ಸಮಾಜಸೇವೆಯಲ್ಲೂ ಹೆಸರು ಮಾಡಿರುವ ಖ್ಯಾತ ಉದ್ಯಮಿ ಮುಕೇಶ್ ಅಂಬಾನಿ ಫ್ಯಾಮಿಲಿ, ಇದೀಗ ಮಗನ ಮದುವೆ ಸಂಭ್ರಮದಲ್ಲೂ ಸಮಾಜಸೇವೆ ಮರೆತಿಲ್ಲ. ಇಂದು ಗ್ರಾಮಸ್ಥರಿಗಾಗಿ ಅನ್ನದಾನ ಹಮ್ಮಿಕೊಂಡಿದ್ದು, ಖುದ್ದು ಮುಕೇಶ್ ಅಂಬಾನಿಯವರೇ ಊಟ ಬಡಿಸಿದ್ದು ವಿಶೇಷವಾಗಿತ್ತು.
ಖ್ಯಾತ ಉದ್ಯಮಿ ಮುಕೇಶ್ ಅಂಬಾನಿ ಹಾಗೂ ನೀತಾ ಅಂಬಾನಿಯವರ ಕಿರಿಯ ಮಗನ ಮದುವೆ ಸಂಭ್ರಮ ಈಗಾಗಲೇ ಶುರುವಾಗಿದೆ. ಗುಜರಾತ್ನ ಜಾಮ್ನಗರದಲ್ಲಿ ವಿವಾಹ ಪೂರ್ವ ಕಾರ್ಯಕ್ರಮಗಳು ನಡೆಯುತ್ತಿವೆ
ಮುಕೇಶ್ ಅಂಬಾನಿ ಹಾಗೂ ನೀತಾ ಅಂಬಾನಿ ದಂಪತಿಯ ಕಿರಿಯ ಪುತ್ರ ಅನಂತ್ ಅಂಬಾನಿ ಅವರು ರಾಧಿಕಾ ಮರ್ಚೆಂಟ್ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ. ಈಗಾಗಲೇ ಅಂಬಾನಿ ಕುಟುಂಬದಲ್ಲಿ ಮದುವೆ ಸಂಭ್ರಮ ಶುರುವಾಗಿದೆ.
ಸಮಾಜಸೇವೆಯಲ್ಲೂ ಹೆಸರು ಮಾಡಿರುವ ಖ್ಯಾತ ಉದ್ಯಮಿ ಮುಕೇಶ್ ಅಂಬಾನಿ ಫ್ಯಾಮಿಲಿ, ಇದೀಗ ಮಗನ ಮದುವೆ ಸಂಭ್ರಮದಲ್ಲೂ ಸಮಾಜಸೇವೆ ಮರೆತಿಲ್ಲ. ಇಂದು ಗ್ರಾಮಸ್ಥರಿಗಾಗಿ ಅನ್ನದಾನ ಹಮ್ಮಿಕೊಂಡಿದ್ದು, ಖುದ್ದು ಮುಕೇಶ್ ಅಂಬಾನಿಯವರೇ ಊಟ ಬಡಿಸಿದ್ದು ವಿಶೇಷವಾಗಿತ್ತು.
ಜಾಮ್ನಗರದ ರಿಲಯನ್ಸ್ ಟೌನ್ಶಿಪ್ ಬಳಿಯ ಜೋಗ್ವಾಡ್ ಗ್ರಾಮದಲ್ಲಿ ಅನ್ನದಾನದೊಂದಿಗೆ ಕಾರ್ಯಕ್ರಮಗಳು ಪ್ರಾರಂಭವಾಯಿತು. ಜೋಗ್ವಾಡ ಗ್ರಾಮದ ಜನರನ್ನು ಊಟಕ್ಕೆ ಆಹ್ವಾನಿಸಲಾಗಿತ್ತು.
ಮುಕೇಶ್ ಅಂಬಾನಿ, ಅನಂತ್ ಅಂಬಾನಿ ಮತ್ತು ಅಂಬಾನಿ ಕುಟುಂಬದ ಇತರ ಸದಸ್ಯರು ಹಳ್ಳಿಗರಿಗೆ ಸಾಂಪ್ರದಾಯಿಕ ಗುಜರಾತಿ ಆಹಾರವನ್ನು ಬಡಿಸಿದರು. ಲಡ್ಡು ಸೇರಿದಂತೆ ವಿವಿಧ ರೀತಿಯ ಖಾದ್ಯಗಳನ್ನು ಬಡಿಸಲಾಯ್ತು.
ಖುದ್ದು ಮುಕೇಶ್ ಅಂಬಾನಿ ಅವರೇ ಹಳ್ಳಿಗರಿಗೆ ಸಿಹಿ ತಿಂಡಿ ಬಡಿಸಿದರು. ಇದಕ್ಕೆ ಪುತ್ರ ಅನಂತ್ ಅಂಬಾನಿ ಕೂಡ ಸಾಥ್ ಕೊಟ್ಟರು. ಅಷ್ಟೇ ಅಲ್ಲದೇ ಇಡೀ ಅಂಬಾನಿ ಕುಟುಂಬದ ಸದಸ್ಯರೆಲ್ಲ ಈ ಅನ್ನದಾನದಲ್ಲಿ ಭಾಗಿಯಾಗಿದ್ರು.
ರಾಧಿಕಾ ಮರ್ಚೆಂಟ್ ಅವರ ತಂದೆ ವೀರೆನ್ ಮರ್ಚೆಂಟ್ ಹಾಗೂ ತಾಯಿ ಶೈಲಾ ಮರ್ಚೆಂಟ್ ಹಾಗೂ ವೀರೆನ್ ಕುಟುಂಬಸ್ಥರು ಕೂಡ ಈ ಅನ್ನದಾನ ಸೇವೆಯಲ್ಲಿ ಭಾಗಿಯಾಗಿದ್ದರು.
ಸುಮಾರು 51 ಸಾವಿರ ಮಂದಿ ಹಳ್ಳಿಗರು ಊಟದಲ್ಲಿ ಭಾಗಿಯಾಗಿದ್ದು ವಿಶೇಷವಾಗಿತ್ತು. ಈ ಅನ್ನದಾನ ಸೇವೆ ಕೆಲವು ದಿನಗಳವರೆಗೆ ಮುಂದುವರೆಯುತ್ತದೆ ಅಂತ ಹೇಳಲಾಗಿದೆ
ಇನ್ನು ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಅವರ ಅದ್ಧೂರಿ ವಿವಾಹೋತ್ಸವಕ್ಕೆ ಗಣ್ಯಾತಿಗಣ್ಯರಿಗೆ ಆಹ್ವಾನ ನೀಡಲಾಗಿದೆ. ಬಾಲಿವುಡ್ ತಾರೆಯರು, ಕ್ರೀಡಾಪಟುಗಳು, ಉದ್ಯಮಿಗಳು, ರಾಜಕಾರಣಿಗಳು, ವಿವಿಧ ಕ್ಷೇತ್ರಗಳ ಖ್ಯಾತನಾಮರು ಸೇರಿದಂತೆ ದೇಶ ವಿದೇಶಗಳ ಗಣ್ಯಾತಿಗಣ್ಯರು ವಿವಾಹ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ.