿ ಅವರು.