ಕೊಪ್ಪಳದ ಕನಕಗಿರಿ ಉತ್ಸವದಲ್ಲಿ ಸನ್ಮಾನ್ಯ ಶ್ರೀ ಸಿದ್ದರಾಮಯ್ಯ ಯೋಧ್ಯೆಯಲ್ಲಿ ಬಾಲರಾಮ ವಿಗ್ರಹವನ್ನು ಮಾತ್ರ ಪ್ರತಿಷ್ಠಾಪನೆ ಮಾಡಿದ್ದನ್ನು ಟೀಕಿಸಿದರು. ಅಂಜನಾದ್ರಿ ಅಭಿವೃದ್ಧಿಗೆ ನೂರು ಕೋಟಿ ನೀಡಿದ್ದೇವೆ. ರಾಮನನ್ನು ಅಷ್ಟೇ ಪೂಜಿಸುವುದಿಲ್ಲ, ಹನುಮನನ್ನು ನಾವು ಪೂಜಿಸುತ್ತೇವೆ. ಶ್ರೀರಾಮಚಂದ್ರನನ್ನು ಪ್ರತ್ಯೇಕ ನೋಡುವುದು ಸರಿಯಲ್ಲ. ಹೀಗಾಗಿ ಸೀತಾರಾಮ್ ಕಿ ಜೈ ಅಂತ ಹೇಳುತ್ತೇನೆ. ನಾವು ಅವಿಭಕ್ತ ಕುಟುಂಬದಲ್ಲಿ ಬಂದವರು. ಹೀಗಾಗಿ ಶ್ರೀರಾಮ ಚಂದ್ರನ ದೇವಸ್ಥಾನದಲ್ಲಿ ರಾಮನ ಜೊತೆ ಸೀತೆ, ಲಕ್ಷ್ಮಣ, ಹನುಮಂತನನ್ನು ನೋಡುತ್ತೇವೆ. ಯಾವುದಾದರೂ ದೇವಸ್ಥಾನದಲ್ಲಿ ಶ್ರೀರಾಮಚಂದ್ರ ಇರುವುದನ್ನು ನೋಡಿದ್ದೀರಾ? ನಾನಂತು ಯಾವ ದೇವಸ್ಥಾನದಲ್ಲಿ ನೋಡಿಲ್ಲ. ನಾನು ರಾಮಾಯಣ, ಮಹಾಭಾರತ ಓದಿಕೊಂಡಿದ್ದೇನೆ. ಇತಿಹಾಸವನ್ನು, ಪುರಾಣಗಳನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು ಎಂದರು.
ರಾಜ್ಯದ ಐತಿಹಾಸಿಕ ಸ್ಥಳಗಳಲ್ಲಿ ಕನಕಗಿರಿ ಕೂಡಾ ಒಂದು. ಪ್ರತಿಯೊಬ್ಬ ಮನುಷ್ಯ ತನ್ನ ಜೀವನವನ್ನು ಸಾರ್ಥಕ ಮಾಡಿಕೊಳ್ಳಬೇಕು. ಸಮಾಜದಲ್ಲಿ ಅಸಮಾನತೆ ಇದೆ. ಈ ಅಸಮಾನತೆ ಹೋಗಲಾಡಿಸಲು ನಮ್ಮ ಜೀವನದಲ್ಲಿ ಪ್ರಯತ್ನ ಮಾಡಿದೆವಾ ಅಂತ ನೋಡಿತೊಳ್ಳಬೇಕು. ನಮ್ಮ ಸಮಾಜವನ್ನು ಜಾತಿ ಜಾತಿಗಳ ಮೇಲೆ ಜೋಡಿಸಿ ಬಿಟ್ಟಿದ್ದಾರೆ. ಇದನ್ನೇ ಹಿಟ್ಲರ್ ಮತ್ತು ಮುಸಲೋನಿ ಮಾಡಿದ್ದರು. ಹಿಟ್ಲರ್, ಮುಸಲೋನಿ ಪಾಲೋ ಮಾಡೋರು ನಮ್ಮ ದೇಶದಲ್ಲಿ ಇದ್ದಾರೆ. ಜಗತ್ತಿನ ಜನ ತಿರುಗಿಬಿದ್ದಾಗ ಹಿಟ್ಲಾರ್ ಗುಂಡು ಹಾರಿಸಿಕೊಂಡು ಸತ್ತ. ಈ ಸ್ಥಿತಿ ನಮ್ಮ ದೇಶದಲ್ಲಿ ಆಗಬಾರದು. ಮನುಷ್ಯ ಮನುಷ್ಯರನ್ನು ಪ್ರೀತಿಸಬೇಕೆ ವಿನ, ದ್ವೇಷಿಸಬಾರದು ಎಂದರು.
ಮೀಸಲಾತಿ ನೀಡಿದವರ ಬಗ್ಗೆ ಗೊತ್ತಾಗಬೇಕು. ಅದನ್ನು ಬಿಟ್ಟು ಮೀಸಲಾತಿಯನ್ನೇ ವಿರೋಧ ಮಾಡಿದರೆ ಹೇಗೆ? ನಮಗೆ ನಮ್ಮ ಇತಿಹಾಸ ಗೊತ್ತಾಗಬೇಕು. ಇತಿಹಾಸ ಗೊತ್ತಾದ್ರೆ ಮಾತ್ರ ನಮ್ಮ ತಪ್ಪುಗಳನ್ನು ತಿದ್ದಿಕೊಂಡು ನಡೆಯಲು ಸಾಧ್ಯವಾಗುತ್ತದೆ ಎಂದರು.
ನನ್ನನ್ನು ಮಂತ್ರಿ ಮಾಡದಿದ್ದರೂ ಪರವಾಗಿಲ್ಲ, ಆದರೆ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿರಬೇಕು ಎಂದು ರಾಯರೆಡ್ಡಿ ಹೇಳಿದ್ದಾರೆ. ನೀವು ಮುಖ್ಯಮಂತ್ರಿ ಆಗಿರಬೇಕೆಂದು ನಾನು ಸಿದ್ದರಾಮಯ್ಯಗೆ ಹೇಳಿದ್ದೇನೆ. ಸತ್ಯವನ್ನು ಹೇಳಲು ನನಗೆ ಯಾರ ಮುಲಾಜಿಲ್ಲ ಎಂದರು.
ಇಡೀ ದೇಶದಲ್ಲಿ ಅತ್ಯಂತ ಆರ್ಥಿಕ ಶಿಸ್ತು ಇರೋದು ಕರ್ನಾಟಕದಲ್ಲಿ ಮಾತ್ರ. ಸಿದ್ದರಾಮಯ್ಯ ನಂತರ ಕರ್ನಾಟಕ ರಾಜಕೀಯ ಹೇಗಿರುತ್ತೆಂಬ ಆತಂಕವಿದೆ. ಕೇವಲ ಧರ್ಮ ಹಾಗೂ ಹಣದ ರಾಜಕೀಯ ಮಾಡುತ್ತಿದ್ದಾರೆ. ಗ್ಯಾರಂಟಿ ಯೋಜನೆಗಳು ನಿಲ್ಲಿಸುತ್ತಾರೆ ಅಂತಾ ಅಪಪ್ರಚಾರ ಮಾಡುತ್ತಿದ್ದಾರೆ. ಕೆಲವರು ಹೊಟ್ಟೆಕಿಚ್ಚಿನಿಂದ ಮಾತನಾಡುತ್ತಿದ್ದಾರೆ. ಹೊಟ್ಟೆಕಿಚ್ಚಿನಿಂದ ಮಾತಾಡುವವರಿಗೆ ತಲೆ ಇದೆಯೋ ಇಲ್ವೋ ಗೊತ್ತಿಲ್ಲ ಎಂದರು.