ದಾಬಸ್ ಪೇಟೆ ಆರ್ ಟಿ ಓ ಹೋಂ ಗಾರ್ಡ್ ಅಧಿಕಾರಿಯ ನಿರ್ಲಕ್ಷಕ್ಕೆ ಲಾರಿ ಏನ್ ಮಾಡೋದು ಪಲ್ಟಿಯಾಗಿರುವ ಆರೋಪ ಕೇಳಿ ಬಂದಿದೆ. ಸೋಂಪುರ ಹೋಬಳಿಯ ಎಡೇಹಳ್ಳಿ ಖಾಸಗಿ ಹೋಟೆಲ್ ಬಳಿ ಲಾರಿ ಪಲ್ಟಿಯಾಗಿದೆ.
ರಾಷ್ಟ್ರೀಯ ಹೆದ್ದಾರಿ 48 ರ ತುಮಕೂರು ನಿಂದ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದ ಲಾರಿಯನ್ನು ವಾಹನ ತಪಾಸಣೆ ಮಾಡುವ ನೆಪದಲ್ಲಿ ಸೋಂಪುರ ವರವಲಯದ ಹೊಸ ನಿಜ್ಗಲ್ ಬಳಿ ಲಾರಿ ಏರಿದ ಹೋಂ ಗಾರ್ಡ್ ಚಂದ್ರಶೇಖರ್ ನಂತರ ಎಡೇಹಳ್ಳಿ ಬಳಿ ಲಾರಿ ಚಾಲಕನಿಗೆ ಧಮ್ಕಿ ಹಾಕಿದ್ದಾರೆ.
ಆಗ ಸ್ಟೇರಿಂಗ್ ಹಿಡಿದು ಎಳೆದ ಆರ್ ಟಿ ಓ ಹೋಂ ಗಾರ್ಡ್ ನಿಂದ ಚಾಲಕನ ನಿಯಂತ್ರಣ ತಪ್ಪಿ ಲಾರಿ ಪಾರ್ಟಿಯಾಗಿದೆ ಎಂದು ಲಾರಿ ಚಾಲಕ ಮತ್ತು ಸ್ಥಳೀಯ ನರಸೀಪುರದ ಗ್ರಾಮಸ್ಥ ರಾಮಕೃಷ್ಣ ಆರೋಪಿಸಿದ್ದಾರೆ.
ಅದೃಷ್ಟ ವಶ ಯಾವುದೇ ತೊಂದರೆಯಾಗಿಲ್ಲ. ಘಟನೆಗೆ ಸಂಬಂಧಿಸಿದಂತೆ ದಾಬಸ್ ಪೇಟೆ ಪೊಲೀಸ್ ಇನ್ಸ್ಪೆಕ್ಟರ್ ಬಿ ರಾಜು ಮತ್ತು ಸಿಬ್ಬಂದಿ ಘಟನಾ ಸ್ಥಳಕ್ಕೆ ಭೇಟಿಯ ನೀಡಿ ಪರಿಶೀಲನೆ ನಡೆಸಿದ್ದಾರೆ.ಈ ಪ್ರಕರಣವು ದಾಬಸ್ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದೂರು ದಾಖಲಾಗಿದೆ.