Breaking
Mon. Dec 23rd, 2024

94ನೇ ಮಹಾ ಶಿವರಾತ್ರಿ ಮಹೋತ್ಸವದ ಪೂರ್ವಭಾವಿ ಸಭೆ ಶ್ರೀ ಕಬಿರಾನಂದಾಶ್ರಮ

ಚಿತ್ರದುರ್ಗ ನಗರದ  ಶ್ರೀ ಕಬಿರಾನಂದ ಮಠದ ಆವರಣದಲ್ಲಿ ಸುದ್ದಿಗೋಷ್ಟಿಯಲ್ಲಿ 94ನೇ ಮಹಾ ಶಿವರಾತ್ರಿ ಮಹೋತ್ಸವದ ಮಾಹಿತಿಯನ್ನು ನೀಡಿದ ಅವರು, ಮಾ.4ರ ಸಂಜೆ 6.30ಕ್ಕೆ ನಡೆಯುವ ಶಿವನಾಮ ಸಪ್ತಾಹದಲ್ಲಿ ವಿಜಯಪುರದ ಶ್ರೀ ಷಣ್ಮುಖಾರೂಢ ಮಠದ ಶಾಂತಾಶ್ರಮದ ಶ್ರೀ ಅಭಿನವ ಸಿದ್ದಾರೂಢ ಶ್ರೀಗಳು, ಹುಬ್ಬಳ್ಳಿಯ ಜಡೆ ಸಿದ್ದೇಶ್ವರ ಮಠದ ಶ್ರೀ ರಮಾನಂದ ಶ್ರೀಗಳು, ಬಾಗಲಕೋಟೆಯ ಆರಿಕೆರೆಯ ಶ್ರೀ ಕೌಧೀಶ್ವರ ಮಹಾ ಸಂಸ್ಥಾನದ ಶ್ರೀ ಮಾಧವಾನಂದ ಶ್ರೀಗಳು ಸಾನಿಧ್ಯವನ್ನು ವಹಿಸಲಿದ್ದಾರೆ. ಸಭಾಮಂಟಪವನ್ನು ರಾಜ್ಯ ಸರ್ಕಾರದ ಯೋಜನೆ ಮತ್ತು ಸಾಂಖ್ಯಿಕ ಖಾತೆ ಸಚಿವರಾದ ಡಿ.ಸುಧಾಕರ್ ಹಾಗೂ ಕಾರ್ಯಕ್ರಮವನ್ನು ಶಾಸಕರಾದ ವೀರೆಂದ್ರಕುಮಾರ್ ಉದ್ಘಾಟನೆ ಮಾಡಲಿದ್ದಾರೆ.

ವಿಧಾನ ಪರಿಷತ್ ಸದಸ್ಯರಾದ ಎನ್.ರವಿಕುಮಾರ್, ಕೆ.ಎಸ್.ನವೀನ್, 94ನೇ ಮಹಾ ಶಿವರಾತ್ರಿ ಸಪ್ತಾಹದ ಅಧ್ಯಕ್ಷರಾದ ಕೆ.ಸಿ.ನಾಗರಾಜು, ಜಿಲ್ಲಾ ರಕ್ಷಣಾಧಿಕಾರಿ ಧರ್ಮೇಂದರ್ ಕುಮಾರ್ ಮೀನಾ, ನಗರಾಭೀವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಬದರಿನಾಥ್, ಜಿ.ಟಿ.ಸುರೇಶ್, ಆಯುಕ್ತರಾದ ಸೋಮಶೇಖರ್, ಮರ್ಚೆಂಟ್ ಬ್ಯಾಂಕ್ ಅಧ್ಯಕ್ಷರಾದ ಲಕ್ಷ್ಮೀಕಾಂತರೆಡ್ಡಿ, ಬಿಜೆಪಿ ಮುಖಂಡರಾದ ಲಿಂಗಮೂರ್ತಿ, ಕಾಂಗ್ರೆಸ್ ಮುಖಂಡರಾದ ಎಂ.ಎ.ಸೇತುರಾಂ. ನಗರಸಭೆ ಮಾಜಿ ಅಧ್ಯಕ್ಷರಾದ ಬಿ.ಕಾಂತರಾಜ್, ಸೇರಿದಂತೆ ಇತರರು ಭಾಗವಹಿಸಲಿದ್ದಾರೆ. ಅಂಜನಾ ನ್ಯತ್ಯ ಕಲಾ ಕೇಂದ್ರದ ಶ್ರೀಮತಿ ನಂದಿನಿ ಶಿವಪ್ರಕಾಶ್ ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ, ಶ್ರೀ ವೆಂಕಟಾದ್ರಿ ಭಜನಾ ಮಂಡಳಿಯ ಶ್ರೀಮತಿ ವರಲಕ್ಷ್ಮೀ ಮತ್ತು ತಂಡದಿಂದ ಭಜನಾ ಕಾರ್ಯಕ್ರಮ ನಡೆಯಲಿದೆ.

ಮಾ.5 ರ ಸಂಜೆ 6.30ಕ್ಕೆ ನಡೆಯುವ ಶಿವನಾಮ ಸಪ್ತಾಹ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಶ್ರೀ ಕ್ಷೇತ್ರ ಅದಿಚುಂಚನಗಿರಿ ಮಹಾಸಂಸ್ಥಾನದ ಪೀಠಾಧ್ಯಕ್ಷರಾದ ಶ್ರೀ ಡಾ.ನಿರ್ಮಲಾನಂದ ಶ್ರೀಗಳು, ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಪ್ರಸನ್ನನಾಥ ಶ್ರೀಗಳು, ಶ್ರೀ ಶಿವಶರಣ ಮಾದಾರ ಚನ್ನಯ್ಯ ಗುರುಪೀಠದ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಶ್ರೀಗಳು ಹಾಗೂ ಬೀದರ್‌ನ ಮುಚಳಾಂಬದ ಶ್ರೀ ನಾಗಭೂಷಣ ಮಠದ ಶ್ರೀ ಪ್ರಣವಾನಂದ ಶ್ರೀಗಳು ವಹಿಸಲಿದ್ದಾರೆ. ಕೇಂದ್ರದ ಸಾಮಾಜಿಕ ನ್ಯಾಯ ಸಬಲೀಕರಣ ಸಚಿವರಾದ ಎ.ನಾರಾಯಣಸ್ವಾಮಿ, ಶಾಸಕರಾದ ಎಂ.ಚಂದ್ರಪ್ಪ, ಮಾಜಿ ಸಚಿವರಾದ ಹೆಚ್.ಆಂಜನೇಯ, ಶ್ರೀರಾಮುಲು, ಮಾಜಿ ಶಾಸಕರಾದ ಎಸ್.ಕೆ.ಬಸವರಾಜನ್, ಬಿಜೆಪಿ ಅಧ್ಯಕ್ಷರಾದ ಎ.ಮುರಳಿ, ಮುಖಂಡರಾದ ಅನಿತ್ ಕುಮಾರ್, ಮಹಮ್ಮದ್ ಪಾಷ, 94ನೇ ಮಹಾ ಶಿವರಾತ್ರಿ ಸಪ್ತಾಹದ ಅಧ್ಯಕ್ಷರಾದ ಕೆ.ಸಿ.ನಾಗರಾಜು, ವೀರಶೈವ ಬ್ಯಾಂಕ್ ಅಧ್ಯಕ್ಷರಾದ ಪಟೇಲ್ ಶಿವಕುಮಾರ್, ವಾಣೀಜ್ಯೋದ್ಯಮಿಗಳಾದ ಶಂಕರ್‌ಮೂರ್ತಿ, ಬಿ.ಟಿ.ಸಿದ್ದೇಶ್ವರ್, ಸಿದ್ಧಾಪುರದ ನಾಗಣ್ಣ, ಚಲನಚಿತ್ರ ನಟರಾದ ದೊಡ್ಡಣ್ಣ, ಜಿಲ್ಲಾಧಿಕಾರಿಗಳಾದ ವೆಂಕಟೇಶ್, ಕಸಾಪ ಅಧ್ಯಕ್ಷರಾದ ಶಿವಸ್ವಾಮಿ, ವಿಹಿಂಪನ ದಕ್ಷಿಣ ಪ್ರಾಂತದ ವಿಶೇಷ ಸಂಪರ್ಕ ಪ್ರಮುಖ್ ಮಂಜುನಾಥ್ ಸ್ವಾಮಿ, ವಕ್ಪ್ ಬೋರ್ಡ್ ಅಧ್ಯಕ್ಷರಾದ ಆನ್ವರ್ ಪಾಷ ಸೇರಿದಂತೆ ಇತರರು ಭಾಗವಹಿಸಲಿದ್ದಾರೆ. ಶ್ರೀ ಗೀತಾಗಾಯನ ಗಾನಯೋಗಿ ಸಂಗೀತ ಬಳಗದ ತೋಟಪ್ಪ ಉತ್ತಂಗೆ ಶ್ರೀಮತಿ ಕೋಕಿಲ ಇವರಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಶ್ರೀ ವಾರಿ ಭಜನಾ ಮಂಡಳಿಯ ಶ್ರೀಮತಿ ಸತ್ಯಪ್ರಭಾ ವಸಂತ್ ಕುಮಾರ್ ತಂಡದಿಂದ ಭಜನಾ ಕಾರ್ಯಕ್ರಮ ನಡೆಯಲಿದೆ.

ಮಾ.8 ಮಧ್ಯಾಹ್ನ 2.30ಕ್ಕೆ ನಗರದ ರಾಜ ಬೀದಿಗಳಲ್ಲಿ ಶ್ರೀ ಕಬೀರಾನಂದ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಶ್ರೀ ಮಠದ ಪೀಠಾಧ್ಯಕ್ಷರಾದ ಶ್ರೀ ಶಿವಲಿಂಗಾನಂದ ಶ್ರೀಗಳ ಪಲ್ಲಕ್ಕಿ ಉತ್ಸವ ಹಾಗೂ ಜನಪದ ಉತ್ಸವ ನಡೆಯಲಿದೆ, ಇದರ ಉದ್ಘಾಟನೆಯನ್ನು , 94ನೇ ಮಹಾ ಶಿವರಾತ್ರಿ ಸಪ್ತಾಹದ ಅಧ್ಯಕ್ಷರಾದ ಕೆ.ಸಿ.ನಾಗರಾಜು ನೇರವೇರಿಸಲಿದ್ದಾರೆ. ಇದರಲ್ಲಿ ಕೀಲುಕುದುರೆ, ತಮಟೆ, ಜಾಂಜ್ ನೃತ್ಯ, ಕಿನ್ನರಿಜೋಗಿ, ಲಂಬಾಣಿ ನೃತ್ಯ, ಖಾಸಾಬೇಡರಪಡೆ, ಡೊಳ್ಳು ಕುಣಿತ, ಕೋಲಾಟ ಭಜನೆ ಶಾರದ ಬ್ರಾಸ್ ಬ್ಯಾಂಡ್ ಸೇರಿದಂತೆ ವಿವಿಧ ಜಾನಪದ ಕಲಾತಂಡಗಳು ಭಾಗವಹಿಸಲಿವೆ.

ಗೋಷ್ಟಿಯಲ್ಲಿ ಕಾರ್ಯದರ್ಶಿ ಪ್ರಶಾಂತ್, ಸಮಿತಿಯ ಉಪಾಧ್ಯಕ್ಷರಾದ ಸಿದ್ದವ್ವನಹಳ್ಳಿ ಪರಮೇಶ್, ಸದಸ್ಯರಾದ ಓಂಕಾರ್, ಪ್ರತಾಪ್ ಜೋಗಿ, ಗೋಪಾಲಸ್ವಾಮಿ ನಾಯ್ಕ್, ನಾಗರಾಜ್ ಸಗಂ ಸತೀಶ್, ರುದ್ರೇಶ್, ನಿರಂಜನ, ತಿಪ್ಪೇಸ್ವಾಮಿ, ಗಣಪತಿ ಶಾಸ್ತ್ರಿ ಸೇರಿದಂತೆ ಇತರರು ಭಾಗವಹಿಸಿದ್ದರು.

Related Post

Leave a Reply

Your email address will not be published. Required fields are marked *