2024: ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂಸ್ಥೆ ಧಾರವಾಡ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಒಟ್ಟು 1 ಅಕೌಂಟೆಂಟ್ ಮತ್ತು ಸಹಾಯಕ ಹುದ್ದೆ ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಫೆಬ್ರವರಿ 28, 2024 ಅಂದರೆ ನಾಳೆ ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಆಸಕ್ತರು ಆಫ್ಲೈನ್/ಪೋಸ್ಟ್ ಮೂಲಕ ಅಪ್ಲೈ ಮಾಡಬೇಕು. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಧಾರವಾಡದಲ್ಲಿ ಪೋಸ್ಟಿಂಗ್ ನಿಗದಿ
ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.
ಶೈಕ್ಷಣಿಕ ಅರ್ಹತೆ: ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂಸ್ಥೆ ಧಾರವಾಡ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ ಬಿ.ಕಾಂ ಪೂರ್ಣಗೊಳಿಸಿರಬೇಕು.
ವಯೋಮಿತಿ: ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂಸ್ಥೆ ಧಾರವಾಡ ನೇಮಕಾತಿ ಪ್ರಕಟಣೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು ಗರಿಷ್ಠ 40 ವರ್ಷ ಮೀರಿರಬಾರದು. ಮೀಸಲಾತಿ ಅನುಸಾರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ.
ವೇತನ: ಮಾಸಿಕ ₹ 19,917
ಉದ್ಯೋಗದ ಸ್ಥಳ: ಧಾರವಾಡ
ಆಯ್ಕೆ ಪ್ರಕ್ರಿಯೆ: ಮೆರಿಟ್ ಪಟ್ಟಿ . ಅನುಭವ ಹೊಂದಿರಬೇಕು
ಅರ್ಜಿ ಹಾಕೋದು ಹೇಗೆ?
ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳಿಗೆ ಈ ಕೆಳಕಂಡದಿಂದ ಕಳುಹಿಸಬೇಕು.
ಯೋಜನಾ ನಿರ್ದೇಶಕರ ಕಚೇರಿ
ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂಸ್ಥೆ
ಕಾರ್ಮಿಕ ಭವನ, ಸಹಾಯಕ ಕಾರ್ಮಿಕ ಆಯುಕ್ತರ ಕಚೇರಿ
ಧಾರವಾಡ ವಿಭಾಗ
ಹುಬ್ಬಳ್ಳಿ 1ನೇ ಮಹಡಿ ಅಕ್ಷಯ ಪಾರ್ಕ್. ಪ್ರಿಯದರ್ಶಿನಿ ಮಹೇಶ ಪಿ.ಯು. ಕಾಲೇಜು ರಸ್ತೆ ಹುಬ್ಬಳ್ಳಿ.
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 14/02/2024. ಸಲ್ಲಿಸಲು ಕೊನೆಯ ದಿನ : ಅರ್ಜಿ 28, 2024(ನಾಳೆ)