Breaking
Mon. Dec 23rd, 2024

ಆಡಳಿತದಲ್ಲಿ ಅಸಹಾಯಕತೆ ತೋರಿರುವ ಪಿಡಿಓ ಚಂದ್ರಕಲಾ ಅವರ‌ ನಡುವಳಿಕೆಗೆ ಬೇಸತ್ತು : ಸರ್ವ ಸದಸ್ಯರ ರಾಜೀನಾಮೆ

ಚಿತ್ರದುರ್ಗ ತಾಲ್ಲೂಕಿನ ಜವನಗೊಂಡನಹಳ್ಳಿ ಹೋಬಳಿಯ ಕರಿಯಾಲ ಗ್ರಾಮಪಂಚಾಯತಿ ಪಿಡಿಓ ಚಂದ್ರಕಲಾ ಅವರು ಸರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಹಾಗೂ ಸಾರ್ವಜನಿಕರ ಕೈಗೆ ಸಿಗುತ್ತಿಲ್ಲ ಎಂದು ಆರೋಪಿಸಿ ಅಧ್ಯಕ್ಷರು ಹಾಗೂ ಸದಸ್ಯರು ಗುರುವಾರ ಸಾಮೂಹಿಕ ರಾಜೀನಾಮೆ ಸಂಸ್ಥೆಯನ್ನು ನಡೆಸುತ್ತಿದ್ದಾರೆ.

ವ್ಯಾಪ್ತಿಯ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಂಡಿದೆ, ಸಮಸ್ಯೆ ಬಗೆಹರಿಸುವಲ್ಲಿ ವಿಫಲವಾಗಿದೆ. ಜೊತೆಗೆ ಪಂಚಾಯಿತಿ ಅಭಿವೃದ್ಧಿ ಕಾರ್ಯಗಳು ಸಂಪೂರ್ಣವಾಗಿ ನಿಂತು ಹೋಗಿದ್ದು, ಗ್ರಾಮಗಳಲ್ಲಿ ತೊಂದರೆ ಉಂಟಾಗಿದೆ. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬೇಜವಾಬ್ದಾರಿ ತೋರುತ್ತಿದ್ದಾರೆ ಎಂದು ದೂರಿದರು. ಗ್ರಾಮ ಪಂಚಾಯಿತಿಯಲ್ಲಿ 15 ಜನ ಸದಸ್ಯರಿದ್ದಾರೆ. ಉಪಾಧ್ಯಕ್ಷರು ಸೇರಿ 11 ಜನ ಸದಸ್ಯರು ಪ್ರಕಟಣೆ. ಅಧ್ಯಕ್ಷರು ಕೂಡ ರಾಜೀನಾಮೆ ನೀಡಲಿದ್ದಾರೆ, ಉಳಿದ ಮೂರು ಜನ ಕಾರಣಗಳಿಂದ ಬೇರೆಡೆಯಿದ್ದು, ದಿನಗಳಲ್ಲಿ ಅವರು ರಾಜೀನಾಮೆ ನೀಡಲಿದ್ದಾರೆ.ಜೀನಾಮೆ ಕುರಿತು ಪಂಚಾಯಿತಿ ಸದಸ್ಯ ಕೆ. ಬಸವರಾಜ್ ಪಂಚಾಯಿತಿ ಪಿಡಿಯೊ ಅವರು ಅಧ್ಯಕ್ಷ, ಉಪಾಧ್ಯಕ್ಷರು ಹಾಗೂ ಸದಸ್ಯರಿಗೆ ಗೌರವ ಕೊಡದೆ ಅಗೌರವ ತೋರಿಸುತ್ತಾರೆ. ಪಂಚಾಯಿತಿ ಪ್ರಮುಖವಾಗಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ. ಸರಿಯಾದ ಸಮಯಕ್ಕೆ ಈಸ್ವತ್ತು ಮಾಡಿಕೊಡುತ್ತಿಲ್ಲ.

ವಸತಿ ಯೋಜನೆ ಮನೆಗಳಿಗೆ ಹಣ ಬಿಲ್ ಪಾಸ್ ಮಾಡುತ್ತಿಲ್ಲ, ನೇರ ಯೋಜನೆಯಲ್ಲಿ ಯಾವುದೇ ಕೆಲಸಗಳು ನಡೆಯುತ್ತಿಲ್ಲ. ಪಂಚಾಯಿತಿ ಅಧ್ಯಕ್ಷ ಉಪಾಧ್ಯಕ್ಷರು ಹಾಗೂ ಸದಸ್ಯರು ಪೋನ್ ಸಂಪರ್ಕಕ್ಕೆ ಸಿಗದೇ ನಿರ್ಲಕ್ಷ್ಯ ತೋರುತ್ತಿದ್ದಾರೆ. ಗ್ರಾಪಂಗೆ ಸರಿಯಾದ ಸಮಯದಲ್ಲಿ ಕರ್ತವ್ಯಕ್ಕೆ ಹಾಜರಾಗುತ್ತಿಲ್ಲ.

ಎನ್.ಆರ್. ಜಿ. ಕಾಮಗಾರಿಯಲ್ಲಿ ರೈತರ ಸಾಮಗ್ರಿಗಳ ವೆಚ್ಚದ ಬಿಲ್ ಮಾಡದೇ ಇರುವುದು. ಇಲ್ಲದೆ ಪ್ರಮುಖವಾಗಿ ಕುಡಿಯುವ ನೀರಿನ ಸಾಮಗ್ರಿಗಳು ಮತ್ತು ವಿದ್ಯುತ್ ಬಲ್ಬ್ಗಳು ಅಂಗಡಿಯಲ್ಲಿ ಖರೀದಿ ಮಾಡಿದ್ದು, ಅಂಗಡಿಯ ಬಿಲ್ಲು ಕೊಡದೆ ಸತಾಯಿಸುತ್ತಿದ್ದಾರೆ. ಈಗೆ ಅನೇಕ ಸಮಸ್ಯೆಗಳಿವೆ. ಆಡಳಿತದಲ್ಲಿ ಅಸಹಾಯಕತೆ ತೋರಿರುವ ಪಿಡಿಓ ಚಂದ್ರಕಲಾ ಅವರ ನಡುವಳಿಕೆಗೆ ಬೇಸತ್ತು ರಾಜೀನಾಮೆ ನೀಡಿದ್ದೇವೆ ಎಂದು ಪ್ರಕಟಿಸಿದರು.

 

 

Related Post

Leave a Reply

Your email address will not be published. Required fields are marked *