ಶಿವರಾತ್ರಿಯಂದು ಬೇಸಿಗೆಯ ಧಗೆಯಿಂದ ಮುಕ್ತಿ ಪಡೆಯಲು ಉತ್ತಮವಾದ ಸಲಹೆ ನಿಮಗಾಗಿ ಇಲ್ಲಿದೆ “ರಾಗಿ ಮಜ್ಜಿಗೆ” ತುಂಬಾ ಬೇಸಿಗೆಯ ಧಗೆ ಹೆಚ್ಚಾಗುತ್ತದೆ ಸ್ವಲ್ಪ ಹೊರಗಡೆ ಸುತ್ತಾಡಿ ಬಂದರೆ ತುಂಬಾನೆ ಸುಸ್ತು ಅನಿಸುತ್ತದೆ. ಈ ಸುಸ್ತು ನಿವಾರಣೆಗೆ ಒಂದು ಪಾನೀಯ ಇದ್ದರೆ ಸಾಕು ರಾಗಿ ಹಾಗೂ ಮಜ್ಜಿಗೆ ಹಾಕಿ ಮಾಡುವ ತಂಪಾದ ಪಾನೀಯ ಇದಾಗಿದೆ, ಇದನ್ನು ರಾಗಿ ಮಜ್ಜಿಗೆ ಎಂದು ಕರೆಯುತ್ತಾರೆ ಇದನ್ನು ಕುಡಿದಾಗ ಬಾಯಾರಿಕೆ, ದೂರವಾಗುವುದು ಹೊಟ್ಟೆ ತುಂಬುವುದು ದೇಹಕ್ಕೆ ಚೈತನ್ಯ ಹೆಚ್ಚಿಸುವುದು.
ಬೇಕಾಗುವ ಸಾಮಗ್ರಿಗಳು
ನೀರು 4 ಗ್ಲಾಸ್ ರಾಗಿ ಕೊಡಿ ಎರಡು ಚಮಚ ಮೊಸರು 1/4 ಲೇಟರ್ ರುಚಿಗೆ ತಕ್ಕಷ್ಟು ಉಪ್ಪು, ಜೀರಿಗೆ ಪುಡಿ ಒಂದುವರೆ ಚಮಚ ಸ್ವಲ್ಪ ಕೊತ್ತಂಬರಿ ಸೊಪ್ಪು.
ಮಾಡುವ ವಿಧಾನ
ಅರ್ಧ ಬೌಲ್ ನೀರು ತೆಗೆದುಕೊಳ್ಳಿ ಅದಕ್ಕೆ ಸ್ವಲ್ಪ ರಾಗಿ ಪುಡಿ ಹಾಕಿ ಮಿಕ್ಸ್ ಮಾಡಿ, ರಾಗಿ ಗಂಟು ಗಂಟಾಗಿ ಇರಬಾರದು ನಂತರ ಮತ್ತೆ ಅರ್ಧ ಗ್ಲಾಸ್ ನೀರು ಸೇರಿಸಿ ನಂತರ ರಾಗಿ ಮಿಕ್ಸ್ ಮಾಡಿದ ನೀರನ್ನು ಚಿಕ್ಕ ಫ್ಯಾನ್ ಗೆ ಹಾಕಿ ಬೆರೆಸಿ ಸಾಧಾರಣ ಉರಿಯಲ್ಲಿ ಸೋಪ್ ನಿಂದ ತಿರುಗಿಸುತ್ತಾ ಬೇಯಿಸಿ. ನಂತರ ರಾಗಿ ಗಟ್ಟಿಯಾಗುತ್ತಾ ಬರುವಾಗ ಸ್ಟವ್ ಆಫ್ ಮಾಡಿ ಅದಕ್ಕೆ ಮೊಸರನ್ನು ಒಂದು ಪಾತ್ರೆಗೆ ಹಾಕಿ ಮತ್ತೆ ಅದಕ್ಕೆ ನೀರು ಹಾಕಿ ರಾಗಿ ಮಿಕ್ಸ್ ಹಾಕಿ ನೀರು ಜೀರಿಗೆ ಪುಡಿ ಹಾಕಿ ಮಿಕ್ಸ್ ಮಾಡಿ, ಸೌಟಿನಿಂದ ಕಲಸಿ ನಂತರ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ ಈಗ ರೆಡಿಯಾಗಿದೆ, ರಾಗಿ ಮಜ್ಜಿಗೆ ಮತ್ತು ಇದನ್ನು ಒಗ್ಗರಣೆ ಕೂಡ ಹಾಕಬಹುದು.
ರಾಗಿ ಮಜ್ಜಿಗೆ ಕುಡಿಯುವುದರಿಂದ ಆಗುವ ಪ್ರಯೋಜನ
ಬೇಸಿಗೆಗೆ ಅತ್ಯುತ್ತಮವಾದ ಪಾನೀಯವಾಗಿದೆ ರಾಗಿ ಹಾಗೂ ಮಜ್ಜಿಗೆ ದೇಹವನ್ನು ತಂಪು ಮಾಡುತ್ತದೆ. ರಾಗಿ ದೇಹಕ್ಕೆ ಶಕ್ತಿಯನ್ನು ತುಂಬುವುದು, ಬೇಸಿಗೆಯಲ್ಲಿ ತುಂಬಾನೇ ಬಯಕೆ ಆಗುವುದನ್ನು ತಡೆಗಟ್ಟುತ್ತದೆ. ದೇಹಕ್ಕೆ ಶಕ್ತಿ ಒದಗಿಸುವ ಪಾನೀಯವಾಗಿದೆ. ಇತ್ತೀಚಿಗೆ ಕಲಬೆರಕೆ ಪಾನೀಯಗಳು ಹೆಚ್ಚಾಗಿ ಮಾರುಕಟ್ಟೆಗೆ ಬರುತ್ತಿವೆ, ಇವುಗಳನ್ನು ನಾವು ಸೇವನೆ ಮಾಡುವುದರಿಂದ ಆರೋಗ್ಯಕ್ಕೆ ಹಾನಿ ಉಂಟು ಮಾಡುವುದರ ಜೊತೆಗೆ ನಮ್ಮ ದೇಹವನ್ನು ದಿನ ಕ್ಷೀಣಿಸುತ್ತಾ ಬರುತ್ತದೆ. ಆದ್ದರಿಂದ ನಾವು ಮನೆಯಲ್ಲಿಯೇ ಇಂತಹ ಉಪಯುಕ್ತವಾದ ಪಾನೀಯಗಳನ್ನು ತಯಾರಿಸಿ ಕುಡಿಯುವುದರಿಂದ ನಮ್ಮ ಆರೋಗ್ಯವನ್ನು ನಾವು ಕಾಪಾಡಿಕೊಳ್ಳಬಹುದು.