ಬೆಂಗಳೂರು : ರಾಜ್ಯದ ವಿವಿಧೆಡೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ)ಯ ಬಸ್‌ಗಳ ಕೊರತೆ ಇದೆ. ಇದರಿಂದ ರಾಜ್ಯದಾದ್ಯಂತ ಪ್ರಯಾಣಿಕರ ಜೊತೆಗೆ ವಿದ್ಯಾರ್ಥಿಗಳು ಅದರಲ್ಲೂ ಗ್ರಾಮೀಣ ಭಾಗದವರು ಹೆಚ್ಚು ತೊಂದರೆ ಅನುಭವಿಸುತ್ತಿದ್ದಾರೆ.
ರಾಜ್ಯ ಕಾಂಗ್ರೆಸ್ ಸರ್ಕಾರ ಶಕ್ತಿ ಯೋಜನೆ ಜಾರಿ ಮಾಡಿರುವ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ ಹೀಗಾಗಿ ಮುಂದಿನ 12 ತಿಂಗಳಲ್ಲಿ ಸುಮಾರು 600 ಹೊಸ ಬಸ್ಸುಗಳನ್ನು ಸೇವೆಗೆ ಸೇರಿಸಲು ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ 2006 ಬಸುಗಳನ್ನು ಖರೀದಿಸಲು ಮಂಜುರಾತಿ ನೀಡಲಾಗಿದ್ದು, ಅದರಲ್ಲಿ ನೂರು ಪಲ್ಲಕ್ಕಿ ಬಸ್ ಗಳು ಮತ್ತು ನಾನ್ ಎಸಿ ಬಸುಗಳು 120 ಹಾಗೂ ಉತ್ತರ ಕರ್ನಾಟಕ 40 ಎಸಿ ಬಸ್ಸುಗಳನ್ನು ಖರೀದಿಸಲು ಅನುಮೋದನೆ ನೀಡಲಾಗಿದೆ.
ಕೆಎಸ್‌ಆರ್‌ಟಿಸಿ ನಿಗಮದಲ್ಲಿ ಸಿಬ್ಬಂದಿ ಕೊರತೆ , ಸಾಮಾನ್ಯ ಬಸ್‌ಗಳ ಅಲಭ್ಯತೆ ಹಾಗೂ ಅಸಮರ್ಪಕ ಸೇವೆಯನ್ನು ಹೆಚ್ಚಾಗ ಗ್ರಾಮೀಣ ಭಾಗಗಳಲ್ಲಿ ಕಾಣಬಹುದಾಗಿದೆ. ಶಿಕ್ಷಣ ಸಂಸ್ಥೆಗಳಿರುವ ನಿಗದಿತ ಸ್ಥಳಗಳಲ್ಲಿ ಬಸ್‌ಗಳನ್ನು ನಿಲುಗಡೆ ಮಾಡದ ಹಿನ್ನೆಲೆಯಲ್ಲಿ ಕೆಎಸ್ಆರ್‌ಟಿಸಿ ಬಸ್ ಸಿಬ್ಬಂದಿ ವಿರುದ್ಧ ಸಾಕಷ್ಟು ದೂರುಗಳು ಕೇಳಿ ಬಂದಿವೆ.
ಅಲ್ಲದೇ ಪಾಸ್ ಹೊಂದಿರುವ ವಿದ್ಯಾರ್ಥಿಗಳನ್ನು ಕೆಲವು ನಿರ್ವಾಹಕರು ಬಸ್ ಒಳಗೆ ಹತ್ತಲು ಬಿಡದಿರುವ ಪ್ರಸಂಗಗಳು ನಡೆದಿವೆ. ನಗದು ನೀಡಿ ಟಿಕೆಟ್ ಪಡೆಯುವ ಪ್ರಯಾಣಿಕರಿಗೆ ಸಿಬ್ಬಂದಿ ಆದ್ಯತೆ ನೀಡುತ್ತಾರೆ.
ಚಳ್ಳಕೆರೆ ಮತ್ತು ಚಿತ್ರದುರ್ಗ, ಕುಣಿಗಲ್ ಮತ್ತು ತುಮಕೂರು, ರಾಮನಗರ ಮತ್ತು ಬಿಡದಿ, ಅರಸೀಕೆರೆ ಮತ್ತು ಭದ್ರಾವತಿ, ತುರುವೇಕೆರೆ ಮತ್ತು ತಿಪಟೂರು, ಮೈಸೂರು ಮೂಲಕ ನಂಜನಗೂಡಿನಿಂದ ಗುಂಡ್ಲುಪೇಟೆ, ಮೈಸೂರು ಮತ್ತು ಚಾಮರಾಜನಗರ, ಮೈಸೂರು ಮತ್ತು ಮಳವಳ್ಳಿ ಮತ್ತು ಮಂಗಳೂರು ಮತ್ತು ಪುತ್ತೂರು ನಡುವೆ ಸಂಚಾರಕ್ಕೆ ಕೆಎಸ್‌ಆರ್‌ಟಿಸಿ ಬಸ್‌ಗಳಿಗೆ ಭಾರಿ ಬೇಡಿಕೆ ಇದೆ.
ಈ ಕೊರತೆಯನ್ನು ನೀಗಿಸಲು ರಾಜ್ಯ ಸರ್ಕಾರವು ಎಚ್ಚೆತ್ತುಕೊಂಡು ಹೊಸ ಬಸ್ಸುಗಳನ್ನು ಖರೀದಿಸಲು ಸಂಪುಟದಲ್ಲಿ ಅನುಮೋದನೆ ದೊರೆತಿದೆ ಇದರಿಂದ ಪ್ರಯಾಣಿಕರು ಸುರಕ್ಷಿತವಾಗಿ ಬಸ್ಸಿನ ತೊಂದರೆ ಇಲ್ಲದೆ ಪ್ರಯಾಣಿಸಲು ಅನುಕೂಲವಾಗುತ್ತದೆ ಎಂದು ತಿಳಿಸಿದರು.