ಇಂಡಿ : ಅಕ್ರಮ ಶ್ರೀಗಂಧ ತುಂಡುಗಳನ್ನು ಸಾಗಾಣಿಕೆ ಮಾಡುತ್ತಿರುವುದನ್ನು ಪತ್ತೆ ಮಾಡಿರುವ ಪೊಲೀಸರು 25500 ರೂ. ಮೌಲ್ಯದ ಶ್ರೀಗಂಧ ಹಾಗೂ ಬೈಕನ್ನು ವಶಪಡಿಸಿಕೊಂಡಿದ್ದಾರೆ.
ಶ್ರೀಗಂಧ ಸಾಗಾಣಿಕೆ ಮಾಡುತ್ತಿದ್ದ ಆರೋಪಿಗಳು ಬೈಕ್ ಬಿಟ್ಟು ಪರಾರಿಯಾಗಿದ್ದಾರೆ ಸರ್ಕಾರದ ಪರವಾನಿಗೆ ಇಲ್ಲದೆ ಆರೋಪಿಗಳು ಬೈಕ್ನಲ್ಲಿ ಶ್ರೀಗಂಧ ಕಟ್ಟಿಗೆ ತುಂಡುಗಳನ್ನು ಸಾಗಾಣಿಕೆ ಮಾಡುತ್ತಿದ್ದಾರೆ.
ಎಂಬ ಖಚಿತ ಮಾಹಿತಿ ಆಧರಿಸಿ ಪೊಲೀಸರು ದಾಳಿ ಮಾಡಿದ್ದಾರೆ. ಸಂಗೋಗಿ ಗ್ರಾಮದ ಬಳಿಯಲ್ಲಿರುವ ಹಿರೇಮಸಳ್ಳಿ ಕ್ರಾಸ್ ಬಳಿ ಪೊಲೀಸರು ಬರುತ್ತಿದ್ದಾರೆಂದು ತಿಳಿದು ಆರೋಪಿಗಳು ಪರಾರಿಯಾಗಿದ್ದಾರೆ. ಆರೋಪಿಗಳಿಂದ 12,750 ಕಿಲೋ ಗ್ರಾಂ ಶ್ರೀಗಂಧದ ಕಟ್ಟಿಗೆ ಹಾಗೂ ಬೈಕ್ ವಶಪಡಿಸಿಕೊಂಡಿದ್ದಾರೆ.