ನ ಟ ವಸಿಷ್ಠ ಸಿಂಹ (Vasista Simha) ಇದೀಗ ಕನ್ನಡದ ಜೊತೆ ಪರಭಾಷೆಗಳತ್ತ ಮುಖ ಮಾಡಿದ್ದಾರೆ. ಮಿಲ್ಕಿ ಬ್ಯುಟಿ ತಮನ್ನಾ ಭಾಟಿಯಾ (ತಮನ್ನಾ ಭಾಟಿಯಾ) ನಟನೆಯ ಸಿನಿಮಾದಲ್ಲಿ ವಸಿಷ್ಠ ಸಿಂಹ ಕೂಡ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಮೂಲಕ ಅಭಿಮಾನಿಗಳಿಗೆ ನಟ ಸಿಹಿಸುದ್ದಿ ಕೊಟ್ಟಿದ್ದಾರೆ.
ವಾರಣಾಸಿ ಕಾಶಿಯಲ್ಲಿ ‘ಒಡೆಲಾ 2’ (ಒಡೆಲಾ 2) ಚಿತ್ರದ ಮುಹೂರ್ತ ಅದ್ಧೂರಿಯಾಗಿ ನಡೆದಿದೆ. ತಮನ್ನಾ ಭಾಟಿಯಾ ಲೀಡ್ ರೋಲ್‌ನಲ್ಲಿ ಕಾಣಿಸಿಕೊಳ್ತಿದ್ದು, ವಸಿಷ್ಠ ಸಿಂಹ ಕೂಡ ಈ ಚಿತ್ರದ ಭಾಗವಾಗಿದ್ದಾರೆ. ಒಡೆಲಾ 2ಗೆ ಕಾಂತಾರ ಚಿತ್ರಕ್ಕೆ ಸಂಗೀತ ಸಂಯೋಜನೆ ಕನ್ನಡದ ಪ್ರತಿಭೆ ಅಜನೀಶ್ ಲೋಕನಾಥ್ ಅವರು ಈ ಸಿನಿಮಾಗೂ ಸಂಗೀತ ಸಂಯೋಜನೆ ಮಾಡಲಿದ್ದಾರೆ. ಅಂದಹಾಗೆ ಈ ಸಿನಿಮಾ ಬಹುಭಾಷೆಯಲ್ಲಿ ಮೂಡಿ ಬರಲಿದೆ.
ಸದ್ಯ ‘ಒಡೆಲಾ 2’ ಚಿತ್ರದ ಮುಹೂರ್ತ ಕಾರ್ಯಕ್ರಮದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ವಸಿಷ್ಠ ಸಿಂಹ ನಟಿಸುತ್ತಿರುವ ‘ಒಡೆಲಾ 2’ ಮುಹೂರ್ತ ಕಾರ್ಯಕ್ರಮದಲ್ಲಿ ಪತ್ನಿ ಹರಿಪ್ರಿಯಾ ಕೂಡಿ ಚಿತ್ರತಂಡಕ್ಕೆ ಶುಭಹಾರೈಸಿದ್ದಾರೆ.
ತಮನ್ನಾ ಭಾಟಿಯಾ ಜೊತೆ ಮೊದಲ ಬಾರಿಗೆ ವಸಿಷ್ಠ ನಟಿಸುತ್ತಿರುವ ಕಾರಣ ಅಭಿಮಾನಿಗಳಿಗೆ ಚಿತ್ರದ ಬಗ್ಗೆ ಕುತೂಹಲ ಕೆರಳಿಸಿದೆ. ವಸಿಷ್ಠ ಅವರ ಪಾತ್ರ ಮತ್ತು ಚಿತ್ರದ ಕಥೆಯ ಬಗ್ಗೆ ಫ್ಯಾನ್ಸ್‌ಗೆ ಕೌತುಕ ಮೂಡಿಸಿದೆ.