ಶಿವಮೊಗ್ಗದ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳನ್ನು ನೇಮಕಾತಿ ಮಾಡಲು ಅಧಿಸೂಚನೆ ಬಿಡುಗಡೆ ಮಾಡಲಾಗಿದೆ.
ವಿವಿಯಲ್ಲಿನ ಅಧಿಕಾರಿಗಳ ಹುದ್ದೆಗಳನ್ನು ನಿಶ್ಚಿತಾವಧಿಯವರೆಗೆ ಭರ್ತಿ ಮಾಡಲಾಗುತ್ತದೆ. ಅಭ್ಯರ್ಥಿಗಳು ನಿಗದಿತ ಅವಧಿಯೊಳಗೆ ನಿಗದಿತ ಅರ್ಜಿ ನಮೂನೆಯಲ್ಲಿಯೇ ಅರ್ಜಿಗಳನ್ನು ಸಲ್ಲಿಸಲು ಕೋರಲಾಗಿದೆ.
ಅಧಿಕಾರಿಯ ಹುದ್ದೆಯ ಅವಧಿ : ಮೂರು ವರ್ಷಗಳ ನಿಶ್ಚಿತಾವಧಿ ಹುದ್ದೆ.
ಅಧಿಕಾರಿ ಹುದ್ದೆಯ ವೇತನ ಶ್ರೇಣಿ: ಶೈಕ್ಷಣಿಕ ಮಟ್ಟ 14 ರ ಪ್ರಕಾರ ವೇತನ ಶ್ರೇಣಿ ರೂ.1,44,200- 2,18,200. ಜತೆಗೆ ಮಾಸಿಕ ಇತರೆ ಭತ್ಯೆಗಳನ್ನು ನೀಡಲಾಗುತ್ತದೆ.
ಹುದ್ದೆಗಳ ವಿವರ
ಶಿಕ್ಷಣ ನಿರ್ದೇಶಕರು: 1
ಕುಲಸಚಿವರು : 1
ಸಂಶೋಧನಾ ನಿರ್ದೇಶಕರು: 1
ವಿಸ್ತರಣಾ ನಿರ್ದೇಶಕರು: 1
ವಿಶ್ವವಿದ್ಯಾಲಯದ ಗ್ರಂಥಪಾಲಕರು: 1
ಡೀನ್ (ಕೃಷಿ), ಕೃಷಿ ಮಹಾವಿದ್ಯಾಲಯ, ಶಿವಮೊಗ್ಗ : 1
ಡೀನ್ (ಅರಣ್ಯ), ಅರಣ್ಯ ಮಹಾವಿದ್ಯಾಲಯ, ಶಿವಮೊಗ್ಗ: 1
ಒಟ್ಟು : 7
ಈ ಮೇಲಿನ ಹುದ್ದೆಗಳ ನೇಮಕ ಕುರಿತ ಸಂಪೂರ್ಣ ವಿವರಗಳು, ನಿಗದಿಪಡಿಸಿದ ವಿದ್ಯಾರ್ಹತೆಗಳು, ಹುದ್ದೆಗೆ ನಿಗದಿತ ಅರ್ಜಿ ನಮೂನೆಗಳನ್ನು ವಿಶ್ವವಿದ್ಯಾಲಯದ ಅಧಿಕೃತ ವೆಬ್‌ಸೈಟ್ www.uahs.edu.in ನಲ್ಲಿ ಲಭ್ಯ ಇರುತ್ತದೆ.
ಅರ್ಜಿ ಹಾಕುವವರಿಗೆ ಸೂಚನೆ
ವೆಬ್‌ಸೈಟ್‌ನಲ್ಲಿ ಅರ್ಜಿ ನಮೂನೆ ಡೌನ್‌ಲೋಡ್ ಮಾಡಿಕೊಳ್ಳಿ. ನಂತರ ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಭ್ಯರ್ಥಿಗಳು ಅಧಿಕಾರಿಗಳ ಹುದ್ದೆಗೆ ಅರ್ಜಿ ಎಂದು ಲಕೋಟೆಯ ಮೇಲೆ ನಮೂದಿಸಿ, ಆಡಳಿತಾಧಿಕಾರಿಗಳು, ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಇರುವಕ್ಕಿ, ಶಿವಮೊಗ್ಗ -577412 ಇವರಿಗೆ ದಿನಾಂಕ 20-03-2024 ರಂದು 05-00 ಗಂಟೆ ಒಳಗಾಗಿ ತಲುಪುವಂತೆ ಸಲ್ಲಿಸಬೇಕು.