ವಿಧಾನಸೌಧದಲ್ಲಿ : “ಪಾಕಿಸ್ತಾನ್ ಜಿಂದಾಬಾದ್” ಘೋಷಣೆ ಕೂಗಿದ ಪ್ರಕರಣ ಸಂಬಂಧ ಎಫ್ಎಸ್ಎಲ್ ವರದಿ ಹೊರ ಬಿದ್ದಿದ್ದು ಪಾಕಿಸ್ತಾನ್ ಪರ ಘೋಷಣೆ ಕೂಗಿದ್ದು ದೃಢಪಟ್ಟಿದೆ. ನಾಸಿರ್ ಸಾಬ್ ಜಿಂದಾಬಾದ್ ಮತ್ತು ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದಾರೆ. FSLನಲ್ಲಿ ಪರಿಶೀಲನೆ ವೇಳೆ ಆಡಿಯೋ ಮತ್ತು ವಿಡಿಯೋವನ್ನು ಎಡಿಟ್ ಮಾಡಿ ಸೇರಿಸಲಾಗಿಲ್ಲ. ಪಾಕ್ ಪರ ಘೋಷಣೆ ಕೂಗಿದ್ದು ನಿಜ ಎಂದು ತಿಳಿದು ಬಂದಿದೆ.
ಎಫ್ಎಸ್ಎಲ್ ವರದಿ ಅನ್ವಯ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಪೊಲೀಸರ ತನಿಖೆ ವೇಳೆ ಕೆಲ ಅನುಮಾನಿತ ವ್ಯಕ್ತಿಗಳನ್ನು ವಶಕ್ಕೆ ಪಡೆಯಲಾಗಿತ್ತು. ಈಗಾಗಲೇ ವಶಕ್ಕೆ ಪಡೆದಿದ್ದ ಅನುಮಾನಿತ ವ್ಯಕ್ತಿಗಳ ವಾಯ್ಸ್ ರವಾನೆ ಮಾಡಲಾಗಿದೆ. ಅನುಮಾನಿತರ ಪೈಕಿ ಓರ್ವನನ್ನು ವಶಕ್ಕೆ ಪಡೆಯಲಾಗಿದೆ. ಎಫ್ಎಸ್ಎಲ್ನಿಂದ ವಾಯ್ಸ್ ಮ್ಯಾಚ್ ಮಾಡುವ ಪ್ರಕ್ರಿಯೆ ನಡೆಯುತ್ತಿದೆ. ವಾಯ್ಸ್ ಮ್ಯಾಚ್ ಆದ ಕೂಡಲೇ ಅಧಿಕೃತವಾಗಿ ಆರೋಪಿಯನ್ನು ಬಂಧಿಸಲು ತಯಾರಿ ನಡೆದಿದೆ. 7 ಮಂದಿ ವಿಚಾರಣೆ, 19 ಮಂದಿ ಬಾಕಿ.
ವಿಧಾನಸೌಧ ಠಾಣೆ ಪೊಲೀಸರು ಈವರೆಗೆ 7 ಮಂದಿಯ ವಿಚಾರಣೆ ನಡೆಸಿದ್ದಾರೆ. ಮೂವರ ವಾಯ್ಸ್ ಸ್ಯಾಂಪಲ್ FSLಗೆ ರವಾನಿಸಿದ್ದಾರೆ. ವಿಚಾರಣೆಗೆ ಒಳಪಟ್ಟ ಎಲ್ಲರೂ ಪಾಕ್ ಪರ ಘೋಷಣೆ ಕೂಗಿಲ್ಲವೆಂದು ಹೇಳಿಕೆ ನೀಡಿದ್ದಾರೆ. ಪೊಲೀಸರು 26 ಮಂದಿಯ ಪಟ್ಟಿ ಮಾಡಿದ್ದು, ಇನ್ನೂ 19 ಜನರ ವಿಚಾರಣೆ ನಡೆಯುತ್ತಿದೆ.
“ವರದಿ ಬಂದರೂ ಸರ್ಕಾರ ಬಹಿರಂಗ ಪಡಿಸಿಲ್ಲ”
ಇನ್ನು ಈ ಹಿಂದೆ ಎಫ್ಎಸ್ಎಲ್ ವರದಿ ಬಂದರೂ ಸರ್ಕಾರ ವರದಿಯನ್ನು ಬಹಿರಂಗ ಪಡಿಸಿರಲಿಲ್ಲ. ಹೀಗಾಗಿ ಬಿಜೆಪಿ ಕಿಡಿಕಾರಿತ್ತು. ರಾಜ್ಯ ಸರ್ಕಾರದ ವಿರುದ್ಧ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಗಂಭೀರ ಆರೋಪ ಮಾಡಿದ್ರು. FSL ವರದಿಯಲ್ಲಿ ಪಾಕ್ ಪರ ಘೋಷಣೆ ಕೂಗಿದ್ದು ಗೊತ್ತಾಗಿದೆ. ರಾತ್ರಿ ವರದಿ ಬಂದರೂ ರಾಜ್ಯ ಸರ್ಕಾರ ಇನ್ನೂ ಬಹಿರಂಗ ಪಡಿಸಿಲ್ಲ ಎಂದು ಆಕ್ರೋಶ ಹೊರ ಹಾಕಿದ್ದರು.
ಪಾಕ್ ಪರ ಘೋಷಣೆ ಕೂಗಿದವರನ್ನ ರಕ್ಷಿಸುತ್ತಿದ್ದಾರೆ
ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದವರನ್ನು ರಕ್ಷಣೆ ಮಾಡಿದ್ದಾರೆ ಅಂತಾ ಮಾಜಿ ಸಚಿವ ಆರಗ ಜ್ಞಾನೇಂದ್ರ ಆರೋಪಿಸಿದ್ದರು. FSL ವರದಿ ಬರಲಿ ಅಂತಿದ್ದಾರೆ. ಒಬ್ಬರ ಕೊಲೆ ಆಗ್ತದೆ, ಆಗ ಪೋಸ್ಟ್ ಮಾರ್ಟಂ ವರದಿ ಬರಲಿ ಅಂತಾ ಕಾಯ್ತಾರಾ ಅರೆಸ್ಟ್ ಮಾಡ್ತಾರೆ ಎಂದು ಪ್ರಶ್ನಿಸಿದ್ದರು. ಇನ್ನು ಸರ್ಕಾರದಿಂದ ಯಾವುದೇ ತರದ ಕ್ರಮ ಕೈಗೊಂಡಿಲ್ಲ , ಇವರ ಪ್ರತಿಕ್ರಿಯೆಗೆ ಯಾವುದೇ ಉತ್ತರ ನೀಡಿಲ್ಲ ಕಾದು ನೋಡಬೇಕು…