ರಾಕಿಂಗ್ ಸ್ಟಾರ್’ ಯಶ್ ಹಾಗೂ ಪ್ಯಾನ್ ಇಂಡಿಯಾ ಡೈರೆಕ್ಟರ್ ರಾಜಮೌಳಿ ಅವರು ಬಳ್ಳಾರಿಯ ಶ್ರೀ ಅಮೃತೇಶ್ವರ ದೇವಸ್ಥಾನದ ಉದ್ಘಾಟನೆಯಲ್ಲಿ ಭಾಗಿ ಆಗಿದ್ದಾರೆ. ಅವರನ್ನು ನೋಡಲು ಸಾವಿರಾರು ಅಭಿಮಾನಿಗಳು ಮುಗಿದಿದ್ದಾರೆ. ಈ ಸಂದರ್ಭದ ವಿಡಿಯೋ ವೈರಲ್ ಆಗಿದೆ. ದೇವರಿಗೆ ಪೂಜೆ ಸಲ್ಲಿಸಿ, ದರ್ಶನ ಪಡೆದ ಬಳಿಕ ಮಾಧ್ಯಮಗಳ ಜೊತೆ ಯಶ್ ಮಾತನಾಡಿದ್ದಾರೆ.
ಪ್ಯಾನ್ ಇಂಡಿಯಾ ಸ್ಟಾರ್ ಯಶ್ (Yash) ಅವರು ‘ಟ್ಯಾಕ್ಸಿಕ್’ ಸಿನಿಮಾದ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಈ ಚಿತ್ರದ ಕೆಲಸಗಳ ನಡುವೆ ಬಿಡುವು ಮಾಡಿಕೊಂಡು ಅವರು ಬಳ್ಳಾರಿಗೆ ತೆರಳಿದ್ದಾರೆ. ಅಲ್ಲಿ ಶ್ರೀ ಅಮೃತೇಶ್ವರ ದೇವಸ್ಥಾನದ (Sri Amrutheshwara Temple) ಉದ್ಘಾಟನೆಯಲ್ಲಿ ಅವರು ಭಾಗಿ ಆಗಿದ್ದಾರೆ. ಟಾಲಿವುಡ್ನ ಖ್ಯಾತ ನಿರ್ದೇಶಕ ರಾಜಮೌಳಿ ಅವರು ಕೂಡ ಈ ದೇವಸ್ಥಾನದ ಉದ್ಘಾಟನೆಯಲ್ಲಿ ಪತ್ನಿ ಸಮೇತರಾಗಿ ಭಾಗಿಯಾಗಿದ್ದಾರೆ. ಪ್ರಾಣ ಪ್ರತಿಷ್ಠಾಪನೆಗೆ ಸಾಕ್ಷಿಯಾದ ರಾಜಮೌಳಿ (SS Rajamouli) ಮತ್ತು ಯಶ್ ಅವರನ್ನು ನೋಡಲು ಅಭಿಮಾನಿಗಳು ಮುಗಿಬಿದ್ದಿದ್ದಾರೆ.
ದೇವರ ದರ್ಶನಕ್ಕೆ ಬಂದಿದ್ದೇನೆ. ಸಾಯಿ ಅವರು ನಮ್ಮ ಆತ್ಮೀಯರು. ‘ಕೆಜಿಎಫ್ 1’ ಸಿನಿಮಾವನ್ನು ತೆಲುಗಿನಲ್ಲಿ ಅವರು ವಿತರಣೆ ಮಾಡಿದ್ದರು. ಆ ಸಿನಿಮಾದ ಗೆಲುವಿಗೆ ಅವರು ಕೂಡ ಕಾರಣ ಆಗಿದ್ದರು. ಅವರು ತುಂಬ ದೈವ ಭಕ್ತರು ಕೂಡ ಹೌದು. ಅವರು ಊರಿನಲ್ಲಿ ದೇವಸ್ಥಾನದ ಕಟ್ಟುವಾಗ ನನಗೆ ಮೊದಲೇ ಹೇಳಿದ್ದರು. ಅದಕ್ಕಾಗಿ ಇವತ್ತು ಬಂದಿದ್ದೇನೆ. ದೇವರ ದರ್ಶನ ಮಾಡಿದೆ. ಪೂಜೆಯಲ್ಲಿ ಭಾಗಿದ್ದು ಬಹಳ ಖುಷಿ ಆಯಿತು’ ಎಂದು ಯಶ್ ಹೇಳಿದ್ದಾರೆ.
ಶ್ರೀ ಅಮೃತೇಶ್ವರ ದೇವಸ್ಥಾನದ ಉದ್ಘಾಟನೆ ಬಳಿಕ ಮಾಧ್ಯಮದವರ ಜೊತೆ ಯಶ್ ಮಾತನಾಡಿದ್ದಾರೆ. ಈ ವೇಳೆ ತಮ್ಮ ವೈರಲ್ ಫೋಟೋದ ಬಗ್ಗೆಯೂ ಅವರು ಮಾತನಾಡಿದರು. ‘ಅದು ನಮ್ಮ ರಾಧಿಕಾ ಅವರ ಮನೆಯ ಬಳಿಯ ದೇವಸ್ಥಾನಕ್ಕೆ ಹೋದಾಗ ಮಕ್ಕಳು ತಿಂಡಿ ಕೇಳಿದ್ದರು. ತಿಂಡಿ ಕೊಡಿಸುತ್ತಿದ್ದೆ ಅಷ್ಟೇ. ಆ ಅಂಗಡಿಗೆ ನಾವು 10-12 ವರ್ಷದಿಂದ ಹೋಗುತ್ತಿದ್ದೇವೆ’ ಎಂದು ಯಶ್ ಹೇಳಿದ್ದಾರೆ.