Breaking
Mon. Dec 23rd, 2024

ಅಡ್ಡಮತದಾನ ಮಾಡಿದ ಬಿಜೆಪಿ ಶಾಸಕ ಸೋಮಶೇಖರ್ ಅನರ್ಹವಾಗ್ತಾರಾ? ಏನು ಕ್ರಮವಾಗಬಹುದು? ಇಲ್ಲಿದೆ ವಿವರ

ಬೆಂಗಳೂರು, (ಫೆಬ್ರವರಿ 27): ಕರ್ನಾಟಕ ರಾಜ್ಯಸಭಾ ಚುನಾವಣೆಗೆ (Rajya sabha Election) ಸಂಬಂಧಿಸಿ ರಾಜ್ಯ ರಾಜಕಾರಣದಲ್ಲಿ (Karnataka Politics) ಅತಿ ದೊಡ್ಡ ಬೆಳವಣಿಗೆಯೊಂದು ನಡೆದಿದೆ. ಬಿಜೆಪಿಯಿಂದ (BJP) ಗೆದ್ದ ಯಶವಂತಪುರ ಶಾಸಕ ಎಸ್‌.ಟಿ ಸೋಮಶೇಖರ್‌ (ST Somashekhar) ಅವರು ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿ ಅಥವಾ ಮೈತ್ರಿ ಅಭ್ಯರ್ಥಿಗೆ ಮತ ಹಾಕುವ ಬದಲು ಕಾಂಗ್ರೆಸ್‌ನ ಮೂರನೇ ಅಭ್ಯರ್ಥಿಗೆ ಮತ ಹಾಕಿದ್ದಾರೆ ಎಂದು ತಿಳಿದುಬಂದಿದೆ. ಬಿಜೆಪಿಯ ಚುನಾವಣಾ ಏಜೆಂಟ್‌ ಆಗಿರುವ ಸುನಿಲ್‌ ಕುಮಾರ್‌ ಅವರು ಕೂಡಾ ಇದನ್ನು ಸ್ಪಷ್ಟಪಡಿಸಿದ್ದಾರೆ. ಈಗ ಸೋಮಶೇಖರ್ ವಿರುದ್ಧ ಶಿಸ್ತು ಕ್ರಮಕ್ಕೆ ಬಿಜೆಪಿ ಮುಂದಾಗಿದೆ. ಮೊದಲಿನಿಂದಲೇ ಪಕ್ಷದಿಂದ ಅಂತರ ಕಾಪಾಡಿಕೊಂಡಿರುವ ಸೋಮಶೇಖರ್ ವಿರುದ್ಧ ಸೂಕ್ತ ಕ್ರಮಕೈಗೊಳ್ಳಲು ಬಿಜೆಪಿ ವಕೀಲರ ಜೊತೆ ಸುದೀರ್ಘ ಚರ್ಚೆ ನಡೆಸಿದ್ದಾರೆ. ಆದ್ರೆ, ಅಡ್ಡ ಮತದಾನ ಮಾಡಿದ್ದರೂ ಸಹ ಎಸ್.ಟಿ.ಸೋಮಶೇಖರ್ ಸೇಫ್.

ಹೈಕೋರ್ಟ್‌ ವಕೀಲರರ ಜತೆ ಬಿಜೆಪಿ ಚರ್ಚೆ

ಎಸ್ಟಿ ಸೋಮಶೇಖರ್ ಅವರ ನಡೆಯನ್ನು ಗಂಭೀರವಾಗಿ ಪರಿಗಣಿಸಿರುವ ಬಿಜೆಪಿ, ಅವರ ವಿರುದ್ಧ ಸೂಕ್ತ ಕ್ರಮಗುಳ್ಳಲು ಕಾನೂನಿನಲ್ಲಿ ಏನೆಲ್ಲಾ ಅವಕಾಶಗಳು ಇವೆ ಎನ್ನುವುದರ ಬಗ್ಗೆ ಹೈಕೋರ್ಟ್ ವಕೀಲರ ಜೊತೆ ಸುದೀರ್ಘ ಚರ್ಚೆ ನಡೆಸಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಆರ್.‌ ಅಶೋಕ್‌ ಸೇರಿದಂತೆ ಇನ್ನಿತರರು ಹೈಕೋರ್ಟ್‌ನಿಂದ ವಕೀಲರನ್ನು ಕರೆಸಿಕೊಂಡು ಚರ್ಚೆ ನಡೆಸಿದ್ದಾರೆ. ವಿಪ್‌ ಉಲ್ಲಂಘನೆಯನ್ನು ಮಾಡಲಾಗಿದೆ. ಈ ಬಗ್ಗೆ ಯಾವೆಲ್ಲ ಕ್ರಮವನ್ನು ತೆಗೆದುಕೊಳ್ಳಬಹುದು? ಎಂಬಿತ್ಯಾದಿ ವಿಷಯಗಳ ಬಗ್ಗೆ ಚರ್ಚೆಯನ್ನು ನಡೆಸಲಾಗಿದೆ. ಹೀಗಾಗಿ ಯಾವ ಕ್ರಮವನ್ನು ಕೈಗೊಳ್ಳಬಹುದು ಎಂಬ ನಿಟ್ಟಿನಲ್ಲಿ ಚರ್ಚೆಗಳು ನಡೆಯುತ್ತಿವೆ.

ಇನ್ನು ಪಕ್ಷ ಶಾಸಕರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬಹುದು. ಪಕ್ಷದಿಂದ ಎಸ್.ಟಿ.ಸೋಮಶೇಖರ್‌ರನ್ನು ಉಚ್ಚಾಟಿಸಬಹುದು. ಅಡ್ಡ ಮತದಾನ, ಪಕ್ಷವನ್ನು ತೊರೆದ ಕ್ರಮವೆಂದು ಆರೋಪಿಸಿ ಎಸ್.ಟಿ.ಸೋಮಶೇಖರ್ ಅವರನ್ನು ಅನರ್ಹಗೊಳಿಸುವಂತೆ ದೂರು ನೀಡಬಹುದು. ಆದರೆ ವಿಪ್ ಉಲ್ಲಂಘನೆ ಆಧರಿಸಿ ಕ್ರಮ ಕಷ್ಟಕರ. ಸ್ಪೀಕರ್ ಸಹ ಕಾಂಗ್ರೆಸ್ ಮೂಲದವರಾಗಿರುವುದರಿಂದ ಸೋಮಶೇಖರ್ ವಿರುದ್ಧ ಕ್ರಮ ಕಷ್ಟ ಸಾಧ್ಯ.

ವಜಾಗೊಳಿಸುವ ಮುನ್ನವೇ ರಾಜಿನಾಮೆ ಸಲ್ಲಿಕೆ ಸಾಧ್ಯತೆ ಇನ್ನು ಬಿಜೆಪಿ ವಿಪ್ ಜಾರಿ ಮಾಡಿದ ನಂತರವೂ ಅಡ್ಡ ಮತದಾನ ಮಾಡಿದ ಶಾಸಕ ಎಸ್.ಟಿ. ಸೋಮಶೇಖರ್ ಅವರು ತಮ್ಮನ್ನು ಬಿಜೆಪಿ ವಜಾಗೊಳಿಸುವ ಮುನ್ನವೇ ತಾವೇ ಸ್ವತಃ ತಮ್ಮ ಶಾಸಕ ಸ್ಥಾನಕ್ಕೆ ಹಾಗೂ ಬಿಜೆಪಿ ಸದಸ್ಯತ್ವಕ್ಕೆ ರಾಜಿನಾಮೆ ಸಲ್ಲಿಕೆ ಮಾಡುವ ಸಾಧ್ಯತೆಯಿದೆ. ಈ ಮೂಲಕ ತಾವು ಪಕ್ಷಾಂತರ ನಿಷೇಧ ಕಾಯ್ದೆಯಡಿ ವಜಾಗೊಳ್ಳುವುದನ್ನು ತಪ್ಪಿಸಿಕೊಳ್ಳಲು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.

Related Post

Leave a Reply

Your email address will not be published. Required fields are marked *