ಚಿತ್ರದುರ್ಗ : ಹೆಚ್ಚಿನ ಸಂತ ಶ್ರೀ ಸೇವಾಲಾಲ್ ಜಯಂತಿ ಅಂಗವಾಗಿ ಬಂಜಾರ ಸಮಾಜದಿಂದ ಮೆರವಣಿಗೆ ಮಾಡಲಾಯಿತು. ನಗರದ ನೀಲಕಂಠೇಶ್ವರ ದೇವಸ್ಥಾನದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮತ್ತು ನಗರದ ಪ್ರಮುಖ ರಸ್ತೆಯ ಮೂಲಕ ಸೇವಾಲಾಲ್ರ ಭಾವಚಿತ್ರ ಮೆರವಣಿಗೆ ಮಾಡಿದ್ದು, ಯುವಕ ಮತ್ತು ಯುವತಿಯರು ಹೆಜ್ಜೆ ಹಾಕಿದ್ದಾರೆ.
ಬಂಜಾರ ಸಮುದಾಯಕ್ಕೆ ಸಾಕಷ್ಟು ಅನುಕೂಲವಾಯಿತು. ತಾಂಡಾಗಳನ್ನು ಒಳಗೊಂಡಿರುವ ಗ್ರಾಮಗಳನ್ನಾಗಿ ಘೋಷಿಸಲು ಸೂಚಿಸಲಾಗಿದೆ. ಸರ್ಕಾರವೇ ಸೇವಾಲಾಲ್ ಜಯಂತಿ ಆಚರಿಸಲು ನಿಗದಿಪಡಿಸಿದ್ದು, ಸೇವಾಲಾಲ್ ಒಂದು ಜಾತಿಗೆ ಸೀಮಿತವಲ್ಲ, ಮನುಷ್ಯ ಸಮಾಜದ ಬೆಳಕು. ಸ್ವಾಭಿಮಾನಿಗಳಾಗಿ ಬದುಕಲು ಪ್ರೇರಣೆ ಆಗಿದ್ದು ದಾರ್ಶನಿಕ ಎಂದು ಸೇವಾಲಾಲ್ ಸಮುದಾಯದ ಶ್ರೀ ಸರ್ದಾರ್ ಸೇವಾಲಾಲ್ ಸ್ವಾಮೀಜಿ ಹೇಳಿದರು.
ಇಂದು ಸಂತ ಸೇವಾಲಾಲ್ 285 ನೇ ಜಯಂತಿಯನ್ನು ಜಿಲ್ಲೆಯಲ್ಲಿ ಸಡಗರದಿಂದ ಆಚರಿಸಲಾಗಿದೆ. ಬಂಜಾರ ಸಮುದಾಯದ ಮೂಲ ಗುರುಗಳಾಗಿ ಸೇವಾಲಾಲರು ನಗರದ ಪ್ರಮುಖ ರಸ್ತೆಗಳಲ್ಲಿ ಸೇವಾಲಾಲ ಭಾವಚಿತ್ರ ಮೆರವಣಿಗೆ ಮಾಡಿದ್ದು, ಮಹಿಳೆಯರು ಬಂಜಾರ ನೃತ್ಯ ಮಾಡಿದ್ದಾರೆ.
ಚಿತ್ರದುರ್ಗ ಬರೆದ ನಾಡು ಈ ನಾಡಲ್ಲಿ ಜನರಿಗೆ ಉತ್ತಮ ಮಳೆ ಬೆಳೆ ಆಗಬೇಕು ಎಲ್ಲಾ ಜನರು ಸುಖ ಶಾಂತಿಯಿಂದ ಜೀವನ ನಡೆಸಬೇಕು ಹಾಗೂ ಈ ಬಂಜಾರ ಸಮುದಾಯಕ್ಕೆ ಸೇರಿದ ಸೇವಾಲಾಲ್ ಜಯಂತಿಯನ್ನು ಎಲ್ಲರೂ ಆಚರಿಸುವಂತೆ ಬರೀ ಆಚರಣೆಯಾಗದೆ ಎಲ್ಲರ ಮನದಲ್ಲಿ ಸೇವಾಲಾಲ್ ಅವರ ಆಚಾರ ವಿಚಾರಗಳನ್ನು ನಡೆನುಡಿಗಳು ತಿಳಿಸುವಂತೆ ಮಾಡಬೇಕು.
ಬಂಜಾರ ಸಮುದಾಯವನ್ನು ಮುಂದಿನ ಪೀಳಿಗೆಯವರಿಗೆ ಮಾದರಿಯಾಗಿ ತೋರಿಸುವ ಪ್ರಯತ್ನ ಮಾಡುವುದರಿಂದ ಸೇವಾಲಾಲ್ ಜನಾಂಗೀಯ ಸಮುದಾಯವನ್ನು ಉಳಿಸುವ ಪ್ರಯತ್ನ ನಾವೆಲ್ಲರೂ ಸೇರಿ ಮಾಡಬೇಕೆಂದು ಶ್ರೀ ಸರ್ದಾರ್ ಸೇವಾಲಾಲ್ ಸ್ವಾಮೀಜಿ ಹಿತನುಡಿಯನ್ನು ಹೇಳಿದರು.