Breaking
Mon. Dec 23rd, 2024

ಬಿಗ್ಬಾಸ್ ಸೀಸನ್ 10ರ ಸ್ಪರ್ಧಿಗಳಾದ ಕಾರ್ತಿಕ್ ಮಹೇಶ್ ಹಾಗೂ ನಮ್ರತಾ ಹಸೆ ಮಣೆ

ಬಿಗ್ಬಾಸ್ನಲ್ಲಿ (BiggBoss) ಪ್ರೀತಿ-ಪ್ರೇಮ, ಸ್ನೇಹ, ಸರಸ-ವಿರಸಗಳು ಸಾಮಾನ್ಯ. ಕೆಲವು ಜೋಡಿಗಳಂತೂ ಬಿಗ್ಬಾಸ್ ಮನೆಗೆ ಹೋಗಿ ಪ್ರೇಮಿಗಳಾಗಿ ಹೊರಬಂದಿದ್ದಿದೆ. ಈ ಬಾರಿ ಬಿಗ್ಬಾಸ್ ಕನ್ನಡ ಸೀಸನ್ 10ರಲ್ಲಿ ಕೆಲವು ಸ್ಪರ್ಧಿಗಳ ನಡುವೆ ಆತ್ಮೀಯತೆ ತುಸು ಹೆಚ್ಚೇ ಇತ್ತು. ಅದರಲ್ಲಿಯೂ ಕಾರ್ತಿಕ್ ಹಾಗೂ ನಮ್ರತಾ ಬಿಗ್ಬಾಸ್ನ ಕೊನೆಯ ಕೆಲ ವಾರಗಳಲ್ಲಿ ತುಸು ಹೆಚ್ಚೇ ಹತ್ತಿರವಾಗಿದ್ದರು. ಆದರೆ ಸಾಮಾಜಿಕ ಜಾಲತಾಣದಲ್ಲಿ ಇದೇ ವಿಷಯಕ್ಕೆ ನಮ್ರತಾರನ್ನು ಕೆಟ್ಟದಾಗಿ ಬಿಂಬಿಸಲಾಗುತ್ತಿದೆ ಎಂಬ ಕಾರಣಕ್ಕೆ ನಮ್ರತಾ ಹಾಗೂ ಕಾರ್ತಿಕ್ ಪರಸ್ಪರ ದೂರಾದರು.

ಆದರೆ ಹೊರಗೆ ಬಂದ ಮೇಲೆ ಈಗ ಅಚಾನಕ್ಕಾಗಿ ನಮ್ರತಾ ಹಾಗೂ ಕಾರ್ತಿಕ್ ಮಹೇಶ್ ಹಸೆಮಣೆ ಏರಿದ್ದಾರೆ! ಇಬ್ಬರೂ ಮದುವೆ ಆಗಿಬಿಟ್ಟರೆ ಎಂದು ಶಾಕ್ ಆಗುವಂತಿಲ್ಲ. ಇಬ್ಬರೂ ಹಸೆಮಣೆ ಏರಿರುವುದು ಜಾಹೀರಾತೊಂದರ ಚಿತ್ರೀಕರಣಕ್ಕಾಗಿ. ನಮ್ರತಾ ಹಾಗೂ ಕಾರ್ತಿಕ್ ಮಹೇಶ್ ಅವರುಗಳು ಚಿನ್ನಾಭರಣದ ಜಾಹೀರಾತು ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ಜಾಹೀರಾತು ಚಿತ್ರೀಕರಣದ ವಿಡಿಯೋ ಹಾಗೂ ಚಿತ್ರಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿವೆ.

ಖ್ಯಾತ ಉದ್ಯಮಿ, ರಾಜಕಾರಣಿ ಟಿಎ ಶರವಣ ಅವರ ಚಿನ್ನದ ಮಳಿಗೆ ಶ್ರೀ ಸಾಯಿ ಗೋಲ್ಡ್ ಪ್ಯಾಲೆಸ್ ಬ್ರ್ಯಾಂಡ್ಗಾಗಿ ಕಾರ್ತಿಕ್ ಹಾಗೂ ನಮ್ರತಾ ಒಟ್ಟಿಗೆ ಈ ಜಾಹೀರಾತು ಚಿತ್ರೀಕರಣ ಮಾಡಿದ್ದಾರೆ. ಇಬ್ಬರೂ ವಧು-ವರರಂತೆ ವೇಷ ತೊಟ್ಟು ಮೈತುಂಬ ಚಿನ್ನದ ಆಭರಣಗಳನ್ನು ತೊಟ್ಟು ಜಾಹೀರಾತು ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ಟಿಎ ಶರವಣ ಸಹ ಜಾಹೀರಾತು ಚಿತ್ರೀಕರಣದಲ್ಲಿ ಭಾಗಿಯಾಗಿದ್ದು, ವಧು-ವರರಿಗೆ ಆಶೀರ್ವಾದ ಮಾಡುವ ದೃಶ್ಯದಲ್ಲಿ ಹಿರಿಯರಾಗಿ ಅವರು ಕಾಣಿಸಿಕೊಂಡಿದ್ದಾರೆ.

ರೆಸಾರ್ಟ್ ಒಂದರಲ್ಲಿ ಈ ಜಾಹೀರಾತಿನ ಚಿತ್ರೀಕರಣ ನಡೆದಿದ್ದು, ಕಾರ್ತಿಕ್ ಹಾಗೂ ನಮ್ರತಾ ಸುಂದರವಾಗಿ ಕಾಣಿಸಿಕೊಂಡಿದ್ದಾರೆ. ಚಿತ್ರೀಕರಣದ ಕೆಲವು ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿವೆ. ವಧು-ವರರಾಗಿ ಕಾಣಿಸಿಕೊಂಡಿರುವ ಕಾರ್ತಿಕ್-ನಮ್ರತಾರ ಜೋಡಿ ಕಂಡು ಒಳ್ಳೆಯ ಜೋಡಿಯೆಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ.

Related Post

Leave a Reply

Your email address will not be published. Required fields are marked *