ವಿಧಾನಸೌಧದ ಮುಂಭಾಗ ಕಲರ್ ಫುಲ್ ಸಂಜೆಯಲ್ಲಿ ಚಿತ್ರೋತ್ಸವ ಕಾರ್ಯಕ್ರಮದಲ್ಲಿ ಕನ್ನಡ ಸಿನಿ ತಾರೆಯರ ದಂಡು ಸಾಕ್ಷಿಯಾಗಿತ್ತು. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಚಲನಚಿತ್ರೋತ್ಸವ ರಾಯಭಾರಿ ಡಾಲಿ ಧನಂಜಯ, ಕನ್ನಡ ಚಲನಚಿತ್ರ ಅಕಾಡೆಮಿಯ ನೂತನ ಅಧ್ಯಕ್ಷ ಸಾಧು ಕೋಕಿಲ ಸೇರಿದಂತೆ ಹಲವು ನಟನಟಿಯರು ಭಾಗಿಯಾಗಿದ್ದರು.
90 ವರ್ಷ ಪೂರೈಸಿದ ಕನ್ನಡ ಸಿನಿಮಾರಂಗದ ಸಾಧನೆ ಪುಸ್ತಕ ಬಿಡುಗಡೆ ನಾಡಗೀತೆ ಮೂಲಕ ಶುರುವಾದ ಕಾರ್ಯಕ್ರಮವನ್ನು ದೀಪ ಬೆಳಗುವ ಮೂಲಕ ಸಿಎಂ ಫಿಲ್ಮ್ ಫೆಸ್ಟಿವಲ್‌ಗೆ ಚಾಲನೆ ಕೊಟ್ಟರು. ನಟ ಶಿವಣ್ಣ ಚಿತ್ರೋತ್ಸವದ ಕೈಪಿಡಿ ಲಾಂಚ್ ಮಾಡಿದರು. ಚಲನಚಿತ್ಸೋವದ ರಾಯಭಾರಿ ಡಾಲಿ 90 ವರ್ಷ ಪೂರೈಸಿದ ಕನ್ನಡ ಸಿನಿಮಾರಂಗದ ಸಾಧನೆ ಪರ್ವದ ವಿಶೇಷ ಪುಸ್ತಕ ಬಿಡುಗಡೆ ಮಾಡಿದರು.
ಶಿವಣ್ಣ ಮಾತನಾಡಿ ಕನ್ನಡದ ಕೆಜಿಎಫ್, ಕಾಂತಾರ ಚಿತ್ರಗಳು ಅಂತಾರಾಷ್ಟ್ರೀಯ ಮಟ್ಟಕ್ಕೆ ರೀಚ್ ಆಗಿವೆ. ನಮ್ಮ ಚಿತ್ರರಂಗಕ್ಕೆ 90 ವರ್ಷ ಪೂರೈಸಿದ್ದು, ಇದರಲ್ಲಿ 38 ವರ್ಷ ನನ್ನ ಸೇವೆಯಿದೆ ಎಂದು ಹೇಳಿದರು. ಆರ್ಟ್, ಸ್ಫೋರ್ಟ್ಸ್, ಸೈನ್ಸ್‌ಗೆ ಜನರನ್ನು ಒಂದು ಕಡೆ ಸೇರಿಸುವ ಶಕ್ತಿಯಿದೆ. ನಾವೆಲ್ಲ ಇಲ್ಲಿ ಬದುಕು ಕಟ್ಕೋಂಡಿದ್ದೀವಿ ಅಂತ ಡಾ ಧನಂಜಯ್ ಹೇಳಿದರು.
15 ನೇ ಸಿನಿಮೋತ್ಸವಕ್ಕೆ ಚಾಲನೆ ಕೊಟ್ಟ ಸಿಎಂ ಸಿದ್ದರಾಮಯ್ಯ 15ನೇ ಚಿತ್ರೋತ್ಸವನ್ನ ಸಂತೋಷದಿಂದ ಉದ್ಘಾಟನೆ ಮಾಡಿದ್ದೇನೆ. ಈ ಹಿಂದೆ ಸಿಎಂ ಆಗಿದ್ದಾಗ 5 ವರ್ಷಗಳ ಕಾಲ ಎಲ್ಲಾ ಚಿತ್ರೋತ್ಸವಗಳಲ್ಲಿ ಭಾಗಿಯಾಗಿದ್ದೆ. ಮನುಷ್ಯ ಮನುಷ್ಯನನ್ನ ಎಂದೂ ದ್ವೇಷಿಸಬಾರದು. ಪರಸ್ಪರ ಪ್ರೀತಿಸಬೇಕು. ಆಗಲೇ ಜಗತ್ತಿನಲ್ಲಿ ಶಾಂತಿ ಸಾಧ್ಯ.
ಸಿನಿಮಾ ಬಹಳ ಪ್ರಭಾವಿ ಮಾಧ್ಯಮ. ಚಿಂತನೆಗೆ ಇದು ದಾರಿ ಮಾಡಿಕೊಡಲಿದೆ. 2019 ರಿಂದ ಸಿನಿಮಾಗಳಿಗೆ ರಾಜ್ಯ ಪ್ರಶಸ್ತಿ ನೀಡಿಲ್ಲ. ನಾನು ಕಮಿಟಿ ಮಾಡಿದ್ದೇನೆ ವರದಿ ಬಂದ ಕೂಡಲೇ ಬಾಕಿ ಇರುವ ಪ್ರಶಸ್ತಿಗಳ ಕೊಡ್ತಿವಿ ಎಂದಿದ್ದಾರೆ.
ಮಾರ್ಚ್ 7 ರ ತನಕ ರಾಜಧಾನಿಯಲ್ಲಿ ಸಿನಿಮಾ ಹಬ್ಬ ನಡೆಯಲಿದೆ. ಕನ್ನಡ ಸಿನಿಮಾಗಳು ಸೇರಿದಂತೆ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸಿನಿಮಾಗಳು ಪ್ರದರ್ಶನವಾಗಲಿವೆ.