ಭಾರತೀಯ ಟೆಲಿ ಕಂಪನಿ ಗ್ರಾಹಕರಿಗೆ ಅತ್ಯುತ್ತಮ ಸೇವೆಯನ್ನು ಒದಗಿಸುತ್ತಿದ್ದು. ಜನರಿಗೆ ಸುಲಭವಾಗಿ ಕರೆಗಳು, ಮೆಸೇಜ್, ವಿಡಿಯೋ ಕಾಲ್, ಮುಂತಾದ ಸೇವೆಗಳನ್ನು ಕೈಗೆ ಸಿಗುವಂತೆ ಗ್ರಾಹಕರಿಗೆ ತಲುಪಿಸುವ ಕಾರ್ಯವನ್ನು ಮಾಡುತ್ತಿದೆ.
ಈಗ ಗ್ರಾಹಕರಿಗೆ ಪ್ರತಿದಿನ ತಲೆನವಾಗಿ ಪರಿಣಮಿಸಿದೆ. ಬೇರೆ ಬೇರೆ ಕಂಪನಿಯಿಂದ ಗ್ರಾಹಕರಿಗೆ ನಿಮಗೆ ಆಫರ್ ಬಂದಿದೆ, ನೀವು ಇಷ್ಟು ಹಣ ಗೆದ್ದಿದ್ದೀರಿ, ನಿಮ್ಮ ಸಂಖ್ಯೆಯನ್ನು ನಮ್ಮ ಕಂಪನಿಯು ಆಯ್ಕೆ ಮಾಡಿದೆ, ಈ ರೀತಿಯ ಕರೆಗಳು ಗ್ರಾಹಕರ ಮೊಬೈಲ್ಗೆ ಪದೇ ಪದೇ ಬರುವುದರಿಂದ ಅವರು ಕರೆಗಳನ್ನು ಸ್ವೀಕರಿಸದೆ ಪ್ರತಿದಿನ ಕಿರಿಕಿರಿಯನ್ನು ಅನುಭವಿಸುತ್ತಿದ್ದಾರೆ.
ಇದರಿಂದ ಏರ್ಟೆಲ್, ಜಿಯೋ, ಐಡಿಯಾ, ವೊಡಾಫೋನ್ ಮುಂತಾದ ಕಂಪನಿಗಳಿಗೆ ದೂರು ಸಹ ಕೊಟ್ಟಿದ್ದಾರೆ. ಆದರೂ ಸಹ ಯಾವುದೇ ಪ್ರಯೋಜನವಾಗಿಲ್ಲ.
ಆದ್ದರಿಂದ ಭಾರತೀಯ ಟೆಲಿಕಾಂ ಕಂಪನಿ ಗ್ರಾಹಕರಿಗಾಗಿ ಹೊಸ ಯೋಜನೆಯನ್ನು ಜಾರಿಗೆ ತಂದಿದೆ ಇದರಿಂದ ಯಾವುದೇ ರೀತಿ ಗ್ರಾಹಕರಿಗೆ ತೊಂದರೆ ಆಗದಂತೆ ಈ ಯೋಜನೆಯಿಂದ ಅನುಕೂಲವಾಗುತ್ತದೆ.
ಟ್ರೈ 3.0 DND ಅ ಮೂಲಕ ನಿಮ್ಮ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದು. ಇದು ಗೂಗಲ್ ಪ್ಲೇ ಸ್ಟೋರ್ ನಲ್ಲಿ ಲಭ್ಯ ಇದೆ. ಈ ಆಪ್ ಅನ್ನು ಡೌನ್ಲೋಡ್ ಮಾಡಿಕೊಂಡು ತಮ್ಮ ಮೊಬೈಲ್ ನಲ್ಲಿ ಸೈನ್ ಇನ್ ಮಾಡಿ ನಿಮಗೆ ಯಾವುದೇ ತರಹದ ಬೇರೆ ಕರೆಗಳು ಬೇರೆ ಮೆಸೇಜ್ಗಳು ಬರುವುದನ್ನು ಈ ಟ್ರೈ 3.0 DND APP ಮೂಲಕ ತಡೆಯಬಹುದು ಮತ್ತು ನಿಮ್ಮ ಸಮಸ್ಯೆಗೆ ಪರಿಹಾರ ಸಿಗಲಿದೆ.
ಭಾರತೀಯ ಟೆಲಿಕಾಂ ಕಂಪನಿ ಇದಕ್ಕೂ ಮುಂಚೆ ಟ್ರೈ 2.0 app ಅನ್ನು ಜಾರಿಗೆ ತಂದಿದ್ದರು. ಇದರಿಂದ ಜನರಿಗೆ ಯಾವುದೇ ರೀತಿಯ ಪ್ರಯೋಜನ ಆಗಲಿಲ್ಲ.
ಆದ್ದರಿಂದ ಟ್ರೈ ಕಂಪನಿಯು 3.0 DND APP ಅನ್ನು ಪರಿಚಯಿಸಿದೆ ಇದು ಅನ್ಯ ಕರೆಗಳ ಮತ್ತು ಅನ್ಯ ಮೆಸೇಜ್ ಗಳನ್ನು ಹಿಡಿತದಲ್ಲಿಟ್ಟುಕೊಂಡು ಗ್ರಾಹಕರಿಗೆ ತೊಂದರೆ ಆಗದಂತೆ ಕಾರ್ಯ ನಿರ್ವಹಿಸುತ್ತದೆ ಆದ್ದರಿಂದ ಸಾರ್ವಜನಿಕರಿಗೆ ಟ್ರೈ ಕಂಪನಿಯು ಈ ಆಪ್ ಡೌನ್ಲೋಡ್ ಮಾಡಿಕೊಳ್ಳಿ ಇದರ ಪ್ರಯೋಜನ ಪಡೆದುಕೊಳ್ಳಿ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.